ಇಸ್ರೋ ಕರ್ನಾಟಕದ ಹೆಮ್ಮೆ… ಖಾಸಗೀಕರಣ ಸಲ್ಲದು : ಡಿ.ಕೆ.ಶಿವಕುಮಾರ್

1 min read
D K Shivakumar

ಇಸ್ರೋ ಕರ್ನಾಟಕದ ಹೆಮ್ಮೆ… ಖಾಸಗೀಕರಣ ಸಲ್ಲದು : ಡಿ.ಕೆ.ಶಿವಕುಮಾರ್ DK Shivakumar saaksha tv

ಬೆಂಗಳೂರು : ಈಎಸ್ ಆರ್ ಒ ಕರ್ನಾಟಕದ ಹೆಮ್ಮೆ, ರಾಜ್ಯದಲ್ಲಿ ಸಂಸ್ಥೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ಕಾರಣಕ್ಕೂ ಮಹತ್ವಾಕಾಂಕ್ಷಿ ಮಾನವ ಸಹಿತ ಗಗನಯಾನ ಯೋಜನೆಯ ಸ್ಥಳಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಎಸ್ ಆರ್ ಒ ಕರ್ನಾಟಕದ ಹೆಮ್ಮೆ, ರಾಜ್ಯದಲ್ಲಿ ಸಂಸ್ಥೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಯಾವುದೇ ಕಾರಣಕ್ಕೂ ಮಹತ್ವಾಕಾಂಕ್ಷಿ ಮಾನವ ಸಹಿತ ಗಗನಯಾನ ಯೋಜನೆಯ ಸ್ಥಳಾಂತರಕ್ಕೆ ಅವಕಾಶ ನೀಡುವುದಿಲ್ಲ.

ಇದು ರಾಜ್ಯದ ಸ್ವಾಭಿಮಾನದ ವಿಚಾರ. ಯೋಜನೆ, ಸಂಸ್ಥೆಯ ಸ್ಥಳಾಂತರ, ಖಾಸಗೀಕರಣದ ಪ್ರಯತ್ನವನ್ನು ಸರ್ಕಾರ ಕೂಡಲೇ ಕೈಬಿಡಬೇಕು.

DK Shivakumar saaksha tv

ಇಸ್ರೋವನ್ನು ಖಾಸಗಿರಣಗೊಳಿಸುವ ಯೋಜನೆ ನಡೆಸಲಾಗಿದೆ. ಮಾನವಸಹಿತ ಗಗನಯಾನ ಯೋಜನೆಯನ್ನು ಗುಜರಾತಿಗೆ ಸ್ಥಳಾಂತರಿಸಲು ಇಸ್ರೋದಲ್ಲಿ ಮಾನವ ಸಂಪನ್ಮೂಲ ನೇಮಕವನ್ನು ಸ್ಥಗಿತಗೊಳಿಸಲಾಗಿದೆ.

ಇಸ್ರೋ ನಮ್ಮ ಹೆಮ್ಮೆ, ಕನ್ನಡಿಗರು ಇದಕ್ಕೆ ಅವಕಾಶ ನೀಡರು. ಈ ವಿಚಾರವಾಗಿ ನಾವು ಸುಮ್ಮನೆ ಕೂರುವುದಿಲ್ಲ, ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಅಲ್ಲದೇ ಆಯುಷ್ಮಾನ್ ಭಾರತ್’ ಜಗತ್ತಿನ ಅತಿದೊಡ್ಡ ಆರೋಗ್ಯ ರಕ್ಷಾಕವಚ ಎಂದು ಬಿಜೆಪಿ ಸರ್ಕಾರ ಮೀಸೆ ತಿರುವುತ್ತಿದೆ. ಆದರೆ ಕೋವಿಡ್ ಚಿಕಿತ್ಸೆ ಪಡೆಯಲು ಈ ವಿಮೆ ನೆರವಾಗಲಿಲ್ಲ, ಚಿಕಿತ್ಸೆಗೆ ಭರಿಸಿದ ಹಣ ವಾಪಸ್ ಬರಲಿಲ್ಲ, ಸಾಂಕ್ರಾಮಿಕದ ಸಂದರ್ಭದಲ್ಲಿ ಇದರಿಂದಾದ ಉಪಯೋಗವಾದರೂ ಏನು? ಈ ಯೋಜನೆ ಊಟಕ್ಕಿಲ್ಲದ ಉಪ್ಪಿನಕಾಯಂತಾಗಿದೆ ಎಂದು ಟ್ರಬಲ್ ಶೂಟರ್ ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd