ಬೆಂಗಳೂರು : ಇಂದು ಬಹಿರಂಗ ಚುನಾವಣಾ ಪ್ರಚಾರಕ್ಕೆ ಇಂದು ಕಡೆ ದಿನ ಹಿನ್ನೆಲೆ ಮೂರು ಪಕ್ಷಗಳ ನಾಯಕರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ರಾಜರಾಜೇಶ್ವರಿ ನಗರದ ಜೆಪಿ ಪಾರ್ಕ್ ನ ಬರೇಕ ಚರ್ಚ್, ಮತ್ತಿಕೆರೆ ಭಾಗಗಳಲ್ಲಿ ಮತಬೇಟೆ ನಡೆಸಿದರು. ಅಲ್ಲದೆ ಅಲ್ಲಿದ್ದ ಚರ್ಚ್, ಮಸೀದಿ, ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಏನವಚನದಲ್ಲೇ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದರು.
ಪಾಪ ಅವನಿಗೆ ಏನೋ ಹೆಚ್ಚು ಕಡಿಮೆ ಆಗಿದೆ, ಟೆನ್ಷನ್‍ನಲ್ಲಿದ್ದಾನೆ. ಅದಕ್ಕೆ ಏನಾದ್ರೂ ಮಾತನಾಡ್ಕೊಂಡು ಹೋಗ್ಲಿ. ಅವರ ಪಾರ್ಟಿಲಿ ಬೇಕಾದಷ್ಟು ಪ್ರಾಬ್ಲಂ ಇದೆ. ಅವನನ್ನು ಮಂತ್ರಿ ಮಾಡ್ತೀನಿ ಎಂದು ಸಿಎಂ ಹೇಳಿದ್ಮೇಲೆ, ಹಳಬರಿಗೆ ಬಹಳ ಸಂಕಟ ಶುರುವಾಗಿದೆ.
ಅದಕ್ಕೆ ಅವರೆಲ್ಲ ಮುಂದಿನ ದಿನಗಳಲ್ಲಿ ಅವರದ್ದೇ ತೀರ್ಮಾನ ಮಾಡ್ತಾರೆ. ಕೇಸ್ ಹಾಕಿಸಿಕೊಂಡಿರುವವರಿಗೆ ಎಲ್ಲವೂ ಗೊತ್ತಿದೆ. ದುಡ್ಡು ಹಂಚಿಕೆ ಬಗ್ಗೆ ನಮ್ಮತ್ರ ಎಲ್ಲಾ ಕ್ಯಾಸೆಟ್‍ಗಳಿವೆ. ನಿನ್ನೆ ರಾತ್ರಿಯಿಂದ 20 ವಿಡಿಯೋ ಮಾಡಿದ್ದೇವೆ.
ಇದನ್ನೂ ಓದಿ : ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯನವರದ್ದು ನಾಯಿಪಾಡು : ಕಟೀಲ್ ವ್ಯಂಗ್ಯ
ಮೊದಲು ಪೊಲೀಸರು ಕ್ರಮ ತೆಗೆದುಕೊಳ್ಳಲಿ ಎಂದು ಹೊರಗಡೆಯಿಂದ ಬಂದು ದುಡ್ಡು ಹಂಚುತ್ತಿದ್ದಾರೆ ಎಂಬ ಮುನಿರತ್ನ ಆರೋಪಕ್ಕೆ ತಿರುಗೇಟು ನೀಡಿದರು.
ಆರ್.ಆರ್ ನಗರವನ್ನು ಮತ್ತೊಂದು ಡಿಜೆ ಹಳ್ಳಿ ಮಾಡ್ತಾರೆ ಎಂಬ ಮುನಿರತ್ನ ಹೇಳಿಕೆಗೆ ಕುರಿತು ಮಾತನಾಡಿ, ಅವನ ಬಾಯಲ್ಲಿ ಎಂತೆಂಥ ಮಾತುಗಳು ಬರ್ತಿವೆ ನೋಡಿ.
ಈ ಕ್ಷೇತ್ರಕ್ಕೆ ಅವಮಾನ ಆಗ್ತಿದೆ, ಇದಕ್ಕೆ ಮುಖ್ಯಮಂತ್ರಿಗಳು ಉತ್ತರ ಕೊಡ್ಬೇಕು. ಈ ಕ್ಷೇತ್ರದ ಗೌರವ ಉಳಿಸಬೇಕು, ಶಾಂತಿ ಕಾಪಾಡಬೇಕು ಎಂದು ಒತ್ತಾಯಿಸಿದರು.
ಮುನಿರತ್ನ ಭ್ರಷ್ಟ ಅಂತಾ ನನಗೆ ಮೊದಲೇ ಗೊತ್ತಿರಲಿಲ್ಲ. ಲೇಟಾಗಿ ಗೊತ್ತಾಯ್ತು. ಈ ಸಿನಿಮಾ ಡೈಲಾಗ್ ಸಿನಿಮಾದಲ್ಲಿ ಮಾತ್ರ ಅಂತಾ ತಿಳ್ಕೊಂಡಿದ್ವಿ, ನಿಜ ಜೀವನದಲ್ಲಿ ಇದೆ ಅಂತಾ ಅನ್ಕೊಂಡಿರಲಿಲ್ಲ ಎಂದು ಮುನಿರತ್ನ ಅವರ ಹೇಳಿಕೆಗಳಿಗೆ ಟಾಂಗ್ ನೀಡಿದರು.
ಇದೇ ವೇಳೆ ಸಂಪತ್ ರಾಜ್ ನಾಪತ್ತೆ ವಿಚಾರವಾಗಿ ಮಾತನಾಡಿ, ಸಂಪತ್ ರಾಜ್ ಎಲ್ಲೂ ಹೋಗಿಲ್ಲ. ಕೊರೊನಾ ಕಾರಣ ವೈದ್ಯರು ರೆಸ್ಟ್? ಮಾಡಲು ಹೇಳಿದ್ದಾರೆ. ಚುನಾವಣೆ ಇರುವುದರಿಂದ ಅಧಿಕಾರಿಗಳು ಬೇಕಂತಲೇ ಏನೇನೋ ಹೇಳಿಕೆ ಕೊಡುತ್ತಿದ್ದಾರೆ ಎಂದರು.
ಇದನ್ನೂ ಓದಿ : ಆರ್.ಆರ್ ನಗರ, ಶಿರಾ ಉಪಸಮರ: ಸಂಜೆ ಬಹಿರಂಗ ಮತಬೇಟೆ ಆಟಕ್ಕೆ ತೆರೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel