ಬೆಂಗಳೂರು : ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದೆ ತಡ ಬಿಜೆಪಿಯಲ್ಲಿ ಟಾಕ್ ವಾರ್ ಶುರುವಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಕೇಂದ್ರ ನೀಡಿದ ಶಾಕ್ ಗೆ ರಾಜ್ಯ ನಾಯಕರು ತತ್ತರಿಸಿದ್ದಾರೆ. ಇದರಿಂದಾಗಿ ಬಿಜೆಪಿ ರಾಜ್ಯ ನಾಯಕರಿಗೆ ಮತ್ತು ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಅಂದಿನ ರೆಬಲ್ಸ್ ಶಾಸಕರಿಗೆ ಆತಂಕ ಹೆಚ್ಚಾಗಿದೆ.
ಮೈತ್ರಿ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ, ಹಳ್ಳಿ ಹಕ್ಕಿ ಹೆಚ್.ವಿಶ್ವನಾಥ್ ಅಂಡ್ ಟೀಮ್ ಮತ್ತೆ ಅಧಿಕಾರ ಪಡೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹಾಗಾಗಿ ವಿಧಾನ ಪರಿಷತ್ ಚುನಾವಣೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ಆರ್.ಶಂಕರ್, ಎಂ.ಟಿ.ಬಿ ನಾಗರಾಜು ಮತ್ತು ಹೆಚ್.ವಿಶ್ವನಾಥ್ ಬಿ.ಎಸ್.ಯಡಿಯೂರಪ್ಪನವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ಮೂವರು ಜೊತೆ ಸಚಿವ ಎಸ್.ಟಿ.ಸೋಮಶೇಖರ್ ಸಹ ಬಿಎಸ್ ವೈ ಮಾತು ಕೊಟ್ಟಂತೆ ನಡೆದುಕೊಳ್ಳುತ್ತಾರೆ. ಹಾಗಾಗಿ ಹೆಚ್.ವಿಶ್ವನಾಥ್, ಆರ್.ಶಂಕರ್, ಎಂ.ಟಿ.ಬಿ ನಾಗರಾಜು ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಡ ಹಾಕಿದ್ದರು.
ಇಂತಹ ಸಮಯದಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ, ಕಳೆದ ಉಪ ಚುನಾವಣೆಯಲ್ಲಿ ಹೆಚ್.ವಿಶ್ವನಾಥ್ ಮತ್ತು ಎಂ.ಟಿ.ಬಿ. ನಾಗರಾಜು ಅವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ ಅವರು ಸೋಲು ಕಂಡಿದ್ದಾರೆ. ಇನ್ನೂ ವಿಧಾನ ಪರಿಷತ್ ನಲ್ಲಿ ಟಿಕೆಟ್ ನೀಡುತ್ತೇವೆ ಎಂದು ಭರವಸೆ ನೀಡಿರಲಿಲ್ಲ ಎಂದು ಹೊಸ ಬಾಂಬ್ ಹಾಕಿದ್ದಾರೆ.
ಇದರಿಂದ ಕೆರಳಿದ ಮಾಜಿ ಸಚಿವ ಹಾಗೂ ಹಾಲಿ ಬಿಜೆಪಿ ಮುಖಂಡ ಹೆಚ್. ವಿಶ್ವನಾಥ್, ಡಾ.ಅಶ್ವತ್ಥ ನಾರಾಯಣ ಯಾರಿಂದ ಉಪಮುಖ್ಯಮಂತ್ರಿ ಆಗಿದ್ದು ? ಅಲ್ಲದೆ ನಮ್ಮ ಮತ್ತು ಸಿಎಂ ಯಡಿಯೂರಪ್ಪ ಅವರ ನಡುವೆ ಏನು ಒಪ್ಪಂದ ಆಗಿದೆ ಅವರಿಗೇನು ಗೊತ್ತು. ? ಹಾಗಾಗಿ ಅವರು ಸುಮ್ಮನಿದ್ದರೇ ಒಳ್ಳೆಯದು ಎಂದು ಡಿಸಿಎಂ ಅಶ್ವತ್ಥ ನಾರಾಯಣ ಅವರಿಗೆ ತಿರುಗೇಟು ನೀಡಿದರು.
ಜೊತೆಗೆ ನಾನು ಹುಣಸೂರಿನಲ್ಲಿ ಮೊದಲು ಗೆಲುವು ಪಡೆದಿದೆ. ಅಮೇಲೆ ಸೋಲು ಕಂಡಿದ್ದೇನೆ. ರಾಜಕಾರಣ ಎಂದರೆ ಸೋಲು ಗೆಲವು ಸಹಜವಾಗಿರುತ್ತದೆ. ಇನ್ನೂ ಬಿಜೆಪಿಯಲ್ಲಿ ಸೋತವರನ್ನು ಡಿಸಿಎಂ ಮಾಡಿದ್ದಾರೆ ಎನ್ನುವ ಮೂಲಕ ಲಕ್ಷ್ಮಣ ಸವದಿ ಅವರಿಗೆ ಟಾಂಗ್ ಕೊಟ್ಟರು.
ಇನ್ನೂ ಅಶ್ವತ್ಥ ನಾರಾಯಣಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಅವರು ಡಿಸಿಎಂ ಮಾತ್ರ. ನಮ್ಮ ಪಾಲಿಗೆ ಬಿಜೆಪಿಯಲ್ಲಿ ಸಿಎಂ ಬಿ,ಎಸ್. ಯಡಿಯೂರಪ್ಪನವರ ಮಾತು ಬಿಟ್ಟರೇ ಬೇರೆ ಯಾರು ಮಾತಿಗೂ ಅರ್ಥವಿಲ್ಲದಂತೆ. ಸಿಎಂ ನಮ್ಮನ್ನು ಸಚಿವರು ಮಾಡುವ ಭರವಸೆ ನೀಡಿದ್ದಾರೆ. ಅವರು ಕೊಟ್ಟ ಮಾತು ತಪ್ಪುವುದಿಲ್ಲ. ಅಲ್ಲದೆ ಮಾತು ಕೊಟ್ಟ ವಿಚಾರ ಸಂಸದ ಶ್ರೀನಿವಾಸಪ್ರಸಾದ್ ಅವರಿಗೆ ತಿಳಿದಿದೆ. ನಮಗೆ ವಿಧಾನ ಪರಿಷತ್ ಟಿಕೆಟ್ ಸಿಗುತ್ತದೆ, ಜೊತೆ ಸಚಿವರ ಸ್ಥಾನ ಸಹ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು








