ಅಮೆರಿಕಾ: ವಿಶ್ವವನ್ನೇ ಹೆಮ್ಮಾರಿ ಕೊರೊನಾ ಬೆಂಬಿಡದೆ ಕಾಡುತ್ತಿದೆ. ಅದರಲ್ಲೂ ಕೊರೊನಾ ಪ್ರಕೋಪ ಅತಿ ಹೆಚ್ಚಾಗಿ ಬೀರಿರುವುದೇ ವಿಶ್ವದ ದೊಡ್ಡಣ್ಣ ಅಮೆರಿಕಾದ ಮೇಲೆ. ಹೀಗಾಗಿ ಕೊರೊನಾ ಸೋಂಕು ನಿರ್ಮೂಲನೆ ಮಾಡಲು ಅಮೆರಿಕ ಪಣತೊಟ್ಟಿದೆ. ಅಲ್ಲದೇ ಮೂರು ಲಸಿಕೆಗಳು ಶೀಘ್ರದಲ್ಲಿ ಉತ್ಪಾದನೆಗೆ ಸಿದ್ಧವಾಗಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
![]()
ಸಮರೋಪಾದಿ ಕಾರ್ಯನಿರ್ವಹಣೆ ಕೈಗೊಂಡು ಲಸಿಕೆಯನ್ನು ಅಭಿವೃದ್ಧಿಪಡಿಸಲು ನಮ್ಮ ವಿಜ್ಞಾನಿಗಳು ಶ್ರಮವಹಿಸಿದ್ದಾರೆ. ಅವರಿಗೆ ಲಸಿಕೆ ಅಭಿವೃದ್ಧಿಪಡಿಸುವಂತೆ ತಿಳಿಸಿರುವುದಾಗಿಯೂ ಟ್ರಂಪ್ ಹೇಳಿಕೊಂಡಿದ್ದಾರೆ.
ಇನ್ನೇನು ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಪದಲ್ಲಿದೆ. ಹೀಗಾಗಿ ಚುನಾವಣೆಗೂ ಮುನ್ನ ಲಸಿಕೆ ತಯಾರಿಗೆ ಒತ್ತು ನೀಡಲಾಗಿದೆ ಎಂದು ಹೇಳಿದ್ದಾರೆ.









