DR56 : ಪ್ರಿಯಾಮಣಿ ನಟನೆಯ DR56 ಸಿನಿಮಾದ ಟ್ರೈಲರ್ ಬಿಡುಗಡೆ
ಬಹುಭಾಷಾ ನಟಿ ಪ್ರಿಯಾಮಣಿ ನಟನೆಯ DR56 ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಡಿಸೆಂಬರ್ 9ರಂದು ತೆರೆಯ ಮೇಲೆ ಕಾಣಿಸಿಕೊಳ್ಳಲಿರುವ DR56 ಸಿನಿಮಾ, ಕನ್ನಡದಲ್ಲಿ ತಯಾರಾಗುತ್ತಿದ್ದು ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಏಕಕಾಲಕ್ಕೆ ತೆರೆ ಕಾಣುತ್ತಿದೆ.
ಈ ಚಿತ್ರವು ವೈಜ್ಞಾನಿಕ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳಿಂದ ಕೂಡಿದ್ದು, ಇದರಲ್ಲಿ ಪ್ರಿಯಾಮಣಿ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ದೀಪಕ್ ಶೆಟ್ಟಿ, ರಮೇಶ್ ಭಟ್ ಮತ್ತು ವೀಣಾ ಪೊನ್ನಪ್ಪ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ರಾಜೇಶ್ ಆನಂದಲೀಲಾ ಆಕ್ಷನ್ ಕಟ್ ಹೇಳಿದ್ದಾರೆ. ಹರಿ ಹರ ಪಿಕ್ಚರ್ಸ್ ಮತ್ತು ಶ್ರೀ ಲಕ್ಷ್ಮೀ ಜ್ಯೋತಿ ಕ್ರಿಯೇಷನ್ಸ್ ನಿರ್ಮಾಣದ D56 ಸಿನಿಮಾಗೆ ನಿರ್ಮಾಪಕ ಪ್ರವೀಣ್ ರೆಡ್ಡಿ ಟಿ ಸಹ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ.