ಕನಸನ್ನೂ ಕಂಟ್ರೋಲ್ ಮಾಡಬಹುದಾ… ಕನಸಲ್ಲಿ ಬರುವುದು ನಿಜ ಆಗುತ್ತಾ… ಪ್ರಾಣಿಗಳೂ ಕನಸು ಕಾಣುತ್ತವಾ…!

1 min read

ಕನಸನ್ನೂ ಕಂಟ್ರೋಲ್ ಮಾಡಬಹುದಾ… ಕನಸಲ್ಲಿ ಬರುವುದು ನಿಜ ಆಗುತ್ತಾ… ಪ್ರಾಣಿಗಳೂ ಕನಸು ಕಾಣುತ್ತವಾ…!

ಕತ್ತಲಾಗ್ತಿದ್ದಂತೆ ಕಣ್ಣು ಬಯಸುವುದು ನಿದ್ದೆಯನ್ನ. ನಿದ್ದೆ ಮಾಡ್ತಿದ್ದಂತೆ ಮಾನಸಿಕವಾಗಿ ಶಾಂತಿ , ದೈಹಿಕವಾಗಿ ಪರಿಶ್ರಮ ಹೋಗಲಾಡಿಸಿಕೊಳ್ಳುತ್ತೇವೆ. ನಿದ್ರೆಗೆ ಜಾರುತ್ತಿದ್ದಂತೆ ಬೇರೆಯದ್ದೇ ಲೋಕ ಅಂದ್ರೆ ಕನಸಿಕ ಲೋಕಕ್ಕೆ ಪ್ರವೇಶ ಮಾಡುತ್ತೇವೆ.. ಈ ಕನಸಿನ ಬಗ್ಗೆ ಸಾಕಷ್ಟು ಚರ್ಚೆಗಳು, ಕುತೂಹಲಗಳು, ಪ್ರರ್ಶನೆಗಳಿವೆ. ಕಲವಕ್ಕೆ ಉತ್ತರ ಸಿಕ್ಕಿದ್ರೆ ಇನ್ನೂ ಕೆಲವಕ್ಕೆ ಯಾವುದೇ ಸ್ಪಷ್ಟ ಉತ್ತರಗಳು ಈವರೆಗೂ ಸಿಕ್ಕಿಲ್ಲ.. 

1. ಕನಸೇ ಕಾಣದ ಮುಷ್ಯರು ಇರುತ್ತಾರಾ – ರೀಸರ್ಚ್ ಗಳ ವರದಿ ಪ್ರಕಾರ ಇಲ್ಲ… ಆದ್ರೆ ಅನೇಕರು ನಮಗೆ ಕನಸೂ ಬೀಳುವುದಿಲ್ಲ ಎನ್ನುವುದನ್ನ ನಾವು ಕೇಳಿರುತ್ತೇವೆ. ಆದ್ರೆ ಅಸಲಿಗೆ ಮನುಷ್ಯರಿಗೆ ಕನಸುಗಳ ಬಹುತೇಕ 50 % ಬಾಗಗಳು ಬೆಳಿಗ್ಗೆ ಎಚ್ಚರವಾಗುವಷ್ಟರಲ್ಲೇ ಮೆರತುಹೋಗಿರುತ್ತವೆ. ಆದ್ರೆ ತುಂಬಾ ಜನರಿಗೆ 100 % ಕೂಡ ಅಂದ್ರೆ ಚಿಕ್ಕ ವಿಚಾರಗಳೂ ಕೂಡ ಸಂಪೂರ್ಣವಾಗಿ ಏನೂ ನೆನಪಿಗೆ ಬರುವುದಿಲ್ಲ. ಅಂತವರು ಕನಸು ಬೀಳುವುದಿಲ್ಲ ಎನ್ನುತ್ತಾರೆ ಎಂಬುದು ವೈಜ್ಞಾನಿಕ ತಜ್ಞರ ಮಾತು.

2. ಕನಸನ್ನು ಕಂಟ್ರೋಲ್ ಮಾಡಬಹುದಾ – ಹೌದು.. ವೈಜ್ಞಾನಿಕವಾಗಿ ತಜ್ಞರ ಪ್ರಕಾರ ಮನುಷ್ಯರು ಮನಸ್ಸು ಮಾಡಿದ್ರೆ ಕನಸನ್ನ ಕಂಟ್ರೋಲ್ ಮಾಡಬಹುದು. ಇನ್ನೂ ನಮಗೆ ಯಾವ ರೀತಿ ಕನಸು ಕಾಣಬೇಕು.. ಏನು ನಮ್ಮ ಡ್ರೀಮ್ ನಲ್ಲಿ ಬರಬೇಕು ಅಂತ ಬಯಸುತ್ತೇವೋ ಅದರ ಬಗ್ಗೆ ದಿವಿಡೀ ಯೋಚಿಸುತ್ತಾ ಇರಬೇಕು.. ಮಲಗುವ 1 ಗಂಟೆ ಮುಂಚೆಯಿಂದಲೂ ಅದರ ಬಗ್ಗೆಯೇ ಯೋಚನೆ ಮಾಡುತ್ತಾ ಇದ್ದರೆ ಅದು ಕನಸಿನ್ನಲ್ಲಿ ಬರುತ್ತದೆಯಂತೆ.

3 – ಕನಸಿನಲ್ಲಿ ಬರುವ ಎಲ್ಲವೂ ನಿಜ ಆಗುತ್ತಾ – ಇಲ್ಲ.. ಕನಸ್ಸಿನಲ್ಲಿ ಬರುವುದು ನಿಜ ಆಗುವುದಿಲ್ಲ. ಒಂದು ವೆಳೆ ಆದ್ರೂ ಅದು ಕಾಕತಾಳಿವಷ್ಟೇ. ಆದ್ರೆ ಕೆಲವೊಮ್ಮೆ ಅದನ್ನೇ ಕನಸಲ್ಲಿ ಬರುವುದೆಲ್ಲಾ ನಿಜ ಎಂಬ ಭಾವನೆ ಬರುವುದು ನಿಜ. ನಾವು ಅಂದುಕೊಂಡಿದ್ದು ಕೆಲವೊಮ್ಮೆ ಕನಸಲ್ಲಿ ಬರಬಹುದು. ನಮ್ಮ ಆಸೆಗಳು ಮನದಲ್ಲಿ ಬಲವಾಗಿದ್ದರೆ ಅದು ಕನಸಿನ ರೂªಪದಲ್ಲಿ ನಮಗೆ ಮತ್ತೆ ಕಾಣಿಸುತ್ತದೆ.

4. ನೈಟ್ ಮೇರ್ / ಕೆಟ್ಟ ಕನಸು – ಕೆಟ್ಟ ಕನಸುಗಳು ಬೀಳುವುದಕ್ಕೆ ಮುಖ್ಯ ಕಾರಣ ಸ್ಟ್ರೆಸ್ / ಒತ್ತಡ. ಹೆಚ್ಚು ಒತ್ತಡದ ಬದುಕಿನಲ್ಲಿ ಕೆಟ್ಟ ಕನಸುಗಳು ಬೀಳಬಹುದು. ಅಥವ ಮನಸ್ಸಲ್ಲಿ ಯಾವುದೋ ಒಂದು ವಿಚಾರದ ಬಗ್ಗೆ ಭಯ ಇದ್ದರೆ ಆಗಲೂ ಕೆಟ್ಟ ಕನಸು ಬೀಳಬಹುದು. ಕೆಲವೊಮ್ಮೆ ಹಾರರ್ ಸಿನಿಮಾಗಳು ನೋಡುವುದರಿಂದಲೂ, ಕೆಲವೊಮ್ಮೆ ಹೊಸ ಜಾಗಗ¼ಲ್ಲಿ, ಕೆಲವೊಮ್ಮೆ ಒಬ್ಬರೇ ಇದ್ದಾಗ ಹೆದರಿಕೆಗೂ ಬರಬಹುದು. ಇನ್ನೂ ಕೆಲವು ಬಾರಿ ಕೆಲವರ ಮಾತುಗಳು ಪ್ರಬಾವ ಬೀರಿ ಅವಾಗಲೂ ಕೆಟ್ಟ ಕನಸುಗಳು ಬರಬಹುದು.

5. ಇನ್ನೂ ಅನೇಕ ಬಾರಿ ಬಹುಷಃಬಹುತೇಕ ಎಲ್ಲರಿಗೂ ಕುತ್ತಿಗೆ ಹಿಸುಗಿರುವ ಹಾಗೇ ಹಾಗೆ , ಯಾರೋ ಕತ್ತನ್ನ ಬಿಗಿ ಹಿಡಿದು ದೇಹದ ಮೇಲೆ ಕುಳಿತಿರುವ ಹಾಗೆ ಅನುಭವ ಆಗುತ್ತದೆ. ಆಗ ಬಾಯಿಂದ ಮಾತು ಬರುವುದಿಲ್ಲ. ದೇಹ ಅಲುಗಾಡುವುದೂ ಕಷ್ಟ. ಅದು ಕೂಡ ಸ್ಟ್ರೆಸ್ ಹಾಗೂ ಭಯದ ಪರಿಣಾಮವೇ. ಆದ್ರೆ ಕೆಲವರು ಅದನ್ನ ಕೆಟ್ಟ ಶಕ್ತಿ ಇನ್ನೂ ನಾನಾ ರೀತಿಗಳಲ್ಲಿ ಬಿಂಬಿಸುತ್ತಾರೆ.

6. ಪ್ರಾಣಿಗಳಿಗೆ ಕನಸು ಬೀಳುತ್ತವೆಯೇ – ಹೌದು ಮುಖ್ಯವಾಗಿ ನಾಯಿ, ಬೆಕ್ಕುಗಳು, ಬಾತುಕೋಳಿಗಳು ಹೀಗೆ ಹಲವು ಪ್ರಾಣಿಗಳು ಕನಸು ಕಾಣುತ್ತವೆ ಎಂಬುದನ್ನ ಸಂಶೋಧನೆಗಳಲ್ಲಿ ಸಾಬೀತು ಪಡಿಸಲಾಗಿದೆ.

7. ದಿವ್ಯಾಂಗರಿಗೆ ಕನಸು ಬೀಳುತ್ತದೆಯೇ.. – ಹುಟ್ಟುತ್ತಲೇ ದಿವ್ಯಾಂಗರಾಗಿದ್ದರೂ ಅವರಿಗೂ ಕನಸು ಬೀಳುವುದು ನಿಜ. ಆದ್ರೆ ರಸ್ತೆ , ಮನುಷ್ಯರು ಸಮಾಜ ಇವುಗಳ ಬಗ್ಗೆ ಕನಸು ಬೀಳುವುದಿಲ್ಲ. ಬದಲಾಗಿ ಅವರೇ ಅವರ ಕಲ್ಪನಾ ಲೋಕವನ್ನ ಮನಸ್ಸಿನಲ್ಲಿ ಕಲ್ಪಿಸಿಕೊಂಡಿರುತ್ತಾರೆ. ಅದರ ಅನುಗುಣವಾಗಿಯೇ ಅವರಿಗೆ ಕನಸುಗಳು ಬೀಳುತ್ತವೆ.

8. ಕನಸುಗಳಿಗೆ ಬಣ್ಣ ಇದೆಯೇ – ಇಲ್ಲ…ಕನಸುಗಳು ಸದಾ ವೈಟ್ ಅಂಡ್ ಬ್ಲಾಕ್ ರೀತಿಯಲ್ಲೇ ಬೀಳುತ್ತವೆ.

8. ಪುರುಷ್ರಿಗೆ ಹೆಚ್ಚಾಗಿ ಬೀಳುವ ಕನಸುಗಳು – ಅಡ್ವೆಂಚರ್ , ಕಾರ್ ಡ್ರೈವಿಂಗ್ , ಫೈಟಿಂಗ್ , ಸೂಪರ್ ಹೀರೋ , ರೇಸ್

9. ಮಹಿಳೆಯರಿಗೆ ಹೆಚ್ಚು ಬೀಳುವ ಕನಸುಗಳು – ಮಾತನಾಡುವುದು , ವಾಗ್ವಾದ , ಡಿಬೇಟ್ , ಫ್ಯಾಂಟಸಿ , ಫೇರಿ ಟೇಲ್

10. ಸ್ಲೀಪ್ ಪ್ಯಾರಾಲಿಸಿಸ್ / ಸ್ಲೀಪ್ ವಾಕ್ – ನಿದ್ದೆಯಲ್ಲಿ ನೆಡೆಯುವ ರೂಢಿ ಅನೇಕರಿಗೆ ಇರುತ್ತೆ . ಆದ್ರೆ ಅವರಿಗೆ ಅವರೇನ್ ಮಾಡುತ್ತಿದ್ದಾರೆ ಅನ್ನೋ ಅರಿವು ಆ ಕ್ಷಣದಲ್ಲಿ ಇರೆಉವುದಿಲ್ಲ. ಎದ್ದ ಮೇಲೂ ತಿಳಿಯೋದಿಲ್ಲ. ಅಸಲಿಗೆ ನಿದ್ದೆಯಲ್ಲಿ ನೆಡೆಯುವಾಗ ಅವರು ಕನಸಿನಲ್ಲಿಯೇ ನೆಡೆಯುತ್ತಿರುತ್ತಾರೆ. ಆದ್ರೆ ಮುಂಜಾನೆ ಎದ್ದಾಗ ಅದು ಅವರಿಗೆ ಮರೆತುಹೋಗಿರುತ್ತದೆ. ಅಸಲಿಗೆ ಗ್ರಾಮೀಣ ಬಾಗಗಳಲ್ಲಿ ಜನರು ಮೈಮೇಲೆ ದೆವ್ವ ಬಮದಿರಬೇಕು ಅಂತೆಲ್ಲಾ ಮಾತನಾಡಿಕೊಳ್ತಾರೆ . ಆದ್ರೆ ಆ ರೀತಿ ಏನೂ ಇರುವುದಿಲ್ಲ.

 

parking
ಜಾಹೀರಾತು

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd