ಐಪಿಎಲ್ ನ ಬ್ಲೂ ಪ್ಯಾಂಥರ್ಸ್ ಮುಂಬೈ ಇಂಡಿಯನ್ಸ್ ಪ್ರತಿ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ. ಬ್ಯಾಟಿಂಗ್ ಬೌಲಿಂಗ್ ಫೀಲ್ಡಂಗ್ ಮೂರು ವಿಭಾಗಗಳಲ್ಲಿ ಬಲಿಷ್ಠವಾಗಿರುವ ಬ್ಲೂ ಬಿಗ್ರೇಡ್ ಎದುರಾಳಿಗಳನ್ನು ಕಟ್ಟಿ ಹಾಕುವುದರಲ್ಲಿ ಪಂಟರ್. ಐಪಿಎಲ್ 12 ಆವೃತ್ತಿಗಳಲ್ಲಿ 4 ಬಾರಿ ಚಾಂಪಿಯನ್ ಆಗಿ ಮುಂಬೈ ಒಂದು ಬಾರಿ ರನ್ನರ್ ಅಪ್ ಆಗಿದೆ.
ಮುಂಬೈ ಇಂಡಿಯನ್ಸ್ ಎಂತಹ ಸನ್ನಿವೇಶದಲ್ಲಾದರೂ ಪಿನ್ನಿಕ್ಸ್ ನಂತೆ ಕಮ್ ಬ್ಯಾಕ್ ಮಾಡುವ ಸಾಮಥ್ರ್ಯವನ್ನು ಹೊಂದಿದೆ. ನಾಯಕ ರೋಹಿತ್ ಶರ್ಮಾ ತಂಡದ ಪ್ಲಸ್ ಪಾಯಿಂಟ್. ಮೈದಾನದಲ್ಲಿ ಧೋನಿಯಂತೆ ಕೂಲ್ ಆಗಿರುವ ರೋಹಿತ್, ಸಿಂಗಲ್ ಆಗಿ ಪಂದ್ಯವನ್ನು ಗೆಲ್ಲಿಸಬಲ್ಲರು. ಇನ್ನು ಮುಖ್ಯವಾಗಿ ಆಲ್ ರೌಂಡರ್ ಕೀರನ್ ಪೊಲಾರ್ಡ್ ಕ್ಲಿಷ್ಟ ಸಂದರ್ಭಗಳಲ್ಲೂ ಮ್ಯಾಚ್ ಗೆಲ್ಲಿಸಿಕೊಡುವ ಸಾಮಥ್ರ್ಯ ಹೊಂದಿದ್ದಾರೆ.
ಪ್ರತಿ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಿಂದ ಮೈದಾನಕ್ಕೆ ಇಳಿಯುವ ಮುಂಬೈ ಈ ಬಾರಿ ಸಾಕಷ್ಟು ಸಿದ್ಧತೆಗಳನ್ನು ನಡೆಸಿ ಅಖಾಡಕ್ಕೆ ಇಳಿಯಲಿದೆ. ಈ ಬಾರಿ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಬಲಿಷ್ಠ ಚೆನ್ನೈ ತಂಡವನ್ನು ಎದುರಿಸಲಿದೆ.
ಮುಂಬೈನ ಬಲಾಬಲ
ಬ್ಯಾಟ್ಸ್ ಮೆನ್ ಗಳು : ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಕ್ರಿಸ್ ಲೀನ್, ಸೌರಬ್ ತಿವಾರಿ, ಶೇರ್ಫಾನೆ ರುದ್ಫೋರ್ಡ್, ಅನ್ಮೋಲ್ಪ್ರೀತ್ ಸಿಂಗ್.
ಬೌಲರ್ ಗಳು : ಧವನ್ ಕುಲಕರ್ಣಿ, ಜಸ್ಪ್ರೀತ್ ಬೂಮ್ರಾ, ರಾಹುಲ್ ಚಹಾರ್, ಟ್ರೆಂಟ್ ಬೋಲ್ಟ್, ಜೇಮ್ಸ್ ಪ್ಯಾಟಿನ್ಸನ್,ಮಿಚೆಲ್ ಮೆಕ್ಲೆನಾಘನ್, ನಥನ್ ಕೌಲ್ಟರ್ ನೈಲ್, ಮೊಹ್ಸಿನ್ ಖಾನ್.
ಆಲ್ ರೌಂಡರ್ ಗಳು : ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಜಯಂತ್ ಯಾದವ್, ಅನುಕುಲ್ ರಾಯ್, ದಿಗ್ವಿಜಯ್ ದೇಶ್ ಮುಖ್, ಕೀರನ್ ಪೊಲಾರ್ಡ್,ಪ್ರಿನ್ಸ್ ಬಲ್ವಂತ್ ರೈ ಸಿಂಗ್.
ವಿಕೆಟ್ ಕೀಪರ್ ಗಳು : ಇಶಾನ್ ಕಿಶನ್, ಕ್ವಿಂಟನ್ ಡಿ ಕಾಕ್, ಆಧಿತ್ಯ ತಾರೆ. ಹೊಸ ಸುದ್ದಿಗಳನ್ನು ಇಲ್ಲಿ ಓದಿ