ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಧೂಳ್ಳೆಬ್ಬಿಸ್ತಿರುವ ಸ್ಟಾರ್ ಆಟಗಾರರು. ದೇಶಿಮಟ್ಟದಲ್ಲಿ ತಮ್ಮ ಸಾಮಥ್ರ್ಯ ಸಾಬೀತು ಪಡಿಸಿರುವ ಯುವ ಪ್ರತಿಭೆಗಳು. ಮೂರು ವಿಭಾಗದಲ್ಲಿ ಬಲಿಷ್ಠ ಆಟಗಾರರನ್ನು ಒಳಗೊಂಡಿರುವ ತಂಡ ರಾಜಸ್ಥಾನ್. ಐಪಿಎಲ್ ಮೊದಲ ಆವೃತ್ತಿಯಲ್ಲಿ ರಾಯಲ್ ಆಟವಾಡಿದ್ದ ಆರ್ ಆರ್ ಚಾಂಪಿಯನ್ ಆಗಿ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಆದ್ರೆ ನಂತ್ರ ಐಪಿಎಲ್ ಆವೃತ್ತಿಗಳಲ್ಲಿ ರಾಜಸ್ಥಾನ ರಾಯಲ್ ಆಟವನ್ನು ಮರೆತಂತೆ ಪ್ರದರ್ಶನ ನೀಡಿತು. 2009ರಲ್ಲಿ ಆರನೇ ಸ್ಥಾನ, 2010ರಲ್ಲಿ ಏಳನೇ ಸ್ಥಾನ, 2011ರಲ್ಲಿ ಮತ್ತೆ ಆರನೇ ಸ್ಥಾನ, 2012ರಲ್ಲಿ ಮತ್ತೆ ಏಳನೇ ಸ್ಥಾನ ಪಡೆದುಕೊಂಡಿತ್ತು. 2013 ಮತ್ತು 2014, 15ರಲ್ಲಿ ಉತ್ತಮ ಪ್ರದರ್ಶನ ನೀಡಿದ ಆರ್ ಆರ್ ಫಿಕ್ಸಿಂಗ್ ಆರೋಪದಲ್ಲಿ ಎರಡು ವರ್ಷ ಬ್ಯಾನ್ ಆಯಿತು.
2018ರಲ್ಲಿ ಮತ್ತೆ ಹೊಸ ಉತ್ಸಾಹದಿಂದ ಮೈದಾನಕ್ಕೆ ಇಳಿದ ರಾಜಸ್ಥಾನ್ ರಾಯಲ್ ಆಟವನ್ನು ಆಡಲೇ ಇಲ್ಲ. ಈ ಬಾರಿ ಹೊಸ ಜರ್ಸಿಯೊಂದಿಗೆ ಸ್ಟೀವನ್ ಸ್ಮಿತ್ ನಾಯಕತ್ವದಲ್ಲಿ ರಾಜಸ್ಥಾನ್ ಮೈದಾನಕ್ಕಿಳಿಯಲಿದ್ದು, ರಾಯಲ್ ಆಟ ಹಾಡುತ್ತಾ ಎಂದು ಕಾದು ನೋಡಬೇಕಾಗಿದೆ. ಹೊಸ ಸುದ್ದಿಗಳನ್ನು ಇಲ್ಲಿ ಓದಿ
ತಂಡದ ಹೀಗಿದೆ
ಬ್ಯಾಟ್ಸ್ ಮೆನ್ ಗಳು : ಸ್ಟೀವನ್ ಸ್ಮೀತ್, ರಾಬಿನ್ ಉತ್ತಪ್ಪ, ಯಶಸ್ವಿ ಜೈಸ್ವಾಲ್, ಮನನ್ ವೊಹ್ರಾ, ರಿಯಾನ್ ಪರಗ್, ಶಶಾಂಕ್ ಸಿಂಗ್, ಡೇವಿಡ್ ಮಿಲ್ಲರ್, ಆಕಾಶ್ ಸಿಂಗ್,
ಬೌಲರ್ ಗಳು : ಒಶಾನೆ ಥಾಮಸ್, ಜಯದೇವ್ ಉನಾದ್ಕಟ್, ಆಂಡ್ರ್ಯೂ ಟೈ, ರಾಹುಲ್ ಟಿವಾಟಿಯಾ, ಮಯಾಂಕ್ ಮಾರ್ಕಂಡೇ, ಅನಿರುದ್ಧ ಜೋಶಿ, ಕಾರ್ತಿಕ್ ತ್ಯಾಗಿ, ಜೋಫ್ರಾ ಅರ್ಚರ್, ವರೂಣ್ ಆರೋನ್.
ಆಲ್ ರೌಂಡರ್ ಗಳು : ಬೆನ್ ಸ್ಟೋಕ್ಸ್, ಟಾಮ್ ಕರ್ರನ್, ಶ್ರೇಯಸ್ ಗೋಪಾಲ್, ಮಹಿಪಾಲ್ ಲೋಮರ್,
ವಿಕೆಟ್ ಕೀಪರ್ ಗಳು : ಜೋಸ್ ಬಟ್ಲರ್, ಅನುಜ್ ರಾವತ್
ಹೆಡ್ ಕೋಚ್ : ಆಂಡ್ರ್ಯೂ ಮೆಕ್ ಡೊನಾಲ್ಡ್,
ಬ್ಯಾಟಿಂಗ್ ಕೋಚ್ : ಅಮೊಲ್ ಮಜುಂದಾರ್, ಬೌಲಿಂಗ್ ಕೋಚ್ : ಸೈರಾಜ್ ಬಹುತುಲೆ.
ಫೀಲ್ಡಿಂಗ್ ಕೋಚ್ : ದಿಶಾಂತ್ ಯಾಗ್ನಿಕ್.