ಕನಸಿನಲ್ಲಿ ಬೆಂಕಿ ಕಾಣಿಸಿಕೊಂಡರೆ ಅದರ ಅರ್ಥವೇನು..?
ಕನಸುಗಳ ಬಗ್ಗೆ ಹಲವರಿಗೆ ಹಲವು ರೀತಿಯಾದ ನಂಬಿಕೆಗಳಿವೆ.. ಕೆಲವರು ಇದಕ್ಕೆ ಅದ್ರದ್ದೇ ಆದ ಕಾರಣ ಇದೆ.. ಈ ರೀತಿ ಕನಸು ಬಂದ್ರೆ ಹಾಗಾಗುತ್ತೆ ಇದು ಒಳ್ಲೆಯದು ಅದು ಕೆಟ್ಟದ್ದು ಹೀಗೆ ನಾನಾ ರೀತಿಯಾದ ಕನಸುಗಳಿಗೆ ನಾನಾ ಅರ್ಥ ಕಲ್ಪಿಸುವವರ ನಡುವೆ ಇನ್ನೂ ಹಲವರು ಕನಸನ್ನ ಕೇವಲ ನಿದ್ದೆ ಮಾಡಿ ಏಳುವ ತನಕ ಅದಾದದ ನಂತರ ಅದು ಕನಸಷ್ಟೇ ಯಾವುದೇ ಅರ್ಥವಿಲ್ಲ ಅಂತಲೂ ಯೋಚನೆ ಮಾಡ್ತಾರೆ.
ಕನಸಿನ ವ್ಯಾಖ್ಯಾನಕಾರರು ಪ್ರತಿ ಕನಸಿಗೆ ಒಂದು ಅರ್ಥವಿದೆ ಎಂದು ನಂಬುತ್ತಾರೆ. ಅವರ ಪ್ರಕಾರ ಒಂದು ಕನಸು ವ್ಯಕ್ತಿಯ ಹಿಂದಿನ, ವರ್ತಮಾನ/ಭವಿಷ್ಯದ ಪ್ರತಿಬಿಂಬವಾಗಿದೆ. ನಮಗೆ ಅನೇಕ ರೀತಿಯಾದ ಕನಸುಗಳು ಬೀಳುತ್ತವೆ. ಪ್ರಪಂಚದಾದ್ಯಂತ ಜನರು ನಿದ್ದೆ ಮಾಡುವಾಗ ಕನಸು ಕಾಣುತ್ತಾರೆ. ಮತ್ತು ಕನಸಿನ ವ್ಯಾಖ್ಯಾನಕಾರರು ಪ್ರತಿ ಕನಸಿಗೆ ಒಂದು ಅರ್ಥವಿದೆ ಎಂದು ನಂಬುತ್ತಾರೆ. ಕನಸುಗಳು ನಮಗೆ ಹಿಂದೆ ಸಂಭವಿಸಿದ ಅಥವಾ ವರ್ತಮಾನದ ಬಗ್ಗೆ ಅಥವಾ ಭವಿಷ್ಯದಲ್ಲಿ ಸಂಭವಿಸಬಹುದಾದ ಘಟನೆಗಳ ಸೂಚಕಗಳು ಎಂದು ಕೆಲವರು ಹೇಳ್ತಾರೆ.
ಅದರಂತೆ ನೀವು ಕನಸಿನಲ್ಲಿ ಬೆಂಕಿ ನೋಡಿದರೆ ಅದರ ಅರ್ಥವೇನು..?
ಪಂಚಭೂತಗಳಲ್ಲಿ ಒಂದಾದ ಅಗ್ನಿ ನಮ್ಮ ಬದುಕಿನ ಅವಿಭಾಜ್ಯ ಅಂಗವೇ ಅಂದ್ರು ತಪ್ಪಾಗಲ್ಲ. ಬೆಂಕಿ ನಮಗೆ ಅಡುಗೆ ಮಾಡಲು ಸಹಾಯ ಮಾಡುತ್ತದೆ, ನಮ್ಮನ್ನು ಬೆಚ್ಚಗಾಗಿಸುತ್ತದೆ. ಕತ್ತಲಲ್ಲಿ ಬೆಳಕನ್ನ ಒದಗಿಸುತ್ತದೆ. ಹೀಗೆ ಇನ್ನೂ ಅನೇಕ ರೀತಿಯಲ್ಲಿ ನಮ್ಮ ದೈನಂದಿನ ಬದುಕಿನಲ್ಲಿ ಅಗ್ನಿ ಅದರದ್ದೇ ಆದ ಮಹತ್ವ ಹೊಂದಿದೆ. ಹಾಗೆಯೇ ಬೆಂಕಿಯಿಂದ ಜೀವಗಳೂ ಹೋಗು ಅನಾಹುತಗಳು ಸಂಭವಿಸುತ್ತವೆ. ಬೆಂಕಿಯಿಂದ ಅಪಾಯವೂ ಇರುತ್ತದೆ. ಹೀಗಾಗಿ ಬೆಂಕಿ ಕಂಡ್ರೆ ಭಯವೂ ಇರುತ್ತೆ. ಬೆಂಕಿಯಿಂದ ದೂರವೇ ಇರಬೇಕು ಅನ್ನುವ ಮಾತಿದೆ.
ಮರುಭೂಮಿಯಲ್ಲಿ ಸಿಲುಕಿರುವಂತಹ ಕನಸು ಬಿದ್ರೆ ಅದರ ಅರ್ಥವೇನು..?
ಇದೇ ಬೆಂಕಿಯನ್ನ ಕನಸಿನಲ್ಲಿ ನೋಡಿದ್ರೆ ಅದರ ಅರ್ಥವೇನಿರಬಹುದು. ಶಕ್ತಿಯ ಸಾಮಾನ್ಯ ಸಂಕೇತವೆಂದರೆ ಬೆಂಕಿ ಏಕೆಂದರೆ ಅದು ಶಾಖ ಮತ್ತು ಬೆಳಕನ್ನು ಉತ್ಪಾದಿಸುತ್ತದೆ. ಬೆಂಕಿ ನಮ್ಮನ್ನು ಬೆಚ್ಚಗಾಗಿಸುವುದಲ್ಲದೆ ಬೇರೆ ಬೇರೆ ಉದ್ದೇಶಗಳಿಗೆ ಉಪಯೋಗಕ್ಕೆ ಬರುತ್ತದೆ. ಬೆಂಕಿ ಒಳಗಿನ ಉತ್ಸಾಹವನ್ನು ಪ್ರತಿನಿಧಿಸುತ್ತದೆ. ಜೀವನದಲ್ಲಿ ಯಶಸ್ವಿಯಾಗಲು, ಒಬ್ಬ ವ್ಯಕ್ತಿಯು ಸಾಕಷ್ಟು ಉತ್ಸಾಹವನ್ನು ಹೊಂದಿರಬೇಕು. ನೀವು ಮಹತ್ವಾಕಾಂಕ್ಷಿಯಾಗಿದ್ದರೆ ನಿಮ್ಮ ಕನಸಿನಲ್ಲಿರುವ ಬೆಂಕಿ ನಿಮ್ಮ ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ.
ಕೇವಲ 4 ಲಕ್ಷ ಜನಸಂಖ್ಯೆ ಇದ್ರೂ ವಿಶ್ವದ ಶ್ರೀಮಂತ ದೇಶ ಬಹಮಾಸ್ ನ ಬಗ್ಗೆ INTERSTING FACTS..!
ಬೆಂಕಿಯ ಬಗ್ಗೆ ಕನಸು ಕಾಣುವುದು ಎಂದರೆ ಜ್ವಾಲಾಮುಖಿಯಂತೆ ಸ್ಫೋಟಗೊಳ್ಳುವ ಕೋಪವನ್ನು ನಿಗ್ರಹಿಸುವುದು ಎಂದೂ ಅರ್ಥವಿರಬಹುದು. ಇನ್ನೂ ನೀವು ನಿಮ್ಮೊಳಗೆ ಕೋಪವನ್ನ ಸಂಗ್ರಿಹಿಸಿಕೊಳ್ಳುತ್ತಾ ಹೊರಗೆ ತೋರಿಸಿಕೊಳ್ಳದೇ ಬರುತ್ತಿದ್ದರು ಈ ರೀತಿ ಕನಸು ಬೀಳಬಹುದು. ಅಲ್ಲದೇ ಶೇಖರಣೆ ಆದ ಕೋಪ ಒಮ್ಮೆಲೆ ಜ್ವಾಲಾಮುಖಿಯಾಗಿ ಸ್ಪೋಟಿಸುವ ಮುನ್ನವೇ ನೀವು ಎಚ್ಚೆತ್ತು ಬಾವನೆಗಳನ್ನ ಾ ಕ್ಷಣವೇ ಹೊರಹಾಕುವುದನ್ನ ಕಲಿಯಲೇಬೇಕು.
ನಿಮ್ಮ ಜೀವನವನ್ನು ಉತ್ತಮಗೊಳಿಸಲು ನೀವು ಆಧ್ಯಾತ್ಮಿಕತೆಯ ಹಾದಿಯೆಡೆಗೆ ಸಾಗುತ್ತಿದ್ದಾಗ್ಲೂ ಕೂಡ ನಿಮ್ಮ ಕನಸಿನಲ್ಲಿರುವ ಬೆಂಕಿ ಬುದ್ಧಿವಂತಿಕೆಯ ಸಂಕೇತವಾಗಿರಬಹುದು. ನೀವು ಜ್ಞಾನೋದಯ ಹೊಂದಲು ಬಯಸುತ್ತೀರಿ ಎಂದರ್ಥ. ಇದಲ್ಲದೆ, ಬೆಂಕಿಯನ್ನು ಶುದ್ಧೀಕರಣಕ್ಕೂ ಬಳಸಲಾಗುತ್ತದೆ. ಆದ್ದರಿಂದ, ಬೆಂಕಿಯ ಬಗ್ಗೆ ಕನಸು ಕಾಣುವುದು ನಿಮ್ಮ ಮನಸ್ಸಿನಲ್ಲಿ ಕೊಳಕು ಸಂಗ್ರಹವಾಗುವ ಮೊದಲು ನಿಮ್ಮ ಆಲೋಚನೆಗಳನ್ನು ಸ್ವಚ್ಛಗೊಳಿಸುವಂತೆ ನೀಡುತ್ತಿರುವ ಸೂಚನೆಯಿರಬಹುದು.
ನಾವು ಕನಸನ್ನು ಬೇರೆ ದೃಷ್ಟಿಕೋನದಿಂದ ನೋಡುವುದಾದರೆ, ನೀವು ಬೆಂಕಿಗೆ ಹೆದರುತ್ತಿದ್ದೀರಿ ಎಂದರ್ಥ. ಜೀವ ಮತ್ತು ಆಸ್ತಿಯನ್ನು ನಾಶಪಡಿಸುವ ಬೆಂಕಿಯ ಬಗ್ಗೆ ನೀವು ಸುದ್ದಿ ಓದಿದ್ರೆ ಅಥವ ಅಥವಾ ಕೇಳಿದ್ದು, ನೋಡಿದ್ರೆ ಅದು ನಿಮ್ಮ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರಿರಬಹುದು. ಆದ್ದರಿಂದ ಭವಿಷ್ಯದಲ್ಲಿ ಇಂತಹ ಕನಸ್ಸು ನಿಮಗೆ ಬಂದ್ರೂ ಆಶ್ಚರ್ಯವಿಲ್ಲ.








