ಕುಡಿದ ಮತ್ತಿನಲ್ಲಿ 9 ಜನರ ಮೇಲೆ ಕಾರು ಹತ್ತಿಸಿದ ಚಾಲಕ
ದೆಹಲಿ : ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ಸುಮಾರು 9 ಜನರ ಮೇಲೆ ಕಾರು ಹತ್ತಿಸಿರುವ ಘಟನೆ ದೆಹಲಿಯ ನೈನಿತಾಲ್‌ನಲ್ಲಿ ನಡೆದಿದೆ.
ದೆಹಲಿಯ ನಿವಾಸಿ 38 ವರ್ಷದ ಅಮಿತ್ ಬಹುಗಣ ಕುಡಿದು ಕಾರು ಚಲಾಯಿಸಿದ ಆರೋಪಿಯಾಗಿದ್ದಾನೆ. ಈತ ವೇಗವಾಗಿ ಬಂದು 9 ಜನರಿಗೆ ಗುದ್ದಿಕೊಂಡು ಹೋಗಿದ್ದು, ಸ್ಥಳದಲ್ಲಿ ನಿಲ್ಲಿಸಿದ್ದ 6 ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದಾನೆ.
ಗಾಯಗೊಂಡಿದ್ದವರನ್ನ ಚಿಕಿತ್ಸೆಗಾಗಿ ಬಿಡಿ ಪಾಂಡೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.. ಘಟನೆಯ ಬಳಿಕ ಆರೋಪಿ ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ..
ಬಳಿಕ ಆತನನ್ನ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದ್ದು, ಪರೀಕ್ಷೆಯಲ್ಲಿ ಡ್ರಂಕ್ ಅಂಡ್ ಡ್ರೈವ್ ದೃಢಪಟ್ಟಿದೆ. ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು ಆತನನ್ನ ಬಂಧಿಸಿದ್ದಾರೆ..