ಹೊಸ ಸಾಮಾಜಿಕ ಜಾಲತಾಣ ತರಲು ಮುಂದಾದ ಎಲಾನ್ ಮಸ್ಕ್
ಟೆಸ್ಟ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಟ್ವೀಟರ್ ಖರೀದಿಯಿಂದ ಹಿಂದೆ ಸರಿದಿರುವುದು ನಿಮಗೆ ಗೊತ್ತೆ ಇದೆ. ಇದೇ ಕಾರಣಕ್ಕೆ ಟ್ವೀಟರ್ ನೊಂದಿಗೆ ಕಾನೂನು ಹೋರಾಟ ಕೂಡ ನಡೆಸುತ್ತಿದ್ದಾರೆ. ಇದರ ಮಧ್ಯೆ ಎಲಾನ್ ಮಸ್ಕ್ ದೊಡ್ಡದೊಂದು ಕೆಲಸಕ್ಕೆ ಕೈ ಹಾಕಿದ್ದಾರೆ. ವರದಿಗಳ ಪ್ರಕಾರ ಎಲೋನ್ ಮಸ್ಕ್ ಶೀಘ್ರದಲ್ಲೇ ತನ್ನ ಹೊಸ ಸಾಮಾಜಿಕ ಜಾಲತಾಣ ವೇದಿಕೆ X.com ನ್ನ ಪ್ರಾರಂಭಿಸಬಹುದು ಎಂದು ಎನ್ನಲಾಗಿದೆ.
ಎಲೋನ್ ಮಸ್ಕ್ ಟ್ವೀಟರ್ ನ್ನ 44 ಶತಕೋಟಿ ಡಾಲರ್ ಗೆ ಖರೀದಿಸಲು ಪ್ರಸ್ತಾಪಿಸಿದ್ದರು, ಆನಂತರ ಒಪ್ಪಂದದಿಂದ ಹಿಂದೆ ಸರಿದಿದ್ದರು. ಟ್ವೀಟರ್ ನಲ್ಲಿರುವ ನಕಲಿ ಖಾತೆಗಳ ಬಗ್ಗೆ ನಿಖರವಾದ ಮಾಹಿತಿ ನೀಡುವವರೆಗೂ ಒಪ್ಪಂದ ಪೂರ್ಣಗೊಳಿಸುವುದಿಲ್ಲ ಎಂದು ಹೇಳಿದ್ದರು. ಖರೀದಿಯಿಂದ ಹಿಂದೆ ಸರಿದಿದ್ದಕ್ಕೆ ಎಲೋನ್ ಮಸ್ಕ್ ವಿರುದ್ಧ ಟ್ವೀಟರ್ ಮೊಕದ್ದೆಮೆ ಹೊಡಿದೆ.
ಟ್ವೀಟರ್ ಖರೀದಿಯ ಗೊಂದಲದಿಂದಾಗಿ ಎಲೋನ್ ಮಸ್ಕ್ ಹೊಸ ಸಾಮಾಜಿಕ ಜಾಲತಾಣವನ್ನ ಪ್ರಾರಂಭಿಸಲು ಮುಂದಾಗಿದ್ದಾರೆ. ಇದನ್ನ ಸ್ವತಃ ಎಲೋನ್ ಮಸ್ಕ್ ಅವರೇ ಘೋಷಿಸಿದ್ದಾರೆ. ಎಲೋಮ್ ಮಸ್ಕ್ ಅಭಿಮಾನಿಯೊಬ್ಬ ಟ್ವೀಟರ್ ಖರೀದಿ ಸಾಧ್ಯವಾಗದಿದ್ದರೆ ತಮ್ಮದೇ ಆದ ಹೊಸ ಜಾಲತಾಣವನ್ನ ರಚಿಸುವುದರ ಬಗ್ಗೆ ಪರಿಗಣಿಸಬಹುದು ಎಂದು ಟ್ವೀಟ್ ಮಾಡಿದ್ ಅದಕ್ಕೆ ಎಲೋನ್ ಮಸ್ಕ್ X.Com ಎಂದು ರಿಪ್ಲೆ ಮಾಡಿದ್ದರು. ಅದರಲ್ಲಿ ಹೆಚ್ಚಿನ ಮಾಹಿತಿ ಇರಲಿಲ್ಲ.
X.com ಎಂದರೇನು ?
X.com ಹೊಸ ಹೆಸರಲ್ಲ. ಇದು ಎರಡು ದಶಕಗಳ ಹಿಂದೆ ಎಲೋನ್ ಮಸ್ಕ್ನಿಂದ ಪ್ರಾರಂಭವಾದ ಸ್ಟಾರ್ಟಪ್ ನ ಡೊಮೇನ್ ಹೆಸರಾಗಿತ್ತು. ನಂತರ X.com ಮತ್ತು PayPal ನ್ನ ವಿಲೀನಗೊಳಿಸಲಾಯಿತು. ಪೇಪಾಲ್ ಅನ್ನು 2002 ರಲ್ಲಿ ಇಬೇಗೆ ಮಾರಾಟ ಮಾಡಲಾಯಿತು. ನಂತರ ಎಲೋನ್ ಮಸ್ಕ್ ಮತ್ತೆ 2017 ರಲ್ಲಿ ಪೇಪಾಲ್ ಡೊಮೇನ್ ಅನ್ನು ಸ್ವಾಧೀನಪಡಿಸಿಕೊಂಡರು.