Bengaluru: ರಾಜಕಾಲುವೆ ಒತ್ತುವರಿ – ಮಹದೇವಪುರದಲ್ಲಿ JCB ಕಾರ್ಯಾಚರಣೆ ಶುರು..
ಬೆಂಗಳೂರು: ನಗರದ ಮಹಾದೇವಪುರದಲ್ಲಿ ಇತ್ತೀಚೆಗೆ ಭಾರೀ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಉಂಟಾಗಿತ್ತು. ವಸತಿ ಪ್ರದೇಶಗಳು ಮತ್ತು ರಸ್ತೆಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಸಿತ್ತು. ಈ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.
ಮಹದೇವಪುರ ವಲಯದ ಚಿನ್ನಪ್ಪನ ಹಳ್ಳಿ, ಬಾಗ್ಮನೆ, ಚೆಲ್ಲಘಟ್ಟ ಮತ್ತು ಬಸವನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೆರೆವು ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು ಈ ಭಾಗದ ರಾಜ ಕಾಲುವೆ ಒತ್ತುವರಿ ದಾರರಿಗೆ ಶಾಕ್ ನೀಡಲು ಬಿಬಿಎಂಪಿ ಸಿದ್ಧವಾಗಿದೆ.
ಇಂದು ಮಹದೇವಪುರ ವಲಯ ಬಸವಣ್ಣನಗರದ ಗೋಪಾಲನ್ ಕಾಲೇಜು ಕ್ರೀಡಾಂಗಣದಲ್ಲಿ ತೆರವು ಕಾರ್ಯವನ್ನ ಶುರು ಮಾಡಲಾಗಿದೆ.
ಕಂದಾಯ ಇಲಾಖೆಯ ಸರ್ವೆ ವರದಿಯಲ್ಲಿ ಮಳೆ ಹಾನಿಗೆ ಈ ಅಪಾರ್ಟ್ಮೆಂಟ್ಗಳೇ ಕಾರಣ ಎಂಬುದು ತಿಳಿದುಬಂದಿತ್ತು. 145 ಅಪಾರ್ಟ್ಮೆಂಟ್ಗಳಿಂದ ರಾಜಕಾಲುವೆ ಹಾಗೂ ಸಬ್ ಕಾಲುವೆಗಳ ಒತ್ತುವರಿಯಾಗಿತ್ತು. ಹಲವೆಡೆ ಕಾಂಪೌಂಡ್, ರಸ್ತೆ, ಮನೆ, ಪಾರ್ಟ್ಮೆಂಟ್ಗಳ ನಿರ್ಮಾಣ ಮಾಡಿಕೊಂಡು ಒತ್ತುವರಿ ಮಾಡಲಾಗಿದೆ. ಇಂದು 8ಕ್ಕೂ ಹೆಚ್ಚು ಕಡೆಗಳಲ್ಲಿ ಒತ್ತುವರಿ ತೆರವು ಕಾರ್ಯ ಪ್ರಾರಂಭವಾಗಿದೆ.








