ಹರಿಯಾಣದ ನೂಹ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋಮು ಗಲಭೆ ನಡೆದ ಬೆನ್ನಲ್ಲಿಯೇ ಹಲವು ಗ್ರಾಮಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಪ್ರವೇಶ ನಿಷೇಧಿಸಿ ರಾಜ್ಯದ ಮೂರು ಜಿಲ್ಲೆಗಳ 50ಕ್ಕೂ ಹೆಚ್ಚು ಪಂಚಾಯಿತಿಗಳು ಆದೇಶ ನೀಡಿವೆ.
ಆನ್ ಲೈನ್ ನಲ್ಲಿ ಈ ಕುರಿತ ಪ್ರತ್ರಗಳು ಜೋರಾಗಿ ಹರಿದಾಡುತ್ತಿರುವುದರಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ರೆವಾರಿ, ಮಹೇಂದ್ರಗಢ ಹಾಗೂ ಜಜ್ಜರ್ ಜಿಲ್ಲೆಯ 50ಕ್ಕೂ ಅಧಿಕ ಪಂಚಾಯಿತಿಗಳು ಇದೇ ರೀತಿಯ ಪತ್ರಗಳನ್ನು ಬರೆದಿದ್ದು, ಅಲ್ಲಿನ ಸರಪಂಚ್ ಗಳು ಸಹಿ ಮಾಡಿದ್ದಾರೆ.
ಗ್ರಾಮಗಳಲ್ಲಿ ವಾಸಿಸುತ್ತಿರುವ ಮುಸ್ಲಿಂರು ಪೊಲೀಸರಿಗೆ ದಾಖಲೆಗಳನ್ನು ಸಲ್ಲಿಸಬೇಕು ಎಂದು ಈ ಪತ್ರಗಳಲ್ಲಿ ಸೂಚಿಸಲಾಗಿದೆ.
ಈ ಪತ್ರಗಳಿಗೆ ಸಂಬಂಧಿಸಿದಂತೆ ಎಲ್ಲ ಸಂಬಂಧಪಟ್ಟ ಪಂಚಾಯಿತಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ನರ್ನಾಲ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ವಿಭಾಗೀಯ ಕಚೇರಿಗಳಿಗೆ ಸೂಚಿಸಿದ್ದಾರೆ.








