ಬಿಜೆಪಿ ಏನು ಮಳೆ ನಿಲ್ಲಿಸೋಕೆ ಆಗುತ್ತಾ..? : ಕೆ.ಎಸ್.ಈಶ್ವರಪ್ಪ
ಮಡಿಕೇರಿ : ಬಿಜೆಪಿ ಏನು ಮಳೆಯನ್ನ ನಿಲ್ಲಿಸೋಕೆ ಆಗುತ್ತಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಬೇಜವಾಬ್ದಾರಿ ಹೇಳಿದ್ದಾರೆ.
ರಾಜ್ಯದಲ್ಲಿ ಮಳೆಯಿಂದಾಗಿ ಜನರು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಿದ್ದರು ಸಚಿವರು, ಶಾಸಕರು ಮಳೆ ಹಾನಿ ಕ್ಷೇತ್ರಗಳಿಗೆ ಹೋಗದೇ ಚುನಾವಣಾ ದೃಷ್ಟಿಯಿಂದ ಜನಸ್ವರಾಜ್ ಯಾತ್ರೆ ಮಾಡುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ.
ಈ ಬಗ್ಗೆ ಮಡಿಕೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಕೆ.ಎಸ್.ಈಶ್ವರಪ್ಪ, ಮಳೆ ನಿಲ್ಲುಸೋದಕ್ಕೆ ಬಿಜೆಪಿಗೆ ಬರುತ್ತಾ..? ಈಗಾಗಲೇ ನಮ್ಮ ಸಚಿವರು ಶಾಸಕರು ಮಳೆ ಹಾನಿ ಕ್ಷೇತ್ರಗಳಿಗೆ ಹೋಗುತ್ತಿದ್ದಾರೆ ಎಂದು ಸಮಜಾಯಿಸಿ ನೀಡಿದರು.
ಇದೇ ವೇಳೆ ರೈತರಿಗೆ ಪರಿಹಾರ ನೀಡುವ ಬಗ್ಗೆ ಮಾತನಾಡಿದ, ಎಲ್ಲಾ ಜಿಲ್ಲಾಧಿಕಾರಿಗಳ ಬಳಿ ಹಣ ಇದೆ. ಆದ್ರೂ ಕಾಂಗ್ರೆಸ್ ನವರು ಸುಮ್ಮನೆ ಟೀಕಿಸುತ್ತಾರೆ.
ಕೊಡಗಿನಲ್ಲಿ 45 ವರ್ಷಗಳಿಂದ ಬಂದಿರದ ಮಳೆ ಈ ಭಾರೀ ಬಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಡಿಕೇರಿಗೆ ಬರಬೇಕಿತ್ತು.
ಆದರೆ ಮಳೆ ಹಾನಿ ಸಮೀಕ್ಷೆ ನಡೆಸಲು ಹೋಗಿದ್ದಾರೆ. ಸರ್ಕಾರ ಎಲ್ಲಾ ಕೆಲಸವನ್ನು ಮಾಡುತ್ತಿದೆ ಎಂದು ಕೆ.ಎಸ್.ಈಶ್ವರಪ್ಪನವರು ಹೇಳಿದ್ದಾರೆ.









