`ಸಿದ್ದರಾಮಯ್ಯ ಯಾವಾಗ ಕುಡಿತಾರೋ ಯಾವಾಗ ಕುಡಿಯಲ್ಲೋ ಗೊತ್ತಾಗಲ್ಲ’ eshwarappa saaksha tv
ಕಲಬುರಗಿ : `ಸಿದ್ದರಾಮಯ್ಯ ಯಾವಾಗ ಕುಡಿತಾರೋ ಯಾವಾಗ ಕುಡಿಯಲ್ಲೋ ಗೊತ್ತಾಗಲ್ಲ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಭಯೋತ್ಪಾದಕ ಎಂದಿದ್ದರು.
ಇದಕ್ಕೆ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಸಿದ್ದರಾಮಯ್ಯ ಯಾವಾಗ ಕುಡಿತಾರೋ ಯಾವಾಗ ಕುಡಿಯಲ್ಲೊ ಗೊತ್ತಿಲ್ಲ. ಅವರು ಹೆಂಡಾ ಕುಡಿದಾಗ ಒಂದು ಮಾತನಾಡುತ್ತಾರೆ. ಹೆಂಡ ಕುಡಿಯದೇ ಇದ್ದಾಗ ಒಂದು ಮಾತನಾಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ ಒಬ್ಬ ಮಹಾನ್ ಮೋಸಗಾರ ಎಂದ ಈಶ್ವರಪ್ಪ, ಸಿದ್ದರಾಮಯ್ಯರ ರಕ್ತದ ಕಣಕಣದಲ್ಲಿ ಮೋಸ ಇದೆ. ಮೊದಲು ಜೆಡಿಎಸ್ ಗೆ ಮೋಸ ಮಾಡಿದ್ರು, ಈಗ ಕಾಂಗ್ರೆಸ್ ಗೂ ಮೋಸ ಮಾಡಲು ರೆಡಿ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.