ನವದೆಹಲಿ: ಇಸ್ರೇಲ್ ರಾಷ್ಟ್ರ ಹಮಾಸ್ ಉಗ್ರರ ವಿರುದ್ಧ ಸಮರ ಸಾರಿದೆ. ಈ ಸಂದರ್ಭದಲ್ಲಿ ದೆಹಲಿಯಲ್ಲಿನ ರಾಯಭಾರ ಕಚೇರಿಯ ಬಳಿ ಮಂಗಳವಾರ ಸಂಜೆ ಸ್ಫೋಟ ಸಂಭವಿಸಿದ್ದು, ಆ ಸ್ಫೋಟಕ್ಕೆ ಕಾರಣರ ಪತ್ತೆಗೆ ಭದ್ರದಾ ಪಡೆಗಳು ತೀವ್ರ ಶೋಧ ಕಾರ್ಯ ಆರಂಭಿಸಿವೆ.
ಬಾಂಬ್ ಸ್ಫೋಟಗೊಳ್ಳುವ ಕೆಲವೇ ಕ್ಷಣಗಳ ಮುನ್ನ ಇಬ್ಬರು ಯುವಕರು ಸ್ಫೋಟ ನಡೆದ ಸ್ಥಳದಲ್ಲಿ ಅಡ್ಡಾಡುತ್ತಿರುವ ವಿಡಿಯೋ ದೊರೆತಿದೆ. ದೆಹಲಿಯ ತನ್ನ ರಾಯಭಾರ ಕಚೇರಿ ಹತ್ತಿರ ಸಂಭವಿಸಿದ ಸ್ಫೋಟ ಶಂಕಿತ ಭಯೋತ್ಪಾದಕ ದಾಳಿಯಂತಿದ್ದು, ಭಾರತದಲ್ಲಿರುವ ತನ್ನ ಪ್ರಜೆಗಳು ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಇಸ್ರೇಲ್ ಸೂಚಿಸಿದೆ. ಅಲ್ಲದೇ, ಅದೇ ಪ್ರದೇಶದಲ್ಲಿ ಇಸ್ರೇಲ್ ನಿಂದಿಸುವ ಪತ್ರ ಕೂಡ ದೊರತೆದಿದೆ ಎನ್ನಲಾಗಿದೆ. ಘಟನೆಯ ಬೆನ್ನಲ್ಲಿಯೇ ಇಸ್ರೇಲ್, ಭಾರತದಲ್ಲಿ ನೆಲೆಸಿರುವ ತನ್ನ ಪ್ರಜೆಗಳಿಗೆ ಇಸ್ರೇಲ್ ಲಾಂಛನವನ್ನು ಪ್ರದರ್ಶನ ಮಾಡುವುದು, ಭದ್ರತೆ ಇಲ್ಲದ ದೊಡ್ಡ ಕಾರ್ಯಕ್ರಮಗಳಿಗೆ ತೆರಳುವುದು, ಹಮ್ಮಿಕೊಳ್ಳುವುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಡಬೇಡಿ ಎಂದು ಸೂಚಿಸಿದೆ.