ಮಂಡ್ಯ | ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಮಹಿಳೆ
ಮೈಸೂರು : ಬ್ರೈನ್ ಟ್ಯೂಮರ್ ಯಿಂದ ಮೃತಪಟ್ಟಿದ್ದ ಮಹಿಳೆ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.
ಮಳವಳ್ಳಿಯ ನಾಗಮ್ಮ ಬ್ರೈನ್ ಟ್ಯೂಮರ್ ನಿಂದ ಮೃತಪಟ್ಟಿದ್ದು, ತಮ್ಮ ಅಂಗಾಂಗ ದಾನ ಮಾಡಿದ್ದಾರೆ.
ಆ ಮೂಲಕ ಐವರ ಜನರ ಬಾಳಿಗೆ ಬೆಳಕಾಗಿದ್ದಾರೆ. ಪತಿ, ಮಕ್ಕಳ ಒಪ್ಪಿಗೆ ಮೇರೆಗೆ ನಾಗಮ್ಮ ಅಂಗಾಂಗ ದಾನ ಮಾಡಲಾಗಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ಮೂಲದ 45 ವರ್ಷದ ನಾಗಮ್ಮ ಅವರಿಗೆ ಬ್ರೈನ್ ಟ್ಯೂಮರ್ ಆಗಿತ್ತು.
ಜನವರಿ 13ರಂದು ಅವರನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಇದಾದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು.
ಇಲ್ಲಿ ತೀವ್ರ ನಿಗಾ ಘಟಕದಲ್ಲಿಟ್ಟು, ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದು, ಅವರ ಮೆದುಳು ನಿಷ್ಕ್ರಿಯಗೊಂಡಿರುವ ಬಗ್ಗೆ ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ಬಳಿಕ ಅವರ ಒಪ್ಪಿಗೆ ಮೇರೆಗೆ ಅಂಗಾಂಗ ದಾನ ಮಾಡಲಾಗಿದೆ.









