ಹಿರಿಯ ನಟಿ ಹಾಗೂ ಸಂಗೀತದಲ್ಲಿಯೂ ಸಾಕಷ್ಟು ಹೆಸರು ಗಳಿಸಿದ್ದ ನಟಿ ಇಹಲೋಕ ತ್ಯಜಿಸಿದ್ದಾರೆ.
ಮಲೆಯಾಳಂನ (Malayalam) ಆರ್.ಸುಬ್ಬಲಕ್ಷ್ಮಿ (R.Subbalakshmi) ನಿಧನರಾಗಿದ್ದಾರೆ (Passed away). 87 ವಯಸ್ಸಿನ ನಟಿ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಸಿನಿ ರಂಗ ಅಷ್ಟೇ ಅಲ್ಲದೆ, ಸಂಗೀತದಲ್ಲಿಯೂ ಸಾಕಷ್ಟು ಹೆಸರು ಮಾಡಿದ್ದರು. ಅನೇಕ ಸ್ಟಾರ್ ನಟರ ಜೊತೆಗೆ ಕೆಲಸ ಮಾಡಿದ್ದ ಸುಬ್ಬಲಕ್ಷ್ಮಿ, ಅಜ್ಜಿ ಪಾತ್ರಗಳನ್ನು ಇತ್ತೀಚೆಗೆ ನಿರ್ವಹಿಸುತ್ತಿದ್ದರು.
ನಟಿಯ ನಿಧನಕ್ಕೆ ಸೆಲೆಬ್ರಿಟಿಗಳು ಸೇರಿದಂತೆ ಕೇರಳದ ಸಿಎಂ ಸಂತಾಪ ಸೂಚಿಸಿದ್ದಾರೆ.