ಮೆಕ್ಸಿಕನ್ ರಾಜ್ಯದ ಓಕ್ಸಾಕಾದಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದ್ದು, 18 ಜನ ಸಾವನ್ನಪ್ಪಿದ್ದಾರೆ ಎಂದು ಸ್ತಳೀಯ ಅಧಿಕಾರಿಗಳು ಹೇಳಿದ್ದಾರೆ.
ಘಟನೆಯಲ್ಲಿ ಸಾವನ್ನಪ್ಪಿದ ಪ್ರಯಾಣಿಕರು ವಲಸಿಗರು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಬಲಿಯಾದವರ ಪೈಕಿ ಮೂವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ. ಇವರೆಲ್ಲರೂ ವೆನೆಜುವೆಲಾ ಹಾಗೂ ಹೈಟಿಯಿಂದ ಬಂದಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆಯಲ್ಲಿ ಕನಿಷ್ಠ 27 ಜನರು ಗಾಯಗೊಂಡಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರ್ವತ ಪ್ರದೇಶದಲ್ಲಿರುವ ಓಕ್ಸಾಕಾ – ಕ್ವಾಕ್ನೋಪಾಲನ್ ಹೆದ್ದಾರಿಯ ತಿರುವಿನಲ್ಲಿ ದೊಡ್ಡ ಬಸ್ ಪಲ್ಟಿಯಾಗಿದೆ ಹಾಗೂ ಹಾನಿಯಾಗಿದೆ. ಅಪಘಾತದ ಕಾರಣದ ಕುರಿತು ನಿಖರ ಮಾಹಿತಿ ತಿಳಿದು ಬಂದಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ ಎದು ಅಧಿಕಾರಿಗಳು ಹೇಳಿದ್ದಾರೆ.