ನವದೆಹಲಿ: ಕೇಂದ್ರ ಸರ್ಕಾರ ನಿನ್ನೆ ಟಿಟ್‍ಟಾಕ್, ವಿ ಚಾಟ್ ಸೇರಿದಂತೆ 59 ಚೀನಿ ಆಪ್‍ಗಳನ್ನು ಬ್ಯಾನ್ ಮಾಡಿದ ಬೆನ್ನಲ್ಲೇ ಭಾರತ ಮೂಲದ `ಚಿಂಗಾರಿ’ ಆಪ್‍ಗೆ ಫುಲ್ ಡಿಮ್ಯಾಂಡ್ ಬಂದಿದೆ.
ಯಾರ ಬಾಯಲ್ಲಿ ನೋಡಿದ್ರೂ ಚಿಂಗಾರಿ ಆಪ್‍ನದ್ದೇ ಮಾತು. ಟಿಕ್‍ಟಾಕ್‍ಗೆ ಸರಿಯಾಟಿಯಾಗಬಲ್ಲ ಈ `ಚಿಂಗಾರಿ’ ಆಪ್‍ಅನ್ನು ಕೆಲವೇ ನಿಮಿಷಗಳ ಅವಧಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಡೌನ್‍ಲೋಡ್ ಮಾಡಿಕೊಳ್ಳಲಾಗಿದೆ.
ಭಾರತದ ಮೊಬೈಲ್ ಗ್ರಾಹಕರ ಹಿತದೃಷ್ಟಿಯಿಂದ ಚೀನಾ ಆಪ್‍ಗಳನ್ನು ಬ್ಯಾನ್ ಮಾಡಲಾಗಿದೆ. ದೇಶದ ಸೈಬರ್ ಕ್ಷೇತ್ರದ ಸಾರ್ವಭೌಮತೆ ಹಾಗೂ ಸುರಕ್ಷತೆ ಕಾಪಾಡಲು ಈ ಕ್ರಮಕ್ಕೆ ಮುಂದಾಗಿರುವುದಾಗಿ ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಅಧಿಕಾರಿಗಳು ಹೇಳುತ್ತಿದ್ದಾರೆ.
ಚೀನಿ ಆಪ್‍ಗಳು ಮೊಬೈಲ್ ಗ್ರಾಹಕರ ರಸಹ್ಯ ಮಾಹಿತಿ ಕದಿಯುತ್ತಿದ್ದು, ಆಪ್‍ಗಳನ್ನು ಬ್ಯಾನ್ ಮಾಡುವಂತೆ ಈ ಹಿಂದೆ ಸಂಸತ್ತಿನಲ್ಲೇ ಕೂಗು ಕೇಳಿಬಂದಿತ್ತು. ಇತ್ತೀಚೆಗೆ ಲಡಾಕ್‍ನ ಗಾಲ್ವನ್ ಕಣಿವೆಯಲ್ಲಿ ಚೀನಿ ಪಡೆಗಳ ದುರಾಕ್ರಮಣ ನಂತರ ಚೀನಾ ಆಪ್‍ಗಳ ಬ್ಯಾನ್ ಹ್ಯಾಶ್ ಟ್ಯಾಗ್ ಅಭಿಯಾನ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಆರಂಭವಾಗಿತ್ತು.
ಆಫ್ ಬ್ಯಾನ್ ಬೆನ್ನಲ್ಲೇ ನಿರುದ್ಯೋಗ ಭೀತಿ..!
ಚೀನಾ ಮೂಲದ ಆಪ್‍ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದ ಬೆನ್ನಲ್ಲೇ, ದೇಶದಲ್ಲಿ ನಿರುದ್ಯೋಗ ಭೀತಿ ಎದುರಾಗಿದೆ. ಚೀನಾ ಮೂಲದ ಕಂಪನಿಗಳು ಭಾರತದಲ್ಲಿ ಸಾವಿರಾರು ಕೋಟಿ ಬಂಡವಾಳ ಹೂಡಿವೆ. ಅದಕ್ಕೆ ತಕ್ಕಂತೆ ಲಕ್ಷಾಂತರ ಸಂಖ್ಯೆಯಲ್ಲಿ ಭಾರತೀಯರಿಗೆ ಉದ್ಯೋಗ ನೀಡಿವೆ. ಹೀಗಾಗಿ ಈ ಆಪ್‍ಗಳ ಬ್ಯಾನ್‍ನಿಂದಾಗಿ ಉದ್ಯೋಗ ಕಳೆದುಕೊಳ್ಳುವವರಿಗೆ ಪರ್ಯಾಯ ವ್ಯವಸ್ಥೆ ಏನು ಎಂಬುದಕ್ಕೆ ಕೇಂದ್ರ ಸರ್ಕಾರದ ಬಳಿ ಯಾವುದೇ ಉತ್ತರ ಇಲ್ಲ.
ಆಪ್ ಬ್ಯಾನ್ ಮಾಡಿರುವುದು ಲಾಕ್‍ಡೌನ್ ಬಳಿಕ ಪ್ರಧಾನಿ ಮೋದಿ ಅವರ ಕನಸಿನ ಆತ್ಮನಿರ್ಭರ ಸಂಕಲ್ಪಕ್ಕೆ ಪುಷ್ಠಿ ನೀಡಲಾಗಿದೆ. ಚೀನಾ ಆಪ್‍ಗಳ ಬದಲಿಗೆ ಭಾರತೀಯ ಆಪ್‍ಗಳ ಸೃಷ್ಟಿಗೆ ಹೊಸ ವೇದಿಕೆ ಕಲ್ಪಿಸಿಕೊಡಲಿದೆ ಎನ್ನುವುದು ಕೇಂದ್ರದ ಸಮರ್ಥನೆ.