FIFA World Cup: ಫಿಫಾ ವಿಶ್ವಕಪ್ ನ ಗ್ರೂಪ್-ಇ ಪಂದ್ಯದಲ್ಲಿ ಕೋಸ್ಟರಿಕ ತಂಡ ಜಪಾನ್ ವಿರುದ್ಧ 1-0 ಗೋಲುಗಳ ಅಂತರದಿಂದ ರೋಚಕ ಜಯ
ದೋಹದಲ್ಲಿ ಇಂದು ನಡೆದ ಫಿಫಾ ವಿಶ್ವಕಪ್ ನ ಗ್ರೂಪ್-ಇ ಪಂದ್ಯದಲ್ಲಿ ಕೋಸ್ಟರಿಕ ತಂಡ ಜಪಾನ್ ವಿರುದ್ಧ 1-0 ಗೋಲುಗಳ ಅಂತರದಿಂದ ರೋಚಕ ಜಯ ಗಳಿಸಿದೆ.
ಅಹ್ಮದ್ ಬಿನ್ ಅಲಿ ಸ್ಟೇಡಿಯಮ್ ನಲ್ಲಿ ಇಂದು ನಡೆದ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಗೋಲು ಗಳಿಸಲು ಎರಡೂ ತಂಡಗಳು ವಿಫಲವಾಗಿದ್ದವು .
ದ್ವಿತಿಯಾರ್ಧದ 81ನೇ ನಿಮಿಷ ದಲ್ಲಿ ಕೀಶೇರ್ ಪುಲ್ಲರ್ ಒಂದು ಗೋಲು ಗಳಿಸುವುದರ ಮೂಲಕ ಕೋಸ್ಟರಿಕಕ್ಕೆಅದ್ಭುತ ಗೆಲುವು ತಂದು ಕೊಟ್ಟರು. ಸ್ಪೇನ್ ವಿರುದ್ದ ತಾನಾಡಿದ ಮೊದಲ ಪಂದ್ಯದಲ್ಲಿ 7-0 ಗೋಲುಗಳ ಅಂತರದಿಂದ ಸೋತಿದ್ದ ಕೋಸ್ಟರಿಕಕ್ಕೆ ಈ ಗೆಲುವು ಅಭಿಮಾನಿಗಳ ಪಾಲಿಗೆ ಹೊಸ ಹುರುಪು ತಂದು ಕೊಟ್ಟಿದೆ.
ತನ್ನ ಮೊದಲ ಪಂದ್ಯದಲ್ಲಿ ಜರ್ಮನಿಗೆ ಸೋಲುಣಿಸಿ ಗೆಲುವಿನ ನಗೆ ಬೀರಿದ್ದ ಜಪಾನ್ ಇಂದು ಸೋಲುಂಡಿದೆ.
fifa-world-cup-costa-rica-beat-japan-by-1-0-in-group-e-match-of-fifa-world-cup