FIFA World Cup: ಅದ್ದೂರಿಯಾಗಿ ಆರಂಭಗೊಂಡ ಫಿಪಾ ಪುಟ್ಬಾಲ್ ವಿಶ್ವಕಪ್
ಪ್ರತಿಷ್ಠಿತ ಫಿಪಾ ಪುಟ್ಬಾಲ್ ವಿಶ್ವಕಪ್ ಅದ್ದೂರಿಯಾಗಿ ಆರಂಭಗೊಂಡಿದೆ. ಕ್ರೀಡಾಂಗಣವನ್ನು ಮೊಬೈಲ್ ಫೋನ್ ಟಾರ್ಚ್ ಹಿಡಿದು ಬೆಳಗಿಸಲಾಗಿದ್ದು, ದೋಹಾ ಸಮೀಪದ ಅಲ್ಬೇತ್ ಕ್ರೀಡಾಂಗಣದಲ್ಲಿ ವಿಶ್ವಕಪ್ನ ಉದ್ಘಾಟನಾ ಸಮಾರಂಭ ನಡೆಯಿತು. ಆಮೆರಿಕಾದ ನಟ ಮೋರ್ಗನ್ ಫ್ರೀಮನ್ ವಿಶ್ವಕಪ್ನ ಉದ್ಘಾಟನಾ ಸಮಾರಂಭವನ್ನು ನಡೆಸಿಕೊಟ್ಟರು.
ಅರಬ್ ದೇಶದಲ್ಲಿ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಆಯೋಜಿಸಲಾಗಿದ್ದು, ಇದು ಇತಿಹಾಸದಲ್ಲೇ ಅತ್ಯಂತ ದುಬಾರಿ ವಿಶ್ವಕಪ್ ಆಗಿದೆ.
ಉದ್ಘಾಟನಾ ಸಮಾರಂಭದಲ್ಲಿ ವಿಶ್ವಕಪ್ನಲ್ಲಿ ಭಾಗವಹಿಸುವ 32 ದೇಶಗಳ ಧ್ವಜಗಳೊಂದಿಗೆ ವಿಶೇಷ ಪ್ರದರ್ಶನ ನಡೆಯಿತು ಮತ್ತು ಒಂದೊಂದು ದೇಶದ ಜೆರ್ಸಿ ಒಂದೊಂದಾಗಿ ವೇದಿಕೆ ಮೇಲೆ ಪ್ರದರ್ಶನಗೊಂಡಿತು.
World Cup: The FIFA Football World Cup started with a bang