ಹಣದ ವಿಚಾರಕ್ಕೆ ಮಂಗಳಮುಖಿಯರ ಮಧ್ಯೆ ಮಾರಾಮಾರಿ
ಯಾದಗಿರಿ : ಕಲೆಕ್ಷನ್ ಹಣದ ವಿಚಾರವಾಗಿ ಮಂಗಳಮುಖಿಯರು ಹೊಡೆದಾಡಿಕೊಂಡು ಆಸ್ಪತ್ರೆ ಪಾಲಾಗಿರುವ ಯಾದಗಿರಿಯ ಮಾತಾಮಾಣಿಕೇಶ್ವರಿ ನಗರದಲ್ಲಿ ನಡೆದಿದೆ.
ಮಂಜುಳ ಮತ್ತು ಮಾಯಾ ಎಂಬ ಇಬ್ಬರ ಗ್ಯಾಂಗ್‍ಗಳ ಮಧ್ಯೆ ಪರಸ್ಪರ ಗಲಾಟೆ ನಡೆದಿದೆ. ಹಣದ ವಿಚಾರವಾಗಿ ಮಂಜುಳ ಅಂಡ್ ಗ್ಯಾಂಗ್, ಮಾಯಾ ಮತ್ತು ಅವರ ಸ್ನೇಹಿತರಿರುವ ಮನೆ ಮೇಲೆ ದಾಳಿ ನಡೆಸಿದೆ. ಜೊತೆಗೆ ಅಲ್ಲಿದ್ದವರನ್ನ ಥಳಿಸಿದ್ದಾರೆ.
ಈ ಗಲಾಟೆಯಲ್ಲಿ ಗಾಯಗೊಂಡವರು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮಂಜುಳ ಅಂಡ್ ಗ್ಯಾಂಗ್ ಮೇಲೆ ಚಿನ್ನಾಭರಣ, ಮೊಬೈಲ್ ದೋಚಿಕೊಂಡು ಹೋಗಿರುವ ಆರೋಪ ಸಹ ಕೇಳಿ ಬಂದಿದೆ.









