ಶಾಲಾ ತಂಡಗಳ ಪುಟ್ಬಾಲ್ ಪಂದ್ಯ ವೇಳೆ ಗುಂಡಿನ ದಾಳಿ- 3 ಸಾವು…
ಫುಟ್ಬಾಲ್ ಪಂದ್ಯದ ವೇಳೆ ಗುಂಡಿನ ದಾಳಿ ನಡೆದು ಮೂರು ಮಂದಿ ಸಾವನ್ನಪ್ಪಿರುವ ಘಟನೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ (ಯುಎಸ್ಎ) ಓಹಿಯೋ ರಾಜ್ಯದಲ್ಲಿ ನಡೆದಿದೆ.
2 ಶಾಲಾ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದಾಗ ಕ್ರೀಡಾಂಗಣದ ಹೊರಗೆ ಗುಂಡಿನ ದಾಳಿ ನಡೆದಿದೆ.
ಓಹಿಯೋದ ಹೈಸ್ಕೂಲ್ ಸ್ಟೇಡಿಯಂನಲ್ಲಿ ವಿಟ್ಮೋರ್ ಹೈಸ್ಕೂಲ್ ಮತ್ತು ಸೆಂಟ್ರಲ್ ಕ್ಯಾಥೋಲಿಕ್ ನಡುವೆ ಪಂದ್ಯ ನಡೆಯುತ್ತಿತ್ತು ಈ ನಡುವೆ ಗುಂಡಿನ ದಾಳಿ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ. ಪಂದ್ಯದ ನಡುವೆ ಗುಂಡಿನ ಸದ್ದು ಕೇಳಿಸಿದ್ದು, ಜನರು ಗುಂಡಿನ ನಂತರ ಓಡುತ್ತಿರುವುದನ್ನು ಕಾಣಬಹುದು.
ಆಟ ಮುಗಿಯಲು ಸುಮಾರು ಎಂಟು ನಿಮಿಷಗಳಿರುವಾಗ ಗುಂಡಿನ ಸದ್ದು ಕೇಳಿಸಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆ ಬಳಿಕ ಆಟವನ್ನು ನಿಲ್ಲಿಸಲಾಗಿದೆ.
Firing during school football match in America: 3 killed, stampede also broke out