210 ಕೆಜಿ ಭಾರ ಎತ್ತುವ ಸಂದರ್ಭದಲ್ಲಿ ಅದು ಕುತ್ತಿಗೆ ಮೇಲೆ ಬಿದ್ದು ಫಿಟ್ನೆಸ್ ಟ್ರೈನರ್ವೊಬ್ಬ (Fitness Trainer) ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂಡೋನೇಷ್ಯಾದಲ್ಲಿ (Indonesia) ನಡೆದಿದೆ.
33 ವರ್ಷದ ಜಸ್ಟಿನ್ ವಿಕಿ ಸಾವನ್ನಪ್ಪಿದ ಫಿಟ್ನೆಸ್ ಟ್ರೈನರ್. ಈ ವ್ಯಕ್ತಿ 210 ಕೆಜಿ ವೇಟ್ ಲಿಫ್ಟಿಂಗ್ ಮಾಡಲು ಮುಂದಾಗಿದರು. ಈ ಸಂದರ್ಭದಲ್ಲಿ ಭಾರ ಎತ್ತಲಾಗದೇ ಬಿಟ್ಟಿದ್ದಾರೆ. ಆದರೆ, ಆ ಭಾರ ಕುತ್ತಿಗೆಗೆ ಬಿದ್ದಿದೆ. ಪರಿಣಾಮ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಭಾರ ಬಿದ್ದ ಪರಿಣಾಮ ಅವರ ಕುತ್ತಿಗೆ ಮುರಿದು ಹೋಗಿದೆ. ಪರಿಣಾಮ ಹೃದಯ ಮತ್ತು ಶ್ವಾಸಕೋಶ ಸಂಪರ್ಕಿಸುವ ಪ್ರಮುಖ ನರಗಳಿಗೆ ಹಾನಿಯಾಗಿತ್ತುದೆ. ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಒಳಗಾದ ಕೆಲವೇ ದಿನಗಳಲ್ಲಿ ಜಸ್ಟಿನ್ ಸಾವನ್ನಪ್ಪಿದ್ದಾರೆ.
ಜಸ್ಟಿನ್ ದುರಂತ ಅಂತ್ಯಕ್ಕೆ ಬಂಧು-ಬಾಂಧವರು, ಸ್ನೇಹಿತರು ಸಂತಾಪ ಸೂಚಿಸಿದ್ದಾರೆ. ಜಸ್ಟಿನ್ ಫಿಟ್ನೆಸ್ ಪರಿಣಿತರಾಗಿದ್ದರು. ಇತರರಿಗೆ ಸ್ಫೂರ್ತಿ, ಪ್ರೇರಣೆ ಮತ್ತು ಅಚಲ ಬೆಂಬಲದ ದಾರಿದೀಪವಾಗಿದ್ದರು ಎಂದು ಹಲವರು ನೆನಪಿಸಿಕೊಂಡಿದ್ದಾರೆ.