ಟೆಲ್ ಅವೀವ್: ಇಸ್ರೇಲ್ ಹಾಗೂ ಹಮಾಸ್ ಮಧ್ಯೆ ನಡೆಯುತ್ತಿರುವ ಕದನ ಮುಂದುವರೆದಿದ್ದು, ಒತ್ತೆಯಾಳುಗಳ (Hostages) ಬಿಡುಗಡೆಗಾಗಿ 4 ದಿನಗಳ ಸೀಮಿತ ಕದನ ವಿರಾಮ ಅವಧಿ ವಿಸ್ತರಣೆಯಾಗಿದೆ. ಇದರ ಮಧ್ಯೆ ಐವರು ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ.
ಐವರು ಸಾವನ್ನಪ್ಪಿದ್ದು, ಇಸ್ರೇಲ್ ಸೇನೆ (Israel Army) ತಿಳಿಸಿದೆ. ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಎಲಿಯಾಹು ಮಾರ್ಗಲಿಟ್, ಮಾಯಾ ಗೊರೆನ್, ರೋನೆನ್ ಎಂಗಲ್ ಮತ್ತು ಆರ್ಯೆ ಜಲ್ಮನೋವಿಟ್ಜ್ ಸಾವಿನ ಬಗ್ಗೆ ಕುಟುಂಬದವರಿಗೆ ಇಸ್ರೇಲ್ ರಕ್ಷಣಾ ಪಡೆ ಹಾಗೂ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಸೇನಾ ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ.
3 ಬ್ಯಾಚ್ ನಲ್ಲಿ 40ಕ್ಕೂ ಅಧಿಕ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿದೆ. ಈಗ ಬಿಡುಗಡೆಗಾಗಿ ಕದನ ವಿರಾಮ ವಿಸ್ತರಿಸಿದೆ.