ಜಾಗತಿಕ ಮಟ್ಟದಲ್ಲಿ ಫ್ಲಿಪ್ ಕಾರ್ಟ್ ಗೆ ಹರಿದು ಬಂದ 26,805 ಕೋಟಿ ಬಂಡವಾಳ
ನವದೆಹಲಿ : ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಫ್ಲಿಪ್ ಕಾರ್ಟ್ ಇ ಕಾಮರ್ಸ್ ಸಂಸ್ಥೆಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ದೊಡ್ಡ ಸಂಸ್ತೆಗಳಿಂದ ಬರೋಬ್ಬರಿ 26,805 ಕೋಟಿ ರೂಪಾಯಿ ಬಂಡವಾಳ ಹರಿದುಬಂದಿದೆ.. ಹೌದು ಕೆನಡಾ ಪೆನ್ಶನ್ ಪ್ಲಾನ್ ಇನ್ ವೆಸ್ಟ್ ಮೆಂಟ್ ಬೋರ್ಡ್, ಸಾಫ್ಟ್ ಬ್ಯಾಂಕ್ ವಿಷನ್ ಫಂಡ್ 2 – ವಾಲ್ಮಾರ್ಟ್, ಜಿಐಸಿ ಕಂಪನಿಗಳು ಒಟ್ಟಾಗಿ ಸೇರಿ 26,805 ಕೋಟಿ ರೂಪಾಯಿಗಳನ್ನ ಪ್ಲಿಪ್ ಕಾರ್ಟ್ ನಲ್ಲಿ ಇನ್ವೆಸ್ಟ್ ಮಾಡಿವೆ.. ಫ್ಲಿಪ್ ಕಾರ್ಟ್ ಸಂಸ್ಥೆ ಈ ಬಗ್ಗೆ ತನ್ನ ಪ್ರಕಟನೆಯಲ್ಲಿ ಮಾಹಿತಿ ನೀಡಿದೆ. ಇತರೆ ಮೂರು ಖಾಸಗಿ ಸಂಸ್ಥೆಗಳಿಂದ ಬಂದ ಬಂಡವಾಳದ ಹಣದಿಂದಾಗಿ ಒಟ್ಟು ಫ್ಲಿಪ್ ಕಾರ್ಟ್ ಸಂಸ್ಥೆಯ ಮಾರುಕಟ್ಟೆ ಮೌಲ್ಯವು 2.80 ಲಕ್ಷ ಕೋಟಿಗೆ ಹೆಚ್ಚಳವಾಗಿದೆ ಎಂದು ಕೂಡ ಮಾಹಿತಿ ನೀಡಿದೆ.
ನೇಪಾಳ: ಕೆ.ಪಿ ಶರ್ಮಾ ಓಲಿಗೆ ಮುಖಭಂಗ – ಶೇರ್ ಬಹದ್ದೂರ್ ನೂತನ ಪ್ರಧಾನಿ..!
ಈ ಬಗ್ಗೆ ಪ್ರತಿಕ್ರಿಯಿಸಿರುವ ಫ್ಲಿಪ್ ಕಾರ್ಟ್ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಲ್ಯಾಣ್ ಕೃಷ್ಣ ಮೂರ್ತಿ, ಜಾಗತಿಕ ಮಟ್ಟದಸಂಸ್ಥೆಗಳಿಂದ ಫ್ಲಿಪ್ ಕಾರ್ಟ್ ನ ಮೇಲೆ ಹೂಡಿಕೆ ಮಾಡಿರುವ ಬಂಡವಾಳ ಡಿಜಿಟಲ್ ವಾಣಿಜ್ಯ ವಹಿವಾಟಿನ ಮೇಲಿರುವ ಭರವಸೆಯನ್ನು ಹಾಗೂ ಫ್ಲಿಫ್ ಕಾರ್ಟ್ ಸಮೂಹ ಸಂಸ್ಥೆಯ ಪ್ರಾಮಾಣಿಕ ಸೇವೆಗೆ ಹಿಡಿದ ಕನ್ನಡಿ ಎಂದು ಹೇಳಿದ್ದಾರೆ. ಗ್ರಾಹಕರ ಸೇವೆಯನ್ನು ಹೊರತಾಗಿ ದೇಶ ಕೋಟ್ಯಾಂತರ ಸಣ್ಣ ಹಾಗೂ ಮಧ್ಯಮ ಮಟ್ಟದ ಉದ್ದಿಮೆಗಳ ಬೆಳವಣಿಗೆಯನ್ನು ಹೆಚ್ಚಿಸಲು ನಮ್ಮ ಸಂಸ್ಥೆ ಶ್ರಮ ವಹಿಸಲಿದೆ ಎಂದು ಕೂಡ ಅವರು ಹೇಳಿದ್ದಾರೆ.