ಆಲೂಗಡ್ಡೆ ರೈಸ್
ಬೇಕಾಗುವ ಸಾಮಾಗ್ರಿಗಳು
ಅನ್ನ – 1 ಕಪ್
ಎಣ್ಣೆ – 2 ಚಮಚ
ಉದ್ದಿನಬೇಳೆ – 1/2 ಚಮಚ
ಕಡ್ಲೆಬೇಳೆ – 1/2 ಚಮಚ
ಜೀರಿಗೆ – 1/2 ಚಮಚ
ಸಾಸಿವೆ – 1/2 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಈರುಳ್ಳಿ - 1
ಹಸಿಮೆಣಸು – 1
ಆಲೂಗಡ್ಡೆ – 1
ಅರಿಶಿನ – 1/4 ಚಮಚ
ಮೆಣಸಿನ ಪುಡಿ – 1/2 ಚಮಚ
ಗರಂಮಸಾಲೆ – 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ನಿಂಬೆ ರಸ – 1 ಚಮಚ
ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲಿಗೆ ಅನ್ನವನ್ನು ಉದುರು ಉದುರಾಗಿ ಮಾಡಿಟ್ಟುಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಸಾಸಿವೆ ಹಾಕಿ. ಸಾಸಿವೆ ಸಿಡಿದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ, ಹಸಿಮೆಣಸು ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಸಿಪ್ಪೆ ತೆಗೆದು ಕತ್ತರಿಸಿದ ಆಲೂಗಡ್ಡೆಯನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಸಣ್ಣ ಉರಿಯಲ್ಲಿ ಬೇಯಿಸಿ. ಆಲೂಗಡ್ಡೆ ಬೆಂದ ಬಳಿಕ ಅರಿಶಿನ, ಮೆಣಸಿನ ಪುಡಿ, ಗರಂಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಬಳಿಕ ಮೊದಲೇ ಮಾಡಿಟ್ಟುಕೊಂಡ ಅನ್ನವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಈಗ ರುಚಿಯಾದ ಆಲೂಗಡ್ಡೆ ರೈಸ್ ಸವಿಯಲು ಸಿದ್ಧವಾಗಿದೆ.
ತೊಂಡೆಕಾಯಿ ಪಲಾವ್
ಬೇಕಾಗುವ ಸಾಮಗ್ರಿಗಳು
ತೊಂಡೆಕಾಯಿ – 20
ಬಾಸುಮತಿ ಅಕ್ಕಿ -3 ಕಪ್
ಆಲೂಗಡ್ಡೆ-1
ಈರುಳ್ಳಿ -2
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ – 6 ಚಮಚ
ಲಿಂಬೆ ಹಣ್ಣಿನ ರಸ -1 ಚಮಚ
ಅರಿಶಿನ ಚಿಟಿಕೆಯಷ್ಟು
ಮಸಾಲಾ ಪುಡಿ ಸಾಮಗ್ರಿಗಳು
ಕಡಲೆಬೇಳೆ – 1 ಚಮಚ
ಉದ್ದಿನಬೇಳೆ -1 ಚಮಚ
ಕಾಳುಮೆಣಸು – 1/2 ಚಮಚ
ಒಣಗಿರುವ ಕೊಬ್ಬರಿ – 4ಚಮಚ
ಎಳ್ಳು -1 ಚಮಚ
ಕೆಂಪು ಒಣ ಮೆಣಸು
ಕೊತ್ತಂಬರಿ ಬೀಜ- 1ಚಮಚ
ಮಾಡುವ ವಿಧಾನ
ಮೊದಲು ತೊಂಡೆಕಾಯಿಗಳನ್ನು ಉದ್ದಗೆ ಕತ್ತರಿಸಿಕೊಂಡು ಎಣ್ಣೆ ಮತ್ತು ಅರಿಶಿನ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಕಡಲೆಬೇಳೆ, ಉದ್ದಿನಬೇಳೆ, ಕಾಳುಮೆಣಸು, ಒಣ ಕೊಬ್ಬರಿ, ಎಳ್ಳು, ಕೆಂಪು ಮೆಣಸು, ಕೊತ್ತಂಬರಿ ಬೀಜಗಳನ್ನು 1 ಚಮಚ ಎಣ್ಣೆಯಲ್ಲಿ ಉರಿದು ತಣ್ಣಗಾದ ನಂತರ ಮಿಕ್ಸಿ ಜಾರಿಗೆ ಹಾಕಿ ಹುಡಿ ಮಾಡಿಟ್ಟುಕೊಳ್ಳಿ.
ಮಧ್ಯಮ ಉರಿಯಲ್ಲಿ ಕುಕ್ಕರ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಮಸಾಲೆ ಎಲೆಯನ್ನು ಹಾಕಿ ಬಾಡಿಸಿಕೊಳ್ಳಿ. ನಂತರ ಹೆಚ್ಚಿರುವ ಈರುಳ್ಳಿಯನ್ನು ಹಾಕಿ ಬಾಡಿಸಿಕೊಂಡು ಅದಕ್ಕೆ ಹೆಚ್ಚಿಟ್ಟುಕೊಂಡಿರುವ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಬೇಯಿಸಿ. ನಂತರ ಈ ಮೊದಲೇ ಹುರಿದಿಟ್ಟುಕೊಂಡಿರುವ ತೊಂಡೆಕಾಯಿಯನ್ನು ಸೇರಿಸಿ. ಹುಡಿ ಮಾಡಿರುವ ಮಸಾಲಾ ಪುಡಿಯನ್ನು ಸೇರಿಸಿ ಚೆನ್ನಾಗಿ ಕಲಸಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಅಕ್ಕಿ ಮತ್ತು ನೀರನ್ನು ಹಾಕಿ ಲಿಂಬೆರಸವನ್ನು ಸೇರಿಸಿ. ಕುಕ್ಕರ್ ನಲ್ಲಿ 3 ವಿಸಲ್ ಬರುವವರೆಗೆ ಬೇಯಿಸಿ. ಈಗ ರುಚಿಯಾದ ತೊಂಡೆಕಾಯಿ ಪಲಾವ್ ಸವಿಯಲು ಸಿದ್ಧವಾಗಿದೆ.
ವೆಜ್ ಪನೀರ್ ಫ್ರೈಡ್ ರೈಸ್
ಅಕ್ಕಿ – 1 ಕಪ್
ಪನೀರ್ – 200 ಗ್ರಾಂ
ಬೀನ್ಸ್ – 10
ಕ್ಯಾರೆಟ್ – 1
ಆಲೂಗಡ್ಡೆ -2
ಮ್ಯಾಗಿ ಮಸಾಲಾ – ರುಚಿಗೆ ತಕ್ಕಷ್ಟು
ಎಣ್ಣೆ/ತುಪ್ಪ – 2 ಚಮಚ
ಮೊದಲಿಗೆ ಅಕ್ಕಿಯನ್ನು ತೊಳೆದು ಅನ್ನ ಮಾಡಿಟ್ಟುಕೊಳ್ಳಿ. ನಂತರ ಬಾಣಲೆಗೆ ಎಣ್ಣೆ/ತುಪ್ಪ ಹಾಕಿ ಬಿಸಿ ಮಾಡಿ. ನಂತರ ಚಿಕ್ಕದಾಗಿ ಕತ್ತರಿಸಿದ ಬೀನ್ಸ್, ಕ್ಯಾರೆಟ್, ಆಲೂಗಡ್ಡೆ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ. ಬಳಿಕ ಪನೀರ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಬಾಡಿಸಿ. ನಂತರ ಮ್ಯಾಗಿ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ. ಇದಕ್ಕೆ ಅನ್ನವನ್ನು ಹಾಕಿ ಕಲಸಿದರೆ ವೆಜ್ ಪನೀರ್ ಫ್ರೈಡ್ ರೈಸ್ ಸವಿಯಲು ಸಿದ್ಧವಾಗಿದೆ.
ಬಟಾಣಿ ಬಾತ್
ಬೇಕಾಗುವ ಸಾಮಾಗ್ರಿಗಳು
ಅಕ್ಕಿ 1 ಕಪ್
ನೆನೆಸಿದ ಒಣ ಬಟಾಣಿ/ಹಸಿ ಬಟಾಣಿ – 1ಕಪ್
ಈರುಳ್ಳಿ – 1
ಟೊಮೆಟೊ – 1
ಹಸಿಮೆಣಸು – 3
ಕೆಂಪು ಮೆಣಸು – 5
ಕೊತ್ತಂಬರಿಸೊಪ್ಪು – ಸ್ವಲ್ಪ
ಶುಂಠಿ ಬೆಳ್ಳುಳಿ ಪೇಸ್ಟ್ – 1 ಚಮಚ
ಗರಂಮಸಾಲೆ ಪುಡಿ – 1 ಚಮಚ
ಚೆಕ್ಕೆ – 1 ಇಂಚು
ಲವಂಗ – 2
ಮರಾಠಿಮೊಗ್ಗು – 2
ಏಲಕ್ಕಿ – 2
ಪಲಾವ್ ಎಲೆ – 1
ರುಚಿಗೆ ತಕ್ಕಷ್ಟು ಉಪ್ಪು.
ಎಣ್ಣೆ/ತುಪ್ಪ – 2 ಚಮಚ
ಮಾಡುವ ವಿಧಾನ
ಮೊದಲಿಗೆ ಅಕ್ಕಿಯನ್ನು ತೊಳೆದು ನೀರನ್ನು ಸೋಸಿ ಪಕ್ಕದಲ್ಲಿ ಇಡಿ. ಬಳಿಕ ಕೆಂಪು ಮೆಣಸುಗಳನ್ನು 10 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ ಇಡಿ. ನಂತರ ಮಿಕ್ಸಿ ಜಾರಿನಲ್ಲಿ ಹಸಿಮೆಣಸಿನಕಾಯಿ. ಕೊತ್ತಂಬರಿಸೊಪ್ಪು ಮತ್ತು ನೆನೆಸಿದ ಕೆಂಪು ಮೆಣಸು ಸೇರಿಸಿ ಚೆನ್ನಾಗಿ ರುಬ್ಬಿ.
ಈಗ ಕುಕ್ಕರಿಗೆ ಎಣ್ಣೆ ಅಥವಾ ತುಪ್ಪ ಹಾಕಿ. ಬಿಸಿಯಾದ ಮೇಲೆ ಚೆಕ್ಕೆ, ಲವಂಗ, ಮರಾಠಿಮೊಗ್ಗು, ಏಲಕ್ಕಿ, ಪಲಾವ್ ಎಲೆ ಸೇರಿಸಿ. ಬಳಿಕ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಹೆಚ್ಚಿದ ಟೊಮೆಟೊ ಸೇರಿಸಿ, ಮೃದುವಾಗುವವರೆಗೆ ಬೇಯಿಸಿ. ಬಳಿಕ ಶುಂಠಿ. ಬೆಳ್ಳುಳಿ ಪೇಸ್ಟ್, ರುಬ್ಬಿದ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಗರಂ ಮಸಾಲೆ ಪುಡಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕಲಸಿ.
ನಂತರ ಬಟಾಣಿ, ಅಕ್ಕಿ, ಉಪ್ಪು, ಅಗತ್ಯವಿರುವಷ್ಟು ನೀರು ಸೇರಿಸಿ ಮುಚ್ಚಳ ಮುಚ್ಚಿ 3 ವಿಷಲ್ ಬರುವವರೆಗೆ ಬೇಯಿಸಿ.
ಈಗ ರುಚಿಯಾದ ಬಟಾಣಿ ಬಾತ್ ಸವಿಯಲು ಸಿದ್ಧ.
ಕ್ಯಾಬೇಜ್ ರೈಸ್
ಬೇಕಾಗುವ ಸಾಮಗ್ರಿಗಳು
ಅಕ್ಕಿ 11/2 ಲೋಟ
ಚಿಕ್ಕದಾಗಿ ಹೆಚ್ಚಿದ ಕ್ಯಾಬೇಜ್ 1/2ಕಪ್
ಆಲೂಗಡ್ಡೆ 1
ಗರಂ ಮಸಾಲ – 1ಚಮಚ
ಕೊತ್ತಂಬರಿ ಪುಡಿ – 1/4 ಚಮಚ
ಅರಸಿನ ಪುಡಿ – 1/4 ಚಮಚ,
ಜೀರಿಗೆ ಪುಡಿ – 1/2ಚಮಚ
ಆಲ್ ಸ್ಪೈಸ್ ಎಲೆ – 3
ಕೊತ್ತಂಬರಿ ಸೊಪ್ಪು – ಸ್ವಲ್ಪ
ತುರಿದ ಶುಂಠಿ – 1/4ಚಮಚ
ತುಪ್ಪ – 3 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ಆಲೂಗೆಡ್ಡೆಯ ಸಿಪ್ಪೆ ತೆಗೆದು ಅದನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ.
ನಂತರ ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ. ತುಪ್ಪ ಬಿಸಿಯಾದ ಬಳಿಕ ಅದಕ್ಕೆ ಕತ್ತರಿಸಿದ ಕ್ಯಾಬೇಜ್, ಆಲೂಗಡ್ಡೆ, ಶುಂಠಿ ತುರಿ ಸೇರಿಸಿ ಹುರಿಯಿರಿ. ನಂತರ ಅದಕ್ಕೆ ಅರಿಶಿನ ಪುಡಿ, ಗರಂ ಮಸಾಲ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಆಲ್ ಸ್ಪೈಸ್ ಎಲೆ ಹಾಕಿ ಚೆನ್ನಾಗಿ ಬೆರೆಸಿ. ನಂತರ ಅದಕ್ಕೆ ಅಕ್ಕಿ, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯವಿರುವಷ್ಟು ನೀರು ಸೇರಿಸಿ. ನಂತರ ಕುಕ್ಕರ್ ಗೆ ಮುಚ್ಚಳವನ್ನು ಮುಚ್ಚಿ 3 ವಿಸಲ್ ಕೂಗಿಸಿ. ನಂತರ ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಬೆರೆಸಿ. ಈಗ ರುಚಿಯಾದ ಕ್ಯಾಬೇಜ್ ರೈಸ್ ರಾಯತದ ಜೊತೆ ಸವಿಯಲು ಸಿದ್ಧವಾಗಿದೆ.
ರುಚಿಯಾದ ಕ್ಯಾಪ್ಸಿಕಂ ಬಾತ್
ಬೇಕಾಗುವ ಸಾಮಾಗ್ರಿಗಳು
ಅಕ್ಕಿ – 1 ಕಪ್
ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ – 1 ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಜೀರಿಗೆ – 1/2 ಚಮಚ
ಟೊಮೆಟೊ – 1
ಅರಿಶಿನ – ಚಿಟಿಕೆ
ಬೆಳ್ಳುಳ್ಳಿ ಶುಂಠಿ ಪೇಸ್ಟ್ – 1 ಚಮಚ
ಮೆಣಸಿನ ಹುಡಿ – 1/2 ಚಮಚ
ಪಾವ್ ಬಾಜಿ ಮಸಾಲೆ – 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಕೊತ್ತಂಬರಿ ಸೊಪ್ಪು ಸ್ವಲ್ಪ
ತಯಾರಿಸುವ ವಿಧಾನ
ಮೊದಲು ಉದುರುದುರಾಗಿ ಅನ್ನ ಮಾಡಿಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ, ಈರುಳ್ಳಿ ಸೇರಿಸಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಸಣ್ಣದಾಗಿ ಕತ್ತರಿಸಿದ ಟೊಮೆಟೊ ಸೇರಿಸಿ. ಮೃದುವಾಗುವವರೆಗೆ ಬೇಯಿಸಿ. ಬಳಿಕ ಉಪ್ಪು, ಅರಿಶಿನ, ಬೆಳ್ಳುಳ್ಳಿ ಶುಂಠಿ ಪೇಸ್ಟ್ ಸೇರಿಸಿ ಸಣ್ಣ ಉರಿಯಲ್ಲಿ ಹುರಿಯಿರಿ. ಈಗ ಅದಕ್ಕೆ ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ ಸೇರಿಸಿ ಬೇಯಿಸಿಕೊಳ್ಳಿ. ಬಳಿಕ ಮೆಣಸಿನ ಪುಡಿ ಮತ್ತು ಪಾವ್ ಬಾಜಿ ಮಸಾಲೆ ಸೇರಿಸಿ 5 ನಿಮಿಷ ಚೆನ್ನಾಗಿ ಕಲಸಿ. ನಂತರ ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಅನ್ನ ಸೇರಿಸಿ ಚೆನ್ನಾಗಿ ಬೆರೆಸಿ. ರುಚಿಯಾದ ಕ್ಯಾಪ್ಸಿಕಂ ಬಾತ್ ಸವಿಯಲು ಸಿದ್ಧವಾಗಿದೆ.
ಬದನೆ ಪಲಾವ್
ಬೇಕಾಗುವ ಸಾಮಗ್ರಿಗಳು
ಅಕ್ಕಿ – 2ಕಪ್
ಕೊತ್ತಂಬರಿ ಬೀಜ – 4 ಚಮಚ
ಚಕ್ಕೆ – 2 ತುಂಡು
ಲವಂಗ – 4
ಏಲಕ್ಕಿ – 2
ಪಲಾವ್ ಎಲೆ – 2
ಚಕ್ರಿ ಹೂ – 1
ಎಳ್ಳು – 2 ಚಮಚ
ತುಪ್ಪ – 3 ಚಮಚ
ಎಣ್ಣೆ – 2 ಚಮಚ
ಜೀರಿಗೆ – 1ಚಮಚ
ಈರುಳ್ಳಿ – 2
ಹಸಿಮೆಣಸಿನಕಾಯಿ – 4
ಆಲೂಗಡ್ಡೆ – 1
ಬದನೆಕಾಯಿ – 2
ಬೀನ್ಸ್ – 4
ಕೆಂಪು ಮೆಣಸಿನ ಪುಡಿ – 1ಚಮಚ
ಅರಿಶಿನ ಪುಡಿ – 1/2ಚಮಚ
ನಿಂಬೆ ರಸ – 2ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಕೊತ್ತಂಬರಿಸೊಪ್ಪು – ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ಅಕ್ಕಿಯನ್ನು ತೊಳೆದು 10 ನಿಮಿಷ ನೆನೆಸಿಡಿ.
ಒಂದು ಬಾಣಲೆಯಲ್ಲಿ ಕೊತ್ತಂಬರಿ ಬೀಜ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಚಕ್ರಿ ಹೂ, ಎಳ್ಳು ಹಾಕಿ ಚೆನ್ನಾಗಿ ಹುರಿದು ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ಪೌಡರ್ ಮಾಡಿಟ್ಟುಕೊಳ್ಳಿ.
ಈಗ ಕುಕ್ಕರ್ ನಲ್ಲಿ ತುಪ್ಪ ಮತ್ತು ಎಣ್ಣೆ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ಈರುಳ್ಳಿ ಕೆಂಪಗಾದ ಬಳಿಕ ಕತ್ತರಿಸಿದ ಹಸಿಮೆಣಸಿನಕಾಯಿ ಸೇರಿಸಿ ಹುರಿಯಿರಿ. ಈಗ ಚಿಕ್ಕದಾಗಿ ಕತ್ತರಿಸಿದ ಆಲೂಗಡ್ಡೆ, ಬದನೆಕಾಯಿ, ಬೀನ್ಸ್ ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ರುಬ್ಬಿಟ್ಟುಕೊಂಡ ಪೌಡರ್, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ನಂತರ ನೆನೆಸಿಟ್ಟ ಅಕ್ಕಿಯ ನೀರನ್ನು ಸೋಸಿ ಅಕ್ಕಿಯನ್ನು ಸೇರಿಸಿ. 2 ನಿಮಿಷ ಚೆನ್ನಾಗಿ ಬೆರೆಸಿ. ನಂತರ ನೀರು ಸೇರಿಸಿ. ಲಿಂಬೆರಸ ಹಿಂಡಿ. ಕುಕ್ಕರ್ ಮುಚ್ಚಿ ಎರಡು ವಿಸಲ್ ಬರುವವರೆಗೆ ಬೇಯಿಸಿ. ನಂತರ ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿಸೊಪ್ಪು ಉದುರಿಸಿದರೆ, ರುಚಿಯಾದ ಬದನೆ ಪಲಾವ್ ಸವಿಯಲು ಸಿದ್ಧ.