ಆರೋಗ್ಯದ ಜೊತೆಗೆ ರುಚಿಕರ ರೆಸಿಪಿಗಳು

1 min read

ಆರೋಗ್ಯದ ಜೊತೆಗೆ ರುಚಿಕರ ರೆಸಿಪಿಗಳು

1. ಪುದಿನಾ ಜ್ಯೂಸ್

ಬೇಕಾಗುವ ಸಾಮಾಗ್ರಿಗಳು

ಪುದಿನಾ – 1 ಕಟ್ಟು
ಶುಂಠಿ – ಸ್ವಲ್ಪ
ಸಕ್ಕರೆ – 1 ಬಟ್ಟಲು
ನಿಂಬೆರಸ – 2 ಚಮಚ
ಏಲಕ್ಕಿ ಪುಡಿ – ಸ್ವಲ್ಪ
ಉಪ್ಪು – ಚಿಟಿಕೆ
ನೀರು
Saakshatv cooking recipe pudina juice

ಮಾಡುವ ವಿಧಾನ

ಪುದಿನಾ ಎಲೆಗಳನ್ನು ಸ್ವಚ್ಛಗೊಳಿಸಿ, ಅದನ್ನು ಮತ್ತು ಶುಂಠಿಯನ್ನು ಮಿಕ್ಸಿಯಲ್ಲಿ ಹಾಕಿ ನೀರು ಸೇರಿಸಿ ‌ ಚೆನ್ನಾಗಿ ‌ರುಬ್ಬಿ.

ನಂತರ ಸೋಸಿ, ಅದಕ್ಕೆ ಸಕ್ಕರೆ, ನಿಂಬೆರಸ, ಏಲಕ್ಕಿ, ಉಪ್ಪು ಸೇರಿಸಿ, ಚೆನ್ನಾಗಿ ಮಿಕ್ಸ್ ‌ಮಾಡಿ.
ಇದು ಕುಡಿಯಲು ಚೆನ್ನಾಗಿರುತ್ತದೆ ಮತ್ತು ಜೀರ್ಣಕಾರಿ ಕೂಡ ಆಗಿದೆ.

2. ಗಾರ್ಲಿಕ್ ಬ್ರೆಡ್ ಪಿಜ್ಜಾ

Saakshatv cooking Garlic bread pizza

ಗಾರ್ಲಿಕ್ ಬ್ರೆಡ್ ಪಿಜ್ಜಾ

ಬೇಕಾಗುವ ಪದಾರ್ಥಗಳು
ಗಾರ್ಲಿಕ್ ಬ್ರೆಡ್ 1 ಪೌಂಡ್
ಸ್ವೀಟ್ ಕಾರ್ನ್ 1
ಕ್ಯಾಪ್ಸಿಕಂ 2
ಈರುಳ್ಳಿ 2
ಟೊಮೆಟೊ 2
ಟೊಮೆಟೊ ಸಾಸ್ ಅಗತ್ಯವಿರುವಷ್ಟು
ಉಪ್ಪು ರುಚಿಗೆ ತಕ್ಕಷ್ಟು
ಪೆಪ್ಪರ್ ಅಗತ್ಯವಿರುವಷ್ಟು
ಬೆಣ್ಣೆ ಅಗತ್ಯವಿರುವಷ್ಟು
ತುರಿದ ಚೀಸ್
Saakshatv cooking Garlic bread pizza

ಮಾಡುವ ವಿಧಾನ

ಕಡಾಯಿಯನ್ನು ಬಿಸಿ ಮಾಡಿ ಬೆಣ್ಣೆಯನ್ನು ಸೇರಿಸಿ. ಅದಕ್ಕೆ
ಕತ್ತರಿಸಿದ ಕ್ಯಾಪ್ಸಿಕಂ ಈರುಳ್ಳಿ ಸೇರಿಸಿ ಹುರಿಯಿರಿ. ‌ಕಾರ್ನ್ ಸೇರಿಸಿ ಹುರಿಯಿರಿ.
ಸ್ವಲ್ಪ ಉಪ್ಪು ಸೇರಿಸಿ.  ಗಾರ್ಲಿಕ್ ಬ್ರೆಡ್ ತುಂಡು ತೆಗೆದುಕೊಳ್ಳಿ ಅದರ ಮೇಲೆ ಟೊಮೆಟೊ ಸಾಸ್ ಹರಡಿ. ನಂತರ ಅದರ ಮೇಲೆ ಉಪ್ಪು ಪೆಪ್ಪರ್ ಸಿಂಪಡಿಸಿ. ಅದರ ಮೇಲೆ ಹುರಿದ ತರಕಾರಿ ಮಿಶ್ರಣವನ್ನು ಸೇರಿಸಿ. ನಂತರ ಟೊಮೆಟೊ ಅದರ ಮೇಲೆ ತುರಿದ ಚೀಸ್ ಇಡಿ.
Saakshatv cooking Garlic bread pizza
ಬಳಿಕ ತವಾವನ್ನು ಬಿಸಿ ಮಾಡಿ, ಬೆಣ್ಣೆ ಸೇರಿಸಿ.. ಬ್ರೆಡ್ ತುಂಡುಗಳನ್ನು ಇರಿಸಿ … ಮುಚ್ಚಳವನ್ನು ಮುಚ್ಚಿ ಮತ್ತು ಕಡಿಮೆ ಉರಿಯಲ್ಲಿ ಚೀಸ್ ಕರಗುವ ತನಕ ಹುರಿಯಿರಿ. ರುಚಿಯಾದ ಗಾರ್ಲಿಕ್ ಪಿಜ್ಜಾ ಸವಿಯಿರಿ.

3. ಮನೆಯಲ್ಲೇ ತಯಾರಿಸಿ ಗೋಬಿ ಮಂಚೂರಿ

ಬೇಕಾಗುವ ವಸ್ತುಗಳು
ಸ್ವಚ್ಛಗೊಳಿಸಿದ  ಹೂಕೋಸು(ಗೋಬಿ)  – 1 ಬೌಲ್
ಕಾರ್ನ್ ಪ್ಲೋರ್ – 1/2 ಕಪ್
ಜೋಳದ ಹಿಟ್ಟು – 2 ಚಮಚ
ಅಕ್ಕಿ ಹಿಟ್ಟು – 1 ಚಮಚ
ಮೆಣಸಿನ ಪುಡಿ  1/2-1 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಬೆಳ್ಳುಳ್ಳಿ  ಎಸಳು‌ – 8-10
ಹೆಚ್ಚಿದ ಈರುಳ್ಳಿ – 1/4 ಕಪ್
ಹೆಚ್ಚಿದ ಹಸಿಮೆಣಸಿನ ಕಾಯಿ – 4-5
ಚಿಕ್ಕದಾಗಿ ಹೆಚ್ಚಿದ ಶುಂಠಿ – 1ಚಮಚ
ಹೆಚ್ಚಿದ ದೊಣ್ಣೆ ಮೆಣಸಿನ ಕಾಯಿ – 1/2 ಕಪ್
ಟೊಮೆಟೋ ಸಾಸ್ – 4-5 ಚಮಚ
ಚಿಲ್ಲಿ ಸಾಸ್ – 2-3 ಚಮಚ
ಸೋಯಾ ಸಾಸ್ – 2 ಚಮಚ
ಮೆಣಸಿನ ಪುಡಿ  1/2-1 ಚಮಚ
ಕರಿಮೆಣಸಿನ ಪುಡಿ – 1/4 ಚಮಚ

ಮಾಡುವ ವಿಧಾನ
ಮೊದಲಿಗೆ ಸ್ವಚ್ಛಗೊಳಿಸಿದ ಹೂಕೋಸನ್ನು 2 ನಿಮಿಷ ಕುದಿಯುವ ಉಪ್ಪು ನೀರಿನಲ್ಲಿ ಬೇಯಿಸಿ. ನಂತರ ನೀರು ಸೋಸಿ ಪಕ್ಕಕ್ಕಿಡಿ.

ಈಗ ಸಾಸ್ ತಯಾರಿಸಲು 2 ಟೀಸ್ಪೂನ್ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ಬಿಸಿ ಮಾಡಿ ನುಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಮತ್ತು ಶುಂಠಿ ಸೇರಿಸಿ ಹುರಿಯಿರಿ. ನಂತರ ಕತ್ತರಿಸಿದ ಈರುಳ್ಳಿ, ಹಸಿ ಮೆಣಸು ಮತ್ತು ದೊಣ್ಣೆ ಮೆಣಸು ಸೇರಿಸಿ ಹುರಿಯಿರಿ. ನಂತರ ಮೆಣಸಿನ ಪುಡಿ ಮತ್ತು ಕರಿ ಮೆಣಸಿನ ಪುಡಿ ಸೇರಿಸಿ ಕಲಸಿ. ಈಗ‌ ಅದಕ್ಕೆ ಟೊಮೆಟೊ ಸಾಸ್ ಮತ್ತು ಸೋಯಾ ಸಾಸ್ ಸೇರಿಸಿ. ಸ್ವಲ್ಪ ಮಂದವಾಗುವವರೆಗೆ ಮಗುಚಿ. ಉಪ್ಪು ಸೇರಿಸಿ ಮತ್ತೆ ಚೆನ್ನಾಗಿ ಕಲಸಿ. ಈಗ ಸಾಸ್ ತಯಾರಾಗಿದೆ.

ಈಗ ಒಂದು ಬೌಲ್ ಗೆ  ಕಾರ್ನ್ ಪ್ಲೋರ್ ಹಾಕಿ, ಜೋಳದ ಹಿಟ್ಟು, ಅಕ್ಕಿ ಹಿಟ್ಟು,  ಮೆಣಸಿನ ಪುಡಿ, ಉಪ್ಪು ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಲಸಿ.  ಈ ಮಿಶ್ರಣಕ್ಕೆ ಗೋಬಿ ಚೂರುಗಳನ್ನು ಹಾಕಿ ಕಲಸಿ.ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ನಂತರ  ಹೂಕೋಸಿನ ಚೂರುಗಳನ್ನು  ಗರಿ ಗರಿಯಾಗುವವರೆಗೆ ಮತ್ತು ಹೊಂಬಣ್ಣ ಬರುವವರೆಗೆ ಕಾಯಿಸಿ ತೆಗೆಯಿರಿ.

Saakshatv cooking Gobi Manchurian

ನಂತರ  ಮೊದಲೇ ತಯಾರಿಸಿಟ್ಟ ಸಾಸ್ ಗೆ ಕರಿದ ಗೋಬಿ ಸೇರಿಸಿ,  ದೊಡ್ಡ ಉರಿಯಲ್ಲಿ ಚೆನ್ನಾಗಿ ಕಲಸಿ.  ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ.‌ ಟೇಸ್ಟೀಯಾದ ಗೋಬಿ ಮಂಚೂರಿ ಸವಿಯಲು ರೆಡಿ

4. ತೊಗರಿ ಬೇಳೆ ಹಾಕದೆ  ಸ್ಪೆಷಲ್ ಟೊಮೆಟೊ ಸಾರು

ಟೊಮೇಟೊ                ನಾಲ್ಕು
ತೆಂಗಿನ ಕಾಯಿ ತುರಿ      ಐದು ಚಮಚ
ಹಸಿ ಮೆಣಸು             2
ಕೊತ್ತಂಬರಿ ಸೊಪ್ಪು     ಸ್ವಲ್ಪ
ಅರಿಶಿನ                      ಚಿಟಿಕೆ
ಧನಿಯ                      2 ಚಮಚ
ಜೀರಿಗೆ                       1/2 ಚಮಚ
ಮೆಂತ್ಯ                       1/4 ಚಮಚ
ಬ್ಯಾಡಗಿ  ಮೆಣಸು     4
ತುಪ್ಪ                         1 ಚಮಚ
ಎಣ್ಣೆ    1 ಚಮಚ
ಉಪ್ಪು ರುಚಿಗೆ ತಕ್ಕಷ್ಟು.
ಹುಣಿಸೆ ಹಣ್ಣು ಸ್ವಲ್ಪ,
ಬೆಲ್ಲ ಸ್ವಲ್ಪ
ಒಗ್ಗರಣೆಗೆ
ಇಂಗು ಚಿಟಿಕೆಯಷ್ಟು ,
ಸಾಸಿವೆ  1/4 ಚಮಚ
ಒಂದು ಒಣ ಕೆಂಪು ಮೆಣಸು
ಕರಿಬೇವಿನ ಸೊಪ್ಪು    ಸ್ವಲ್ಪ
Saakshatv cooking recipes tomato rasam

ಟೊಮೇಟೊಗಳನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿಕತ್ತರಿಸಿ ಇಟ್ಟು ಕೊಳ್ಳಿ. ಇದರಿಂದ  ಒಂದು ಕಪ್ ನಷ್ಟು   ಟೊಮೇಟೊ ಚೂರುಗಳನ್ನು ಪ್ರತ್ಯೇಕವಾಗಿ ತೆಗೆದಿಡಿ.

ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ. ಅದಕ್ಕೆ  ಧನಿಯ, ಜೀರಿಗೆ, ಮೆಂತೆ ಮತ್ತು ಬ್ಯಾಡಗಿ ಮೆಣಸು ಹಾಕಿ ಹುರಿದು  ಒಂದು ಪ್ಲೇಟ್ ಮೇಲೆ ಹರಡಿ. ಅದನ್ನು ಚೆನ್ನಾಗಿ ಆರಲು ಬಿಡಿ.
ಆರಿದ ನಂತರ ಇದನ್ನು ಮಿಕ್ಸಿ ಜಾರಿಗೆ ಹಾಕಿ ಜೊತೆಗೆ ಹಸಿ ಮೆಣಸಿನಕಾಯಿ, ಕಾಯಿ ತುರಿ, ಹುಣಿಸೇಹಣ್ಣು, ಬೆಲ್ಲ,   ಟೊಮೇಟೊ, ಅರಿಶಿನ, ಉಪ್ಪು ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿ.
Saakshatv cooking recipes tomato rasam
ಈಗ ಒಂದು ಪ್ಯಾನ್ ಇಟ್ಟು ಅದು  ತುಪ್ಪ ಹಾಕಿ. ತುಪ್ಪ ಕಾದ ಮೇಲೆ ಇಂಗು,  ಸಾಸಿವೆ, ಕರಿಬೇವಿನ ಸೊಪ್ಪು ಮತ್ತು  ಒಣ ಮೆಣಸಿನ ಕಾಯಿ ಒಗ್ಗರಣೆ ಕೊಟ್ಟು ಇದಕ್ಕೆ ಪ್ರತ್ಯೇಕವಾಗಿ ತೆಗೆದಿಟ್ಟ  ಟೊಮೇಟೊ ಹಾಕಿ ಹುರಿಯಿರಿ. ಇದಕ್ಕೆ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಪುನಃ ಹುರಿಯಿರಿ. ಈಗ ಅದಕ್ಕೆ ರುಬ್ಬಿದ ಮಿಶ್ರಣವನ್ನು ಸೇರಿಸಿ. ನಿಮಗೆ ಎಷ್ಟು ಬೇಕು ಅಷ್ಟು  ನೀರು ಸೇರಿಸಿ, ಚೆನ್ನಾಗಿ ಕುದಿಸಿ.  ನಂತರ ಚಿಕ್ಕದಾಗಿ ‌ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿ.ರುಚಿಯಾದ ಸ್ಪೆಷಲ್ ಟೊಮೆಟೊ ಸಾರು ರೆಡಿಯಾಗಿದೆ. ಇದನ್ನು ಅನ್ನದ ಜೊತೆ ಕಲಸಿ ಊಟ ಮಾಡಿ.

5. ಹೈದರಾಬಾದಿ ಮಟನ್ ದಮ್ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು:

1 ಕಿ.ಗ್ರಾಂ ಮಟನ್
1 ಚಮಚ ಜೀರಿಗೆ,
1 ಚಮಚ ಕ್ಯಾರೆವೇ ಬೀಜಗಳು,
3 ಏಲಕ್ಕಿ,
2 ಬೇ ಲೀಫ್(ಪಲಾವ್ ಎಲೆ)
ಸಣ್ಣ ತುಂಡು ಚೆಕ್ಕೆ
150 ಗ್ರಾಂ ಮೊಸರು
2 ಚಮಚ ಕಾಶ್ಮೀರಿ ಕೆಂಪು ಮೆಣಸಿನಕಾಯಿ ಪುಡಿ,
1 ಚಮಚ ಕೆಂಪು ಮೆಣಸಿನ ಪುಡಿ,
1 ಚಮಚ ಕೊತಂಬರಿ ಪುಡಿ,
1/2 ಚಮಚ ಅರಿಶಿನ ಪುಡಿ
1 ಚಮಚ ಬಿರಿಯಾನಿ ಪೌಡರ್
1/2 ಕಪ್ ಹಾಲು
ಚಿಟಕಿಯಷ್ಟು ಕೇಸರಿ
ಹೆಚ್ಚಿದ ಈರುಳ್ಳಿ 3
3 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಸ್ವಲ್ಪ ಕೊತ್ತಂಬರಿ ಮತ್ತು ಪುದೀನ ಸೊಪ್ಪು
1/2 ಕೆ.ಜಿ ಬಿರಿಯಾನಿ ಅಕ್ಕಿ
ತುಪ್ಪ – 4 ಚಮಚ
1 ನಿಂಬೆ
1 ಚಮಚ ಕಸ್ತೂರಿ ಮೇತಿ
ಸ್ವಲ್ಪ ಹುರಿದ ಗೋಡಂಬಿ ‌ಮತ್ತು ದ್ರಾಕ್ಷಿ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ‌ವಿಧಾನ
ಮೊದಲಿಗೆ ಮಟನ್ ಅನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ‌ ಕತ್ತರಿಸಿ ಇಟ್ಟು ಕೊಳ್ಳಿ.‌ ನಂತರ ಬಿರಿಯಾನಿ ಅಕ್ಕಿಯನ್ನು ಅರ್ಧ (70%) ಬೇಯಿಸಿ ಬಸಿದು ಒಂದು ತಟ್ಟೆಯಲ್ಲಿ ಹರಡಿ.
ಜೀರಿಗೆ, ಕ್ಯಾರೆವೇ ಬೀಜಗಳು, ಏಲಕ್ಕಿ, ಚೆಕ್ಕೆ ಹುರಿದು ಪುಡಿ ಮಾಡಿ. ಬಳಿಕ ಅದಕ್ಕೆ ಮೊಸರು, ಕಾಶ್ಮೀರಿ ಕೆಂಪು ಮೆಣಸಿನಕಾಯಿ ಪುಡಿ, ಕೆಂಪು ಮೆಣಸಿನ ಪುಡಿ, ಬಿರಿಯಾನಿ ಪೌಡರ್, ಕೊತಂಬರಿ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ನಂತರ ಮಟನ್ ತುಂಡುಗಳ ಜೊತೆಗೆ ಚೆನ್ನಾಗಿ ಬೆರೆಸಿ.
ಈ ಮಿಶ್ರಣವನ್ನು ರಾತ್ರಿಯಿಡೀ ಅಥವಾ ಕನಿಷ್ಠ 3 ಗಂಟೆ ಮ್ಯಾರಿನೇಟ್ ಮಾಡಿ. ನಂತರ ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ ಬೇ ಲೀಫ್, ಹೆಚ್ಚಿದ 2 ಈರುಳ್ಳಿ ಸೇರಿಸಿ. ಈರುಳ್ಳಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಮ್ಯಾರಿನೇಟ್ ಮಟನ್ ಸೇರಿಸಿ ಮತ್ತು 5 ನಿಮಿಷಗಳ ಕಾಲ ಚೆನ್ನಾಗಿ ಮಿಶ್ರ ಮಾಡಿ. ಕತ್ತರಿಸಿದ ಕೊತ್ತಂಬರಿ ಮತ್ತು ಪುದೀನ ಎಲೆಗಳನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ.
Saakshatv cooking recipes mutton biryani
ನಿಂಬೆ ರಸವನ್ನು ಸೇರಿಸಿ ಮತ್ತು 5 ಸೀಟಿ ಕೂಗುವವರೆಗೆ ಬೇಯಿಸಿ. ಈಗ ಪಾತ್ರೆಯನ್ನು ತೆಗೆದುಕೊಂಡು ತಳಭಾಗಕ್ಕೆ ತುಪ್ಪವನ್ನು ‌ಸವರಿ. ನಂತರ ತೆಳುವಾಗಿ ‌ಸ್ವಲ್ಪ‌ ಅರ್ಧ ಬೇಯಿಸಿದ ‌ಅನ್ನವನ್ನು ಹರಡಿ. ‌ಅದರ ಮೇಲೆ ಮಟನ್ ತುಂಡುಗಳು ಮತ್ತು ಗ್ರೇವಿ ಸೇರಿಸಿ. ಸ್ವಲ್ಪ ಕೊತ್ತಂಬರಿ -ಪುದೀನಾ ಸೊಪ್ಪು ಸೇರಿಸಿ ಹೀಗೆ ಅನ್ನ ಹಾಗೂ ಮಟನ್‌ ಅನ್ನು ಪದರ-ಪದರವಾಗಿ ಹರಡಿ. ಪ್ರತಿ ಬಾರಿಯೂ ಅನ್ನದ ಮೇಲೆ ಕೇಸರಿ ಹಾಕಿಟ್ಟ ಹಾಲನ್ನು ಚಿಮುಕಿಸಿ. ನಂತರ ಹುರಿದ ಗೋಡಂಬಿ ದ್ರಾಕ್ಷಿ ಈರುಳ್ಳಿ ಮತ್ತು ಕಸೂರಿ ಮೇತಿ ಸೇರಿಸಿ ಮುಚ್ಚಳವನ್ನು ಮುಚ್ಚಿ ಮತ್ತು ಕಡಿಮೆ ಜ್ವಾಲೆಯಲ್ಲಿ 20-30 ನಿಮಿಷಗಳ ಕಾಲ ಬೇಯಿಸಿ. ಈಗ‌ ರುಚಿಯಾದ ಹೈದರಾಬಾದಿ ಮಟನ್ ದಮ್ ಬಿರಿಯಾನಿ ಸವಿಯಲು ಸಿದ್ಧ.

6. ಪಾಲಕ್ ಪನೀರ್

ಬೇಕಾಗುವ ಸಾಮಾಗ್ರಿಗಳು

2 ಕಟ್ಟು ಪಾಲಕ್ ಸೊಪ್ಪು
1 ಕಪ್ ಕತ್ತರಿಸಿದ ಈರುಳ್ಳಿ
1 ಕಪ್ ಕತ್ತರಿಸಿದ ಟೊಮೆಟೊ
1 ಟೀಸ್ಪೂನ್ ಹಸಿ ಮೆಣಸಿನಕಾಯಿ ಪೇಸ್ಟ್
1 ಟೀಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್
1 ಕಪ್ ಹುರಿದ ಪನೀರ್ ತುಂಡುಗಳು
1/4 ಕಪ್ ಗೋಡಂಬಿ ಬೀಜಗಳು
1 ಒಣ ಕೆಂಪು ಮೆಣಸಿನಕಾಯಿ
1 ಟೀಸ್ಪೂನ್ ಗರಂ ಮಸಾಲ
ರುಚಿಗೆ ತಕ್ಕಷ್ಟು ‌ಉಪ್ಪು
1 ಟೀಸ್ಪೂನ್ ಎಣ್ಣೆ ಅಥವಾ ಬೆಣ್ಣೆ
1/2 ಟೀಸ್ಪೂನ್ ಜೀರಿಗೆ
1/2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
1-2 ಟೀಸ್ಪೂನ್ ಕಸೂರಿ ಮೆತಿ (optional)
ಚಿಟಕಿಯಷ್ಟು ಇಂಗು

ಮಾಡುವ ವಿಧಾನ

ಮೊದಲು ಬಾಣಲೆಯಲ್ಲಿ ನೀರನ್ನು ಕುದಿಸಿ ಅದಕ್ಕೆ ಒಂದು ಚಮಚ ಉಪ್ಪು ಸೇರಿಸಿ ಮತ್ತು 2 ನಿಮಿಷಗಳ ಕಾಲ ಪಾಲಕ್ ಸೊಪ್ಪುಗಳನ್ನು ಆ ನೀರಿನಲ್ಲಿ ‌ಹಾಕಿ ಬೇಯಿಸಿ.

ಈಗ ನೀರಿನಿಂದ ಪಾಲಕ್ ತೆಗೆದು ಕತ್ತರಿಸಿ ಮಿಕ್ಸರ್ ಜಾರ್‌ನಲ್ಲಿ ಹಾಕಿ. ನಯವಾಗಿ ಗ್ರೈಂಡ್ ಮಾಡಿ ಪ್ಯೂರೀಯನ್ನು ತಯಾರಿಸಿ ಪಕ್ಕದಲ್ಲಿ ಇರಿಸಿಕೊಳ್ಳಿ.

ಈಗ ಬಾಣಲೆಯಲ್ಲಿ ಎಣ್ಣೆ ಅಥವಾ ಬೆಣ್ಣೆಯನ್ನು ಬಿಸಿ ಮಾಡಿ. ನಂತರ ಜೀರಿಗೆ, ಒಣ ಕೆಂಪು ಮೆಣಸಿನಕಾಯಿ, ಈರುಳ್ಳಿ, ಗೋಡಂಬಿ ಬೀಜ ಸೇರಿಸಿ ಮತ್ತು ಈರುಳ್ಳಿ ಕೆಂಪಗಾಗುವವರೆಗೆ ಹುರಿಯಿರಿ.

ಈಗ ಕತ್ತರಿಸಿದ ಟೊಮೆಟೊ ಸೇರಿಸಿ ಮತ್ತು ಮೃದುವಾಗುವವರೆಗೆ ಬೇಯಿಸಿ.

ಅದಕ್ಕೆ ಹಸಿ ಮೆಣಸಿನಕಾಯಿ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕೆಂಪು ಮೆಣಸಿನ ಪುಡಿ, ಗರಂ ಮಸಾಲ, ಕಸೂರಿ ಮೆತಿ‌ ಹುಡಿ, ಉಪ್ಪು ಸೇರಿಸಿ ಎಣ್ಣೆ ಬೇರ್ಪಡುವವರೆಗೆ ಬೇಯಿಸಿ.
ನಂತರ ತಣ್ಣಗಾಗಲು ಬಿಡಿ. ಈಗ ಈ ಈರುಳ್ಳಿ ಮಿಶ್ರಣವನ್ನು ಮಿಕ್ಸರ್ ಜಾರ್‌ನಲ್ಲಿ ಬೆರೆಸಿ ನಯವಾದ ಪೇಸ್ಟ್ ಮಾಡಿ.
Saakshatv cooking recipes Palak Paneer

ಈಗ ಈ ಎರಡೂ ಪೇಸ್ಟ್ (ಪಾಲಕ ಪೇಸ್ಟ್ ಮತ್ತು ಮಸಾಲಾ ಪೇಸ್ಟ್)ಗಳನ್ನು ಒಂದೇ ಬಾಣಲೆಯಲ್ಲಿ ಸೇರಿಸಿ 3-4 ನಿಮಿಷ ಬೇಯಿಸಿ ಅಥವಾ ಕುದಿಯುವವರೆಗೆ ಬೇಯಿಸಿ.

ಅದಕ್ಕೆ ಹುರಿದ ಪನೀರ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತೆ ಕೆಲವು ನಿಮಿಷ ಬೇಯಿಸಿ. ರುಚಿಯಾದ ಪಾಲಕ್ ಪನೀರ್ ಸವಿಯಲು ಸಿದ್ಧವಾಗಿದೆ.

7. ಮೂಲಂಗಿ ಕಾಯಿ ಪಲ್ಯ

ಬೇಕಾಗುವ ಸಾಮಗ್ರಿಗಳು

ಮೂಲಂಗಿ ಕಾಯಿ – 1 ಬಟ್ಟಲು
ಚಿಕ್ಕದಾಗಿ ಕತ್ತರಿಸಿದ ಆಲೂಗಡ್ಡೆ 1
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಟೊಮೆಟೊ – 1
ಸಣ್ಣಗೆ ಹೆಚ್ಚಿದ ಹಸಿ ಮೆಣಸಿನ ಕಾಯಿ -2
ಎಣ್ಣೆ 1 ಚಮಚ
ಜೀರಿಗೆ 1/2 ಚಮಚ
ಸಾಸಿವೆ 1/2 ಚಮಚ
ಅರಿಶಿಣ ಪುಡಿ 1/4 ಚಮಚ
ಮೆಣಸಿನ ಪುಡಿ 1 ಟೇಬಲ್ ಚಮಚ
ಹುರಿದ ಶೇಂಗಾ ಪುಡಿ 1 ಟೇಬಲ್ ಚಮಚ
ಒಣ ಕೊಬ್ಬರಿ ಪುಡಿ 1 ಟೇಬಲ್ ಚಮಚ
ಒಣ ಮೆಣಸಿನಕಾಯಿ 1
ಕರಿಬೇವಿನ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Saakshatv cooking recipes Moolangi curry

ಮಾಡುವ ವಿಧಾನ

ಮೊದಲಿಗೆ ಮೂಲಂಗಿ ತೊಳೆದು ಕತ್ತರಿಸಿ ಇಟ್ಟುಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ‌ಎಣ್ಣೆ ಬಿಸಿಯಾದಾಗ ಅದಕ್ಕೆ ಜೀರಿಗೆ, ಸಾಸಿವೆ ಹಾಕಿ. ಸಾಸಿವೆ ಸಿಡಿದ ಬಳಿಕ ಕರಿಬೇವು, ಒಣ ಮೆಣಸಿನಕಾಯಿ ಮುರಿದು ಹಾಕಿ ಹುರಿಯಿರಿ.
ಈಗ ಈರುಳ್ಳಿ ಸೇರಿಸಿ ಕೆಂಪಗಾಗುವವರೆಗೆ ಹುರಿಯಿರಿ. ಬಳಿಕ ಅದಕ್ಕೆ ಹಸಿ ಮೆಣಸಿನ ಕಾಯಿ ಹಾಕಿ, ಆಲೂಗಡ್ಡೆ ಹಾಕಿ ಬಾಡಿಸಿ. ನಂತರ ಮೂಲಂಗಿ ಕಾಯಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಬಳಿಕ ಟೊಮೆಟೊ ಸೇರಿಸಿ.
Saakshatv cooking recipes Moolangi curry
ಈಗ ಅರಿಶಿಣ ಪುಡಿ, ಉಪ್ಪು, ಮೆಣಸಿನ ಪುಡಿ ಹಾಕಿ, 2 ಟೇಬಲ್ ಚಮಚ ನೀರು ಸೇರಿಸಿ ಟೊಮೆಟೊ ಮೃದುವಾಗುವವರೆಗೆ ಚೆನ್ನಾಗಿ ಬೇಯಿಸಿ. ನಂತರ ಶೇಂಗಾ ಪುಡಿ, ಕೊಬ್ಬರಿ ಪುಡಿ ಹಾಕಿ ಕಲಸಿ. ಮುಚ್ಚಳ ಮುಚ್ಚಿ 5 ರಿಂದ 10 ನಿಮಿಷ ಬೇಯಿಸಿ. ರುಚಿಯಾದ ‌ಮೂಲಂಗಿ ಕಾಯಿ ಪಲ್ಯ ರೊಟ್ಟಿ ಅಥವಾ ಚಪಾತಿ ಜೊತೆ ಸವಿಯಲು ಸಿದ್ಧವಾಗಿದೆ.

8. ಹೋಂಮೇಡ್ ವೆನಿಲ್ಲಾ ಐಸ್ ಕ್ರೀಂ

ಬೇಕಾಗುವ ಪದಾರ್ಥ:

ಹಾಲು – 3 ಕಪ್
ಮಿಲ್ಕ್ ಮೇಡ್ – 1 ಕಪ್
ಕಸ್ಟರ್ಡ್ ಪೌಡರ್ – 2 ಚಮಚ
ವಿಪ್ಪಿಂಗ್ ಕ್ರೀಮ್ 150 ಗ್ರಾಂ
ವೆನಿಲ್ಲಾ ಎಸೆನ್ಸ್ – 1 ಚಮಚ
Saakshatv cooking recipes ice cream
Saakshatv cooking recipes ice cream

ಮಾಡುವ ವಿಧಾನ

ಮೊದಲನೆಯದಾಗಿ ಹಾಲನ್ನು ಚೆನ್ನಾಗಿ ಕಾಯಿಸಿ. ಹಾಲು ಕುದಿ ಬಂದಾಗ ಅದಕ್ಕೆ ಎರಡು ಚಮಚ ಕಸ್ಟರ್ಡ್ ಪೌಡರ್ ಕರಗಿಸಿ ಹಾಕಿ. ಪುನಃ ಹಾಲನ್ನು ಕುದಿ ಬರುವವರೆಗೆ ಚೆನ್ನಾಗಿ ಕಾಯಿಸಿ. ನಂತರ ಹಾಲನ್ನು ಆರಲು ಬಿಡಿ.
ಹಾಲು ಆರಿದ ಬಳಿಕ ‌ಅದಕ್ಕೆ ವೆನಿಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಒಂದು ಪಾತ್ರೆಗೆ ವಿಪ್ಪಿಂಗ್ ಕ್ರೀಂ ಹಾಕಿ, ಹ್ಯಾಂಡ್ ಮಿಕ್ಸರ್ ನಿಂದ ಹತ್ತು ನಿಮಿಷ ಬ್ಲೆಂಡ್ ಮಾಡಿ. ಇದಕ್ಕೆ ಮಿಲ್ಕ್ ಮೇಡ್, ಆರಿದ ಹಾಲನ್ನು ಸೇರಿಸಿ. 2 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿ ಗ್ಲಾಸ್ ಅಥವಾ ಮೆಟಲ್ ಕಂಟೈನರ್ ಗೆ ಹಾಕಿ ಸೆಟ್ ಆಗಲು ಬಿಡಿ. ಬಳಿಕ ಡೀಪ್ ಫ್ರೀಜರ್ ನಲ್ಲಿಡಿ.
Saakshatv cooking recipes ice cream

ಎರಡು ಗಂಟೆಯ ಬಳಿಕ ಮತ್ತೆ ಹ್ಯಾಂಡ್ ಮಿಕ್ಸರ್ ನಿಂದ ಚೆನ್ನಾಗಿ ಬ್ಲೆಂಡ್ ಮಾಡಿ, ಫ್ರೀಜ್ ನಲ್ಲಿಟ್ಟು, ನಾಲ್ಕು ಗಂಟೆಗಳ ತನಕ ಸೆಟ್ ಆಗಲು ಬಿಡಿ. ಈಗ ಪುನಃ ತೆಗೆದು ಹ್ಯಾಂಡ್ ಮಿಕ್ಸರ್ ನಿಂದ ಒಂದು ನಿಮಿಷ ಚೆನ್ನಾಗಿ ಕಲಸಿ ನಂತರ ಗಾಳಿಯಾಡದ( air tight) ಕಂಟೈನರ್ ಅಥವಾ ಐಸ್ ಕ್ರೀಂ ಬಾಕ್ಸ್ ಗೆ ಹಾಕಿ ಗಟ್ಟಿಯಾಗಿ ಮುಚ್ಚಳ ಮುಚ್ಚಿ 10 ರಿಂದ 12 ಗಂಟೆ ಫ್ರೀಜರ್ ನಲ್ಲಿಟ್ಟು ಸವಿಯಿರಿ.

Saakshatv cooking recipes ice cream

9. ದೊಣ್ಣೆ ಮೆಣಸಿನ ವಾಂಗಿಬಾತ್

ಬೇಕಾಗುವ ಸಾಮಗ್ರಿಗಳು

ಹೆಚ್ಚಿದ ದೊಣ್ಣೆ ಮೆಣಸು 2
ಸಣ್ಣಗೆ ಹೆಚ್ಚಿದ ಈರುಳ್ಳಿ 2
ಕರಿಬೇವಿನ ಸೊಪ್ಪು – ಸ್ವಲ್ಪ
ಹುಣಸೆ ರಸ 1/4 ಕಪ್
ಬೇಯಿಸಿದ ಬಟಾಣಿ – 1/2 ಕಪ್
ಗೋಡಂಬಿ – ಸ್ವಲ್ಪ
ಕಡಲೆ ಕಾಯಿ ಬೀಜ – ಸ್ವಲ್ಪ
ಕಡಲೆ ಬೇಳೆ – 1 ಚಮಚ
ಉದ್ದಿನ ಬೇಳೆ – 1 ಚಮಚ
ವಾಂಗೀಬಾತ್ ಪುಡಿ – 2 ಚಮಚ
ಮೆಣಸಿನ ಪುಡಿ – ಅಗತ್ಯ
ಬೆಲ್ಲ – 1 ತುಂಡು
ಎಣ್ಣೆ – 3 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಇಂಗು – 1/4 ಚಮಚ
ನೀರು
Saakshatv cooking recipes Capsicum vangibhath
Saakshatv cooking recipes Capsicum vangibhath

ಮಾಡುವ ವಿಧಾನ

ಮೊದಲಿಗೆ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ ಹಾಕಿ. ಸಾಸಿವೆ ಸಿಡಿದ ಬಳಿಕ ಇಂಗು, ಅರಿಶಿನ ಪುಡಿ, ಕಡಲೆ ಕಾಯಿ ಬೀಜ ಹಾಕಿ ಸ್ವಲ್ಪ ಹುರಿಯಿರಿ. ‌ ಈಗ ಅದಕ್ಕೆ ಕಡಲೆ ಬೇಳೆ, ಉದ್ದಿನ ಬೇಳೆ, ಗೋಡಂಬಿ ಹಾಕಿ ಸ್ವಲ್ಪ ಕೆಂಪಗಾಗುವವರೆಗೆ ಹುರಿಯಿರಿ.
Saakshatv cooking recipes Capsicum vangibhath

ನಂತರ ಈರುಳ್ಳಿ, ದೊಣ್ಣೆ ಮೆಣಸು, ಕರಿಬೇವು ಸೇರಿಸಿ ಚೆನ್ನಾಗಿ ಬಾಡಿಸಿ. ಅದಕ್ಕೆ ಬೇಯಿಸಿದ ಬಟಾಣಿ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ‌ಈಗ ವಾಂಗೀಬಾತ್ ಪುಡಿ, ಮೆಣಸಿನ ಪುಡಿ, ಉಪ್ಪು, ಬೆಲ್ಲ, ಹುಣಸೆ ರಸ ಸೇರಿಸಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿ. 10 ನಿಮಿಷ ಕೈಯಾಡಿಸಿ ಕುದಿಸಿ. ಕತ್ತರಿಸಿದ ಕೊತಂಬರಿ ಸೊಪ್ಪು ಸೇರಿಸಿ. ಈಗ ಆರಿಸಿದ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ರುಚಿಕರವಾದ ದೊಣ್ಣೆ ಮೆಣಸಿನ ವಾಂಗಿಬಾತ್ ಸವಿಯಲು ಸಿದ್ಧ.

ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ..

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd