ಸೋನುಗೆ ಫೋರ್ಬ್ಸ್ ನಿಂದ ಗೌರವ : `ಕೋವಿಡ್-19 ಹೀರೋ’ ಪಟ್ಟ..!
ಕೊರೊನಾ ಲಾಕ್ ಡೌನ್ ವೇಳೆ ಬಡಬಗ್ಗರಿಗೆ ನೆರವಾಗಿ ರಿಯಲ್ ಹೀರೋ ಎನಿಸಿಕೊಂಡಿರುವ ಸೋನು ಸೂದ್ ಗೆ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸಿಕ್ಕಿದೆ. ಸೋನು ಸೂದ್ ಗೆ ಫೋರ್ಬ್ಸ್ ನಿಂದ ಲೀಡರ್ ಶಿಪ್ ಅವಾರ್ಡ್ 2021 ನೀಡಿ ಗೌರವಿಸಲಾಗಿದೆ. ಸೋನು ಸೂದ್ ‘ಕೋವಿಡ್ -19 ಹೀರೋ’ ಎಂದುಫೋರ್ಬ್ಸ್ ಬಣ್ಣಿಸಿದೆ. ಈ ಪ್ರಶಸ್ತಿ ಸಿಕ್ಕ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿರುವ ಸೋನು ಕೈ ಮುಗಿದು ಟ್ವೀಟ್ ಕೃತಜ್ಞತೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಸೋನು ಸೂದ್ ಅವರ ಬಾವಚಿತ್ರವನ್ನ ಸ್ಪೈಸ್ ಜೆಟ್ ವಿಮಾನ ಸಂಸ್ಥೆಯು ವಿಮಾನ ಮೇಲೆ ಹಾಕಿಸಿ ರಕ್ಷನಿಗೆ ಸಲಾಂ ಎಂದು ಗೌರವಿಸಿತ್ತು. ವಿದೇಶಿ ವಿಮಾನ ಸಂಸ್ಥೆಯಿಂದ ಗೌರವ ಪಡೆದ ಮೊದಲ ನಟ ಎಂಬ ಹೆಗ್ಗಳಿಕೆಯೂ ಸೋನು ಸೂದ್ ಅವರದ್ದು.