ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪಿಎಂ ಮನಮೋಹನ್ ಸಿಂಗ್ (Manmohan Singh) ಅವರನ್ ಹೊಗಳಿದ್ದಾರೆ.
ರಾಜ್ಯಸಭೆಯ (Rajya Sabha) ನಿವೃತ್ತ ಸದಸ್ಯರ ಬೀಳ್ಕೊಡುಗೆ ಸಂದರ್ಭದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಅವರು ವ್ಹೀಲ್ಚೇರ್ನಲ್ಲಿ ಬಂದು ಮತ ಹಾಕಿದ್ದಾರೆ. ಅವರು ದೇಶಕ್ಕೆ ಸಲ್ಲಿಸಿದ ಕೊಡುಗೆ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಅವರ ಬದ್ಧತೆ ಶ್ಲಾಘನೀಯ ಎಂದರು.
ನಾನು ಮನಮೋಹನ್ ಸಿಂಗ್ ಅವರನ್ನು ಸ್ಮರಿಸುತ್ತೇನೆ. ಅವರ ಕೊಡುಗೆ ಅಪಾರವಾಗಿದೆ. ಡಾ.ಮನಮೋಹನ್ ಸಿಂಗ್ ಇಷ್ಟು ದಿನ ಈ ಸದನ ಮತ್ತು ದೇಶಕ್ಕೆ ಮಾರ್ಗದರ್ಶನ ನೀಡಿದ ರೀತಿ ಸದಾ ನೆನಪಿನಲ್ಲಿ ಉಳಿಯಲಿದೆ. ಮತದಾನದ ಸಂದರ್ಭದಲ್ಲಿ ಆಡಳಿತ ಪಕ್ಷವೇ ಗೆಲ್ಲುತ್ತದೆ ಎಂದು ಗೊತ್ತಿದ್ದರೂ ವ್ಹೀಲ್ ಚೇರ್ನಲ್ಲಿ ಬಂದು ಮತ ಚಲಾಯಿಸಿದ್ದು ಕೂಡ ನನಗೆ ಚೆನ್ನಾಗಿ ನೆನಪಿದೆ. ಅವರು ಯಾರಿಗೆ ಅಧಿಕಾರ ಕೊಡಲು ಬಂದಿದ್ದರು ಎಂಬುದು ಪ್ರಶ್ನೆಯಲ್ಲ. ಅವರು ಪ್ರಜಾಪ್ರಭುತ್ವಕ್ಕೆ ಶಕ್ತಿ ನೀಡಲು ಬಂದಿದ್ದರು ಎಂಬುವುದು ಮುಖ್ಯ ಎಂದು ಹೊಗಳಿದ್ದಾರೆ.
ಸದಸ್ಯರು ತಮ್ಮ ಕರ್ತವ್ಯಗಳ ಬಗ್ಗೆ ಎಚ್ಚರವಾಗಿರುವುದಕ್ಕೆ ಅದು ಉತ್ತಮ ಉದಾಹರಣೆ. ಮನಮೋಹನ್ ಸಿಂಗ್ ಎಲ್ಲ ಸಂಸದರಿಗೆ ಸ್ಫೂರ್ತಿ ಎಂದು ಮೋದಿ ಹೊಗಳಿದರು.