Las Vegas – ಏರ್ಪೋರ್ಟ್ ನಲ್ಲಿ ವಿಮಾನಗಳ ಡಿಕ್ಕಿ, ನಾಲ್ವರ ಸಾವು
ಅಮೆರಿಕಾದ ಲಾಸ್ ವೇಗಾಸ್ನ ವಿಮಾನ ನಿಲ್ದಾಣದಲ್ಲಿ ಎರಡು ಸಣ್ಣ ವಿಮಾನಗಳು ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿರು ಘಟನೆ ಭಾನುವಾರ ನಡೆದಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿವೆ.
ಸಿಂಗಲ್ ಇಂಜಿನ್ ಪೈಪರ್ ಪಿಎ-46 ವಿಮಾನ ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನದ ಸುಮಾರಿಗೆ ನೆವಾಡಾ ರಾಜ್ಯದ ನಾರ್ತ್ ಲಾಸ್ ವೇಗಾಸ್ ವಿಮಾನ ನಿಲ್ದಾಣದಲ್ಲಿ ಇಳಿಯಲು ತಯಾರಿ ನಡೆಸುತ್ತಿದ್ದಾಗ, ಸಿಂಗಲ್ ಇಂಜಿನ್ ಸೆಸ್ನಾ 172 ಗೆ ಡಿಕ್ಕಿ ಹೊಡೆದಿದೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ.
“ಪೈಪರ್ ವಿಮಾನ ಅಪಘಾತಕ್ಕೀಡಾಗಿ ರನ್ ವೆ ಪೂರ್ವಕ್ಕೆ ಬಿದ್ದಿದೆ. ಸೆಸ್ನಾ ವಿಮಾನ ನೀರಿನ ಹೊಂಡಕ್ಕೆ ಬಿದ್ದಿದೆ. ಪ್ರತಿ ವಿಮಾನದಲ್ಲಿ ಇಬ್ಬರು ವ್ಯಕ್ತಿಗಳಿಂದ್ದು, ನಾಲ್ವರೂ ಸಾವನ್ನಪ್ಪಿದ್ದಾರೆ ದು ಫೆಡರೇಷನ್ ಹೇಳಿದೆ.