ಪುಣೆ: ಲಾಕ್‍ಡೌನ್‍ನಿಂದಾಗಿ ಬ್ಯುಸಿನೆಸ್‍ನಲ್ಲಿ ಉಂಟಾದ ನಷ್ಟದಿಂದ ತತ್ತರಿಸಿ ಹೋಗಿದ್ದ ಒಂದೇ ಕುಟುಂಬದ ನಾಲ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಪುಣೆಯ ಸುಖ್‍ಸಾಗರ ನಗರದ ಮನೆಯೊಂದರಲ್ಲಿ ವಾಸವಿದ್ದ ದಂಪತಿ, ತಮ್ಮ ಇಬ್ಬರು ಮಕ್ಕಳನ್ನು ನೇಣು ಹಾಕಿ ಕೊಲೆ ಮಾಡಿ ನಂತರ ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ ರಾತ್ರಿ 10.30ರ ಸುಮಾರಿಗೆ ಪೊಲೀಸರಿಗೆ ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಮನೆಯ ಬಾಗಿಲು ಒಡೆದು ನೋಡಿದಾಗ ನಾಲ್ವರ ದೇಹಗಳು ನೇತಾಡುತ್ತಿದ್ದವು. ಕೂಡಲೇ ಪೊಲೀಸರು ಮೃತ ದೇಹಗಳನ್ನು ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಿದರೂ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಲಾಕ್‍ಡೌನ್ ಹೊಡೆತ: ನೇಣಿಗೆ ಕೊರಳೊಡ್ಡಿದ ಒಂದೇ ಕುಟುಂಬದ ನಾಲ್ವರುಪುಣೆ ನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಐಡೆಂಟಿಟಿ ಕಾರ್ಡ್ ಪ್ರಿಟಿಂಗ್ ನಡೆಸುತ್ತಿದ್ದ ಮನೆಯ ಯಜಮಾನನಿಗೆ ಲಾಕ್‍ಡೌನ್‍ನಿಂದಾಗಿ ಕಳೆದ ಮೂರು ತಿಂಗಳಿಂದ ಯಾವುದೇ ಕೆಲಸ ಇರಲಿಲ್ಲ. ಹೀಗಾಗ ವ್ಯಾಪಾರದಲ್ಲಿ ಉಂಟಾದ ಭಾರಿ ನಷ್ಟದಿಂದ ಕುಟುಂಬ ನಿರ್ವಹಣೆ ಮಾಡಲು ಕಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಡಿಸಿಪಿ ಸಿರಿಶ್ ಸರದೇಶಪಾಂಡೆ ತಿಳಿಸಿದ್ದಾರೆ.