ಸ್ಮಶಾನದ ಹಿಂದಿನ ಗೋಡೆ ಕುಸಿದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಗುರುಗ್ರಾಮದ ಸೈಬರ್ ಸಿಟಿಯ ಮದನ್ ಪುರಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಬಾಲಕಿ ಸೇರಿದಂತೆ ನಾಲ್ವರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿ, ಅವಶೇಷ ಹೊರ ತೆಗೆಯುವ ಕಾರ್ಯ ಮಾಡಿದ್ದಾರೆ.
ಸ್ಮಶಾನದ 18 ಅಡಿ ಎತ್ತರದ ಗೋಡೆ ಇದ್ದಕ್ಕಿದ್ದಂತೆ ಕುಸಿದಿದೆ. ಪರಿಣಾಮ ಅಲ್ಲಿದ್ದ 6 ಜನರು ಅವಶೇಷಗಳಡಿ ಹೂತುಹೋದರು. ಅಕ್ಕಪಕ್ಕದ ಜನರು ಅವಶೇಷಗಳನ್ನು ತೆಗೆಯುವ ಕಾರ್ಯ ಮಾಡಿದರು. ಅವಶೇಷಗಳಡಿ ಸಿಲುಕಿದ್ದ ಜನರನ್ನು ಕೂಡಲೇ ರಕ್ಷಿಸಿ ಗುರುಗ್ರಾಮದ ಆಸ್ಪತ್ರೆಗೆ ದಾಖಲಿಸಲಾಯಿತು. ದೇವಿ ದಯಾಳ್ (72), ಕೃಷ್ಣ ಕುಮಾರ್ (52), ಮನೋಜ್ (35) ಮತ್ತು ಬಾಲಕಿ ಖುಷ್ಬೂ (10) ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅಲ್ಲದೇ, ಗೋಡೆ ಪಕ್ಕ ನಿಲ್ಲಿಸಿದ್ದ ಕೆಲವು ಬೈಕ್ ಗಳು ಕೂಡ ಅವಶೇಷಗಳಡಿ ಹೂತು ಹೋಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.