G Murthy
ಚಂದನವನದ ಹಿರಿಯ ನಿರ್ದೇಶಕ ಜಿ ಮೂರ್ತಿಯವರು ಇಂದು ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಮನೆಯಲ್ಲಿ ಜಾರಿ ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ಈ ವೇಳೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಬ್ರೈನ್ ಹ್ಯಾಮರೇಜ್ ನಿಂದ 56 ವರ್ಷದ ಜಿ ಮೂರ್ತಿಯವರು ಇಹಲೋಕ ತ್ಯಜಿಸಿದ್ದಾರೆ.
ಹಿರಿಯ ಚಿತ್ರ ನಿರ್ದೇಶಕ ಜಿ ವಿ ಅಯ್ಯರ್ ಅವರ ಸಿನಿಮಾಗಳಿಗೆ ಕಲಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಕೃಷ್ಣಮೂರ್ತಿಯವರ ಜೊತೆ ಸಹಾಯಕರಾಗಿ ಕೆಲಸ ಮಾಡುವ ಮೂಲಕ ಜಿ ಮೂರ್ತಿ ವೃತ್ತಿಜೀವನ ಆರಂಭಿಸಿದರು. ಬಳಿಕ ನಿರ್ದೇಶಕರಾಗಿ ಎಂಬತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಕಾರ್ಯನಿರ್ವಹಿಸಿದ್ದರು ಇನ್ನು ಕೇವಲ ಕನ್ನಡ ಸಿನಿಮಾಗಳಿಗೆ ಮಾತ್ರವಲ್ಲ ತೆಲುಗು ತಮಿಳು ಮಲಯಾಳಂ ಹಿಂದಿ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ ಇನ್ನು ಚಂದ್ರಚಕೋರಿ ಮತ್ತು ಕರುನಾಡು ಚಿತ್ರಗಳ ಕಲಾ ನಿರ್ದೇಶನಕ್ಕಾಗಿ ಅವರಿಗೆ ಎರಡು ಬಾರಿ ರಾಜ್ಯ ಪ್ರಶಸ್ತಿ ಸಿಕ್ಕಿದೆ.
ಇವರ ನಿರ್ದೇಶನದಲ್ಲಿ ಹಳ್ಳಿಯ ಮಕ್ಕಳು ವೈಷ್ಣವಿ ಅರಳುವ ಹೂಗಳು ಸಿದ್ದಗಂಗಾ ಸುಗಂಧಿ ಸೇರಿದಂತೆ ಒಟ್ಟು ಎಂಟು ಸಿನಿಮಾಗಳು ಮೂಡಿಬಂದಿದೆ. ಜಿ ಮೂರ್ತಿ ಅವರ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ
G Murthy