ರೈಲಿಯಲ್ಲಿ ನವವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ – 8 ಆರೋಪಿಗಳ ಬಂಧನ

1 min read

ರೈಲಿಯಲ್ಲಿ ನವವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ – 8 ಆರೋಪಿಗಳ ಬಂಧನ

ಮುಂಬೈ : ಚಲಿಸುವ ರೈಲಿಯಲ್ಲಿಯೇ 20 ವರ್ಷದ ನವವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಪ್ರಕರಣ ಸಂಬಂಧ ಪೊಲೀಸರು 8 ಆರೋಪಿಗಳನ್ನ ಬಂಧಿಸಿದ್ದಾರೆ. ಮಹಾರಾಷ್ಟ್ರದ ಇಗತ್‌ಪುರಿ ಮತ್ತು ಕಾಸರ ರೈಲು ನಿಲ್ದಾಣಗಳ ನಡುವೆ ಲಖನೌ – ಮುಂಬೈ ಪುಷ್ಪಕ್ ಎಕ್ಸ್‌ಪ್ರೆಸ್ ಅತ್ಯಾಚಾರ ನಡೆದಿತ್ತು.

ಅತ್ಯಾಚಾರ ನಡೆಸಿ ಪ್ರಯಾಣಿಕರನ್ನು ದರೋಡೆ ಮಾಡಿದ್ದ ಎಲ್ಲ ಎಂಟು ಆರೋಪಿಗಳನ್ನು ಇದೀಗ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಇಗತ್‌ಪುರಿಯಲ್ಲಿ ಮುಂಬೈಗೆ ಹೋಗುವ ರೈಲು ಹತ್ತಿದ್ದರು. ರೈಲು ಘಾಟ್ ಸೆಕ್ಷನ್ ಮೂಲಕ ಹಾದು ಹೋಗುತ್ತಿದ್ದಾಗ ನವ ವಿವಾಹಿತೆ ಮೇಲೆ ಅತ್ಯಾಚಾರ ಎಸಗಿದ್ದರು. ಮೊದಲು ನಾಲ್ವರನ್ನು ಬಂಧಿಸಲಾಗಿತ್ತು. ಇದೀಗ ಉಳಿದವರನ್ನೂ ಬಂಧಿಸಲಾಗಿದೆ.

ಇತ್ತೀಚೆಗೆ ಮದುವೆಯಾಗಿ ಮುಂಬೈನಲ್ಲಿ ನೆಲೆಸಲು ಪತಿ ಜತೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 20 ವರ್ಷದ ಮಹಿಳೆ ಮೇಲೆ ಆರೋಪಿಗಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅಲ್ಲದೇ ಮಹಿಳೆಯ ಪತಿ ಆಕೆಯನ್ನು ರಕ್ಷಿಸಲು ಯತ್ನಿಸಿದ ವೇಳೆ ಆರೋಪಿಗಳು ಆತನ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರಪ್ರದೇಶ : ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಬಂಧಿತರೆಲ್ಲರೂ 25 ವರ್ಷದೊಳಗಿನವರೇ ಆಗಿದ್ದು ಘಟನೆ ವೇಳೆ ಗಾಂಜಾ ಸೇವಿಸಿದ್ದರು ಎನ್ನಲಾಗಿದೆ. (20) ಪಾಕ್ಯ ದಾಮು ಪಾರ್ಧಿ,(20) ಪವ್ಯಾ ಸುಭಾಷ್ ಸಿಂಗ್ ಪರದೇಶಿ, (19) ಅರ್ಷದ್ ಶೇಖ್, ಅರ್ಜುನ್ , (25) ಕಾಲಿಯಾ, (23) ಕಾಶಿನಾಥ ರಾಮಚಂದ್ರ ತೇಲಂ ಕಶ್ಯ, (20)ಆಕಾಶ್ ಶೆಣೋರ್ , (19) ಧನಂಜಯ್ ಭಗತ್, (22) ರಾಹುಲ್ ಆಡೋಲೆ ಬಂಧಿತ ಆರೋಪಿಗಳಾಗಿದ್ದಾರೆ.

ರೈಲು ಪ್ರವೇಶಿಸಿದ ನಂತರ  ಪ್ರಯಾಣಿಕರಿಗೆ ಚಾಕು ತೋರಿಸಿ 16 ಪ್ರಯಾಣಿಕರಿಂದ ನಗದು ಮತ್ತು ಒಂಬತ್ತು ಮಂದಿಯಿಂದ ಮೊಬೈಲ್ ಫೋನ್‌ಗಳನ್ನು ದೋಚಿದ್ದರು. ಬಳಿಕ ಅತ್ಯಾಚಾರವೆಸಗಿದ್ದಾರೆ. ಸ್ಥಳಕ್ಕೆ ಪೊಲೀಸರು ಬರೋ ಹೊತ್ತಿಗೆ ನಾಲ್ವರು ಪರಾರಿಯಾಗಿದ್ದು, ನಾಲ್ವರು ಸಿಕ್ಕಿಬಿದ್ದಿದ್ದರು. ಉಳಿದವರನ್ನೂ ಇದೀಗ ಅರೆಸ್ಟ್ ಮಾಡಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd