ಸಲಿಂಗಿಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಶಕರ್ಪುರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸಲಿಂಗ ದಂಪತಿಗಳ ಮೇಲೆಯೇ ಅತ್ಯಾಚಾರ ನಡೆಸಿದ್ದಾರೆ. ಮೂವರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ತಂಡಗಳು ಸುತ್ತಮುತ್ತಲಿನ ಸುಮಾರು 50 ಕ್ಯಾಮೆರಾಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. 20 ವರ್ಷ ವಯಸ್ಸಿನ ದೇವಶಿಶ್ ವರ್ಮಾ, 21 ವರ್ಷ ವಯಸ್ಸಿನ ಸುರ್ಜೀತ್ ಮತ್ತು 20 ವರ್ಷದ ಆರ್ಯನ್ ಅಲಿಯಾಸ್ ಗೋಲು ಬಂಧಿತರು ಎನ್ನಲಾಗಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರಿಗಾಗಿ ಬಲೆ ಬೀಸಲಾಗಿದೆ.