ಸ್ವಂತ ಸಹೋದರರಿಂದಲೇ ಯುವತಿ ಮೇಲೆ 5 ವರ್ಷಗಳಿಂದ ನಿರಂತರ ಅತ್ಯಾಚಾರ
ರಾಜಸ್ಥಾನ : ಸಹೋದರಿಯರನ್ನ ನೀಚರಿಂದ ಕಾಪಾಡಿಕೊಳ್ಳಬೇಕಾದ ಸಹೋದರರೇ ಸ್ವಂತ ಒಡಹುಟ್ಟಿದವಳ ಮೇಲೆ 5 ವರ್ಷಗಳಿಂದ ನಿರಂತರವಾಗಿ ಅತ್ಯಾಚಾರವೆಸಗಿರುವ ಹೇಯ ಕೃತ್ಯ ರಾಜಸ್ಥಾನದ ಜೋಧ್ಪುರದಲ್ಲಿ ಬೆಳಕಿಗೆ ಬಂದಿದೆ. ಇವರ ಈ ನೀಚ ಕೃತ್ಯಕ್ಕೆ ಸ್ವಂತ ತಾಯಿಯೇ ಸಾಥ್ ಕೊಟ್ಟಿರುವುದು ಆಘಾತಕಾರಿ ಸಂಗತಿಯಾಗಿದೆ.
ಕಳೆದ ಐದು ವರ್ಷಗಳಿಂದ ನಿರಂತರ ಯುವತಿ ಮೇಲೆ ಅತ್ಯಾಚಾರವೆಸಗಲಾಗಿದೆ. ಅಲ್ಲದೇ ಒಮ್ಮೆ ಗರ್ಭಿಣಿ ಕೂಡ ಆಗಿದ್ದು, ಗರ್ಭಪಾತ ಮಾಡಿಸಲಾಗಿದೆ. ಈ ಬಗ್ಗೆ ಸಂತ್ರಸ್ತೆಯು ಜೋಧ್ಪುರದ ಪ್ರತಾಪ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆಕೆಯ ಸಹೋದರರು ಹಾಗೂ ತಾಯಿ ವಿರುದ್ಧ ಸಾಮೂಹಿಕ ಅತ್ಯಾಚಾರದ ಆರೋಪದಡಿ ದೂರು ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ಧಾರೆ.
ಈ ಸಂಬಂಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.. ವೈದ್ಯಕೀಯ ತಪಾಸಣೆಯ ನಂತರ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.