ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಗ್ಯಾರಿ ಕ್ರಿಸ್ಟನ್‌ ಹೆಡ್ ಕೋಚ್..?

1 min read
Gary-kirsten saaksha tv

ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಗ್ಯಾರಿ ಕ್ರಿಸ್ಟನ್‌ ಹೆಡ್ ಕೋಚ್..?

ಟಿ20 ವಿಶ್ವಕಪ್-2021 ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಅಬ್ಬರಿಸುತ್ತಿದೆ. ಭಾರತ, ನ್ಯೂಜಿಲೆಂಡ್ ನಂತಹ ಅಗ್ರ ತಂಡಗಳ ವಿರುದ್ಧ ಸರಣಿ ಗೆಲುವಿನೊಂದಿಗೆ ಸೆಮೀಸ್ ಸಮೀಪಿಸುತ್ತಿದೆ. ಆ ಮೂಲಕ ಕ್ರೀಡಾ ವಿಶ್ಲೇಷಕರಿಂದ ಪ್ರಶಂಸೆ ಗಳಿಸಿದೆ.

ಈ ಮಧ್ಯೆ ಪಾಕಿಸ್ತಾನಕ್ಕೆ ಟೀಂ ಇಂಡಿಯಾದ ಮಾಜಿ ಕೋಚ್ ಗ್ಯಾರಿ ಕ್ರಿಸ್ಟನ್‌ ಮುಖ್ಯ ಕೋಚ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು..! ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನಾ ಮುಖ್ಯ ಕೋಚ್ ಮಿಸ್ಬಾ-ಉಲ್-ಹಕ್ ಸೇರಿದಂತೆ ಬೌಲಿಂಗ್ ಕೋಚ್ ವಕಾರ್ ಯೂನಿಸ್ ರಾಜೀನಾಮೆ ಘೋಷಿಸಿದ್ದಾರೆ. ಮೆಗಾ ಈವೆಂಟ್ ಆರಂಭಕ್ಕೂ ಮುನ್ನ ಈ ನಿರ್ಧಾರದಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಜುಗರಕ್ಕೀಡಾಗಿತ್ತು.

Gary-kirsten saaksha tv

ಅಲ್ಲದೆ ಟಿ20 ಟೂರ್ನಿಗಾಗಿ ಸಕ್ಲೆಯನ್ ಮುಸ್ತಾಕ್ ಅವರನ್ನು ಹಂಗಾಮಿ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಆದಾಗ್ಯೂ… ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಅವರು ವಿದೇಶಿ ಕೋಚ್‍ಗೆ ಈ ಜವಾಬ್ದಾರಿಗಳನ್ನು ಹಸ್ತಾಂತರಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಗ್ಯಾರಿ ಕ್ರಿಸ್ಟನ್‌ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಮಿಸ್ಬಾ ಬದಲಿಗೆ ಕಸ್ರ್ಟನ್ ಅವರನ್ನು ಆಯ್ಕೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಅವರ ಜೊತೆ ಸೈಮನ್ ಕ್ಯಾಟಿಚ್ (ಆಸ್ಟ್ರೇಲಿಯಾ) ಮತ್ತು ಪೀಟರ್ ಮೂರ್ಸ್ (ಇಂಗ್ಲೆಂಡ್) ಹೆಸರು ಕೂಡ ಕೇಳಿಬಂದಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd