ADVERTISEMENT
Saturday, August 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಷಡ್ಯಂತ್ರ ಕುತಂತ್ರ ಕುಯುಕ್ತಿಗಳಿಂದ ಚೀನಾ ಜಗತ್ತನ್ನೇ ಗೆಲ್ಲಲು ಹೊರಟಿದೆ ಆದರೆ ನೆನಪಿಡಿ ಇಂದಲ್ಲ ನಾಳೆ ಈ ನೀಚ ಚೀನಿಯರ ಸರ್ವನಾಶ ನಿಶ್ಚಿತ:

admin by admin
May 13, 2020
in International, Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಈಗ್ಗೆ ಒಂದೂವರೆ ತಿಂಗಳ ಹಿಂದಷ್ಟೇ ಅಂಬೋ ಎಂದು ಲಬಲಬ ಬಾಯಿ ಬಡಿದುಕೊಳ್ಳುತ್ತಿದ್ದ ಚೀನಾ ಈಗ ಮೀಸೆ ತಿರುವಿ ಅಟ್ಟಹಾಸ ಮೆರೆಯುತ್ತಿದೆ. ಚೀನಾದ ಗಡಿಗಳು ಮುಚ್ಚಿವೆ ಮತ್ತು ಚೀನಿಯರ ಯಂತ್ರಗಳು ಮತ್ತೆ 24 ಗಂಟೆ ಸದ್ದು ಮಾಡುತ್ತಿವೆ. ಜಗತ್ತಿನಾದ್ಯಂತ ಬೇಡಿಕೆ ಪಡೆದುಕೊಂಡಿರುವ ಅತಿ ದೊಡ್ಡ ಗ್ಲೋಬಲ್ ಆರ್ಡರ್ ಚೀನಿಯರ ಮುಂದಿದೆ. ಅದು ಯಾವುವು ಗೊತ್ತಾ? ಮಾಸ್ಕ್, ಗ್ಲೌಸ್ ಮತ್ತು ವೆಂಟಿಲೇಟರ್.

ಅಮೇರಿಕಾ, ಫ್ರಾನ್ಸ್, ಇಟಲಿ, ಸ್ಪೇನ್, ಇರಾನ್, ಬಹುತೇಕ ಯುರೋಪಿಯನ್ ರಾಷ್ಟ್ರಗಳು, ಬಹುತೇಕ ಕೊಲ್ಲಿ ರಾಷ್ಟ್ರಗಳು, ಬಹುತೇಕ ಮುಂದುವರೆಯುತ್ತಿರುವ ತೃತೀಯ ಜಗತ್ತಿನ ರಾಷ್ಟ್ರಗಳು, ಚೀನಾದ ಮುಂದೆ ಮಂಡಿಯೂರಿ ಶರಣಾಗಿವೆ. ಸೋ ಕಾಲ್ಡ್ ಸಾರ್ವಭೌಮ ಚೀನಾ ತನ್ನ ರಾಷ್ಟ್ರಾದ್ಯಂತ ಕರೋನಾ ಕಂಟ್ರೋಲಿಂಗ್ ಉತ್ಪನ್ನಗಳ ಉತ್ಪಾದನೆಯಲ್ಲಿ ಬ್ಯುಸಿಯಾಗಿದೆ. ದುಡ್ಡಿರುವ ರಾಷ್ಟ್ರಗಳನ್ನು ಆಲ್ ಮೋಸ್ಟ್ ಸುಲಿಗೆ ಮಾಡುತ್ತಿದೆ ಮತ್ತು ಬಡ ರಾಷ್ಟ್ರಗಳಿಗೆ ಸಾಲದ ರೂಪದಲ್ಲಿ ವಿತರಣೆ ಮಾಡಿ ವಸಾಹತು ಸ್ಥಾಪಿಸಲು ಷಡ್ಯಂತ್ರ ಹೂಡುತ್ತಿದೆ.

ಕೆಲವೇ ದಿನಗಳ ಹಿಂದೆ ಖುದ್ದು ಐಸಿಯೂ ನಲ್ಲಿದ್ದ ಚೀನಾ ಈಗ ವೆಂಟಿಲೇಟರ್ ಗಳನ್ನು ಸರಬರಾಜು ಮಾಡುವ ಜಗತ್ತಿನ ಅತ್ಯಂತ ದೊಡ್ಡ ರಾಷ್ಟ್ರವಾಗಿ ಮಾರ್ಪಟ್ಟಿದೆ. ಜಾಗತಿಕ ಬ್ಯುಸಿನೆಸ್ ವರದಿಯನ್ವಯ 9000 ಹೊಸ ಮಾಸ್ಕ್ ಉತ್ಪಾದಿಸುವ ಸಂಸ್ಥೆಗಳು ಈ ಶಾರ್ಟ್ ಪಿರಿಯಡ್ ನಲ್ಲಿ ಹುಟ್ಟಿಕೊಂಡಿವೆ. ಪ್ರತಿ ದಿನ ಚೀನಾ 116 ಮಿಲಿಯನ್ ನಷ್ಟು ಮಾಸ್ಕ್ ಗಳನ್ನು ಪ್ರೊಡ್ಯೂಸ್ ಮಾಡುತ್ತಿದೆ. ಚೀನಾದ ಅತಿ ದೊಡ್ಡ ಮಾಸ್ಕ್ ಉತ್ಪಾದನಾ ಸಂಸ್ಥೆ ಡಾನ್ ಪಾಲಿಮರ್ ಶೇ. 40 ರಷ್ಟು ಮಾರ್ಕೆಟ್ ಶೇರ್ ಹೊಂದಿದ್ದು, ಜನವರಿಯಿಂದೀಚೆಗೆ ಶೇ.417 % ಲಾಭಗಳಿಕೆಯೊಂದಿಗೆ ಇದು 1.9 ಬಿಲಿಯನ್ ಅಮೇರಿಕನ್ ಡಾಲರ್ ವಹಿವಾಟು ನಡೆಸಿದೆ. ಕೇವಲ ಮೂರು ತಿಂಗಳಲ್ಲಿ ಈ ಮಟ್ಟದ ಬೆಳವಣಿಗೆ ಸಾಧಿಸಿದ ಮತ್ತೊಂದು ಕಂಪೆನಿ ಜಗತ್ತಿನಲ್ಲಿ ಇರಲು ಸಾಧ್ಯವಿಲ್ಲ.

ಅನ್ ರಿಸ್ಟ್ರಿಕ್ಟೆಡ್ ವಾರ್ ಫೇರ್ ; ಚೈನಾಸ್ ಮಾಸ್ಟರ್ ಪ್ಲಾನ್ ಟು ಡೆಸ್ಟ್ರಾಯ್ ಅಮೇರಿಕಾ ಅನ್ನುವ ಪುಸ್ತಕವೊಂದು 1999ರಲ್ಲಿ ಪ್ರಕಟವಾಗಿತ್ತು. ಈ ಪುಸ್ತಕದಲ್ಲಿ ಚೀನಾದ ಮಿಲಿಟರಿ ಕುತಂತ್ರಗಳನ್ನು ಎಳೆಎಳೆಯಾಗಿ ಬಿಡಿಸಿಡಲಾಗಿದೆ. ಇದನ್ನ ಬರೆದವರು ಇಬ್ಬರು ಚೀನಾದ ಸೇನಾ ಜನರಲ್ ಗಳು ಕ್ಯುಯಾವ್ ಲಿಯಾಂಗ್ ಮತ್ತು ವಾಂಗ್ ಶಿಯಾಂಗ್ ಸೂ. ಈ ಪುಸ್ತಕದಲ್ಲಿದ್ದ ವಾದ ಅತ್ಯಂತ ಸರಳ, ನೇರ ಮತ್ತು ಸ್ಪಷ್ಟ. ಚೀನಾ ನೇರವಾಗಿ ಮಿಲಿಟರಿ ತಾಕತ್ತಿನೊಂದಿಗೆ ಎದುರಿಸಿ ಅಮೇರಿಕಾವನ್ನು ಎದುರಿಸಿ ಗೆಲ್ಲಲು ಸಾಧ್ಯವಿಲ್ಲ ಹಾಗಾಗಿ ಚೀನಾ ತನ್ನ ಕುಯುಕ್ತಿ ಉಪಯೋಗಿಸಿ ಅಮೇರಿಕಾ ಮತ್ತು ಯುರೋಪಿಯನ್ ಮಾರುಕಟ್ಟೆಯ ಎಕಾನಮಿಯ ಬೆನ್ನುಮೂಳೆ ಮುರಿದರೆ ಜಗತ್ತಿನಲ್ಲೇ ಅತ್ಯಂತ ದೊಡ್ಡ ಸೂಪರ್ ಪವರ್ ರಾಷ್ಟ್ರವಾಗುತ್ತದೆ. ಈ ನಿಟ್ಟಿನಲ್ಲಿ ಚೀನಾ ಅಭಿವೃದ್ಧಿಗೊಳಿಸಿಕೊಂಡ ಪರಮ ಶಕ್ತಿಯುತ ಅಸ್ತ್ರವೇ ಬಯೋ ವೆಪನ್. ಅಲ್ಲಿಗೆ ಈ ಬಯೋವಾರ್ ನಡೆಸಲು ಚೀನಿಯರು ನಡೆಸಿದ್ದ ಸಿದ್ಧತೆ ಇಂದು ನಿನ್ನೆಯದಲ್ಲ.

ಫೈನ್ ನಿಮ್ಮಲ್ಲಿ ಬಹಳಷ್ಟು ಚೀನಾ ಭಕ್ತ ಜನಗಣಗಳು ಇದನ್ನು ಕಾನ್ಸ್ ಪಿರಸಿ ಥಿಯರಿ ಎಂದೇ ವಾದಿಸುತ್ತೀರಾ! ಆದರೆ ವಾಸ್ತವ ಬಿಚ್ಚಿಡುತ್ತಾ ಹೋದರೆ ತರ್ಕಿಸುವ ಶಕ್ತಿ ನಿಮಗಿದ್ದರೆ ನೀವೇ ನಿರ್ಧರಿಸಿ. ಸದ್ಯ ಚೀನಾದ ಸ್ಥಿತಿ ಹೇಗಿದೆ ನೋಡೋಣ ಬನ್ನಿ. ಚೀನಾದ ಲಾಕ್ ಡೌನ್ ತೆರವಾಗಿದೆ. ಲಾಕ್ ಡೌನ್ ಇದ್ದಿದ್ದೂ ಸಹ ಪೂರ್ತಿ ಚೀನಾದಲ್ಲಲ್ಲ. ಕರೋನಾ ಬಾಧಿತ ಪ್ರದೇಶಗಳು ಕೂಡಾ ವುಹಾನ್, ಹುಬೈ ನಂತಹ ಪರಮ ಕೊಳಕು ಕೆಳ ಮಧ್ಯಮ ವರ್ಗದ ಜನ ಬದುಕುತ್ತಿದ್ದ ಕೆಲವೇ ಪ್ರದೇಶಗಳಲ್ಲಿ. ಸತ್ತವರೂ ಸಹ ಭಾಗಶಃ ಕೆಳ ಮಧ್ಯಮವರ್ಗದ ಬಡವರೇ.

ಈಗ ಚೀನಾದ ಎಲ್ಲಾ ಸೆಕ್ಟರ್ ರೀಓಪನ್ ಆಗಿದೆ. ಚೀನಿಯರ ಕಾರ್ಖಾನೆ ಮತ್ತೆ ಶುರುವಾಗಿದೆ. ಹಗಲು ರಾತ್ರಿ ಎನ್ನದೆ ಉತ್ಪಾದನೆ ನಡೆಯುತ್ತಿದೆ. ಈಗ ಪೂರೈಸಬೇಕಿರುವ ಸರಕುಗಳನ್ನು ಸಾಧ್ಯವಾದಷ್ಟು ಬೇಗ ಸರಬರಾಜು ಮಾಡಿ ಕೈತುಂಬಾ ದೋಚಕೊಳ್ಳಬೇಕಲ್ಲ. ಚೀನಾದ ಬಡ ಪ್ರಾಂತ್ಯಗಳಲ್ಲಿ ಆದಷ್ಟು ಹಾನಿ ಚೀನಾದ ಶ್ರೀಮಂತ ಪ್ರದೇಶಗಳಲ್ಲಿ ಆಗಲಿಲ್ಲ. ಚೀನಾ ರಾಜಧಾನಿ ಬೀಜಿಂಗ್ ನಲ್ಲಿ ಕರೋನಾ ಸೋಂಕಿತರು ಪತ್ತೆಯಾಗಿದ್ದು ಕೇವಲ 569 ಬಲಿಯಾದವರು ಕೇವಲ 8 ಬೀಜಿಂಗ್ ನ ಜನಸಂಖ್ಯೆ 2.1 ಕೋಟಿ. ಶಾಂಘೈನಲ್ಲಿ ವರದಿಯಾಗಿದ್ದು 468 ಪ್ರಕರಣಗಳು ಸತ್ತವರು 5 ಮಂದಿ; ಶಾಂಘೈ ಜನಸಂಖ್ಯೆ 2.4 ಕೋಟಿ. ಅಂದರೆ ಅಪ್ಪಿ ತಪ್ಪಿಯೂ ಚೀನಾದ ಆರ್ಥಿಕತೆಗೆ ಪೆಟ್ಟು ಬೀಳದಂತೆ ಮಾಸ್ಟರ್ ಪ್ಲಾನ್ ಮಾಡಲಾಯಿತು. ಸಾಯುವರು ಬಡವರು ನಿರ್ಗತಿಕರು ತಾನೆ, ಸಾಯಲಿ ಬಿಡಿ; ಭೂಮಿಗೆ ಭಾರ.

ಇನ್ನೊಂದು ಮುಖ್ಯ ಸಂಗತಿ ಗಮನಿಸಿ. ಚೀನಾದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ವಿದೇಶಿ ಸಂಸ್ಥೆಗಳು ಹೋದ ತಿಂಗಳಿನಿಂದಲೇ ಕಾರ್ಯಾಚರಣೆ ಆರಂಭಿಸಿವೆ. ಕರೋನಾ ಸಂಕಷ್ಟ ಕಾಲ ಎಂದು ಆಗ ಚೀನಾ ಜಗತ್ತಿನ ಮುಂದೆ ಬೊಬ್ಬೆ ಹೊಡೆಯುತ್ತಿತ್ತು. ಬಿಎಂಡಬ್ಲ್ಯೂ, ಫಿಯೆಟ್ ಕ್ರೈಸ್ಲರ್, ಫಾಕ್ಸ್ ಕಾನ್, ಟೆಸ್ಲಾ ಸಂಸ್ಥೆಗಳು ರಾಜಾರೋಷವಾಗಿ ತಮ್ಮ ಕೆಲಸ ಮಾಡುತ್ತಲೇ ಇವೇ. ಚೀನಾದೊಳಗೇ ಇದ್ದ ಈ ಸಂಸ್ಥೆಗಳಿಗೆ ಕರೋನಾ ಸೋಂಕು ತಾಕದೇ ಇದ್ದಿದ್ದು ಹೇಗೆ? ಯಾಂಗ್ ಚಾವ್ ಎನ್ನುವ ಚೀನೀ ವ್ಯವಹಾರಗಳ ಉನ್ನತಾಧಿಕಾರಿ ಶಾಂಗೈ ಮತ್ತು ಬೀಜಿಂಗ್ ಗಳಲ್ಲಿ ಮತ್ತೆ ಕಾರ್ಯಾಚರಣೆ ನಡೆಸುತ್ತಿರುವ ಸಂಗತಿಯನ್ನು ಈಗ ಹೆಮ್ಮೆ ಅಭಿಮಾನದಿಂದ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾನೆ.

ನಮ್ಮ ರಾಷ್ಟ್ರದಲ್ಲಿರುವ ಬಹಳಷ್ಟು ಚೀನಾ ಭಕ್ತರು ಹೊಗಳಿ ಅಟ್ಟಕ್ಕೇರಿಸುವ ಸಾರ್ವಭೌಮಾ ಚೀನಾದ ಅಸಲಿ ಮುಖ ಇದೆ. ಮೊದಲು ವೈರಸ್ ಉತ್ಪಾದಿಸಿತು. ತನ್ನ ಒಡಲ ಮಕ್ಕಳನ್ನೇ ಮುಲಾಜಿಲ್ಲದೆ ಕೊಂದುಹಾಕಿತು. ನಂತರ ಜಗತ್ತಿನೆದುರು ಮೊಸಳೆ ಕಣ್ಣಿರು ಸುರಿಸಿತು. ಬಳಿಕ ತಾನೆ ಮುಂದೆ ನಿಂತು ಮೆಡಿಕಲ್ ಉತ್ಪನ್ನಗಳನ್ನು ಜಗತ್ತಿಗೆ ಉತ್ಪಾದಿಸಿ ಕಳಿಸಿತು. ಇನ್ನೇನು ಕೆಲವೇ ದಿನಗಳಲ್ಲಿ ಕೋವಿಡ್-19 ನೋವಲ್ ಕರೋನಾ ವೈರಸ್ ನ ಆಂಟಿಡೋಸ್ ಅನ್ನು ಲಾಭದಾಯಕ ಬೆಲೆಯಲ್ಲಿ ಜಗತ್ತಿಗೆ ಚೀನಾ ಮಾರಾಟ ಮಾಡಿದರೂ ಆಶ್ಚರ್ಯವೇನಿಲ್ಲ.

ಕಾರ್ಪೋರೇಟ್ ಮಾಫಿಯಾದ ವಿಷವರ್ತುಲ ಸೃಷ್ಟಿಸಿದ ಈ ಜಾಗತಿಕ ಕ್ಷೋಭೆಗೆ ನೇರವಾದ ಕಾರಣ ಚೀನಾ. ನಮ್ಮಲ್ಲಿ ಬಹಳಷ್ಟು ಕಮ್ಯೂನಿಸ್ಟರ ಡಾರ್ಲಿಂಗ್ ಇದೇ ಚೀನಾ ತನ್ನ ಬಡ ಪ್ರಜೆಗಳನ್ನು ಕಾರ್ಮಿಕರನ್ನು ನಿರ್ದಯಿಯಾಗಿ ಕೊಂದಿತಲ್ಲ, ಇನ್ನಾದರೂ ಈ ಮನುಕುಲ ದ್ರೋಹಿ ರಾಷ್ಟ್ರವನ್ನು ಸಮರ್ಥಿಸಿ ಮಾತಾಡಿಕೊಳ್ಳಬೇಡಿ. ಇನ್ನೂ ಇದನ್ನು ಷಡ್ಯಂತ್ರ ಕಾನ್ಸ್ ಪಿರಸಿ ಥಿಯರಿ ಎಂದೆಲ್ಲಾ ತಿಪ್ಪೇ ಸಾರಿಸಲು ಬಂದರೆ ನೀವು ಮನುಷ್ಯರೇ ಅಲ್ಲ.

Related posts

ಸಿದ್ದರಾಮಯ್ಯ ಹೊಗಳಿದ್ರು ಆದ್ರೆ ಮಂತ್ರಿ ಸ್ಥಾನ ನೀಡಲಿಲ್ಲ : ಸಮಾಧಾನಗೊಳ್ಳುವ ಪ್ರಶ್ನೆಯೇ ಇಲ್ಲ ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕ ಎಂ ಕೃಷ್ಣಪ್ಪ ಬಿಗಿಪಟ್ಟು

ಸಿದ್ದರಾಮಯ್ಯ ಹೊಗಳಿದ್ರು ಆದ್ರೆ ಮಂತ್ರಿ ಸ್ಥಾನ ನೀಡಲಿಲ್ಲ : ಸಮಾಧಾನಗೊಳ್ಳುವ ಪ್ರಶ್ನೆಯೇ ಇಲ್ಲ ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕ ಎಂ ಕೃಷ್ಣಪ್ಪ ಬಿಗಿಪಟ್ಟು

August 8, 2026
ಉಳ್ಳವರು ಮೀಸಲಾತಿ ಬಿಟ್ಟುಕೊಡಲಿ ದುರ್ಬಲರಿಗೆ ನ್ಯಾಯ ಸಿಗಲಿ – ಮೀಸಲಾತಿ ಶಾಶ್ವತ ವ್ಯವಸ್ಥೆಯಲ್ಲ ಉಳ್ಳವರ ತ್ಯಾಗದಿಂದ ಮಾತ್ರ ದಲಿತ ಹಿಂದುಳಿದವರಿಗೆ ನ್ಯಾಯ ಸಾಧ್ಯ: ಮೋಹನ್ ಭಾಗವತ್

ಉಳ್ಳವರು ಮೀಸಲಾತಿ ಬಿಟ್ಟುಕೊಡಲಿ ದುರ್ಬಲರಿಗೆ ನ್ಯಾಯ ಸಿಗಲಿ – ಮೀಸಲಾತಿ ಶಾಶ್ವತ ವ್ಯವಸ್ಥೆಯಲ್ಲ ಉಳ್ಳವರ ತ್ಯಾಗದಿಂದ ಮಾತ್ರ ದಲಿತ ಹಿಂದುಳಿದವರಿಗೆ ನ್ಯಾಯ ಸಾಧ್ಯ: ಮೋಹನ್ ಭಾಗವತ್

August 8, 2026

ನಾವು ಭಾರತೀಯರು ಮಾತ್ರವಲ್ಲ ಇಡೀ ಜಗತ್ತು ಮುಂದೊಂದು ದಿನ ಚೀನಾದ ಎಲ್ಲಾ ಉತ್ಪನ್ನಗಳನ್ನು ಬಾಯ್ಕಾಟ್ ಮಾಡಿ ಅವರ ಬೆನ್ನು ಮೂಳೆ ಮುರಿಯಬೇಕು. ಅದೇ ಕೃತ್ರಿಮ ಚೀನಿಯರ ಆರ್ಥಿಕ ಅಹಂಕಾರಕ್ಕೆ ನಾವು ಕೊಡಬೇಕಿರುವ ಉತ್ತರ. ನೆನಪಿಡಿ ಬಂಡವಾಳ ಶಾಹಿ ಅಮೇರಿಕಾಗಿಂತ ಹೆಚ್ಚಿನ ಅಪಾಯಕಾರಿ ಮನುಕುಲ ವಿರೋಧಿ ನೀಚ ರಾಷ್ಟ್ರ ಚೀನಾ.

ಮೂಲ: ಗ್ರಾವಿಟಸ್ ಸುದ್ದಿ ವಾಹಿನಿ

– ವಿಭಾ
***

Tags: ChinaVibha
ShareTweetSendShare
Join us on:

Related Posts

ಸಿದ್ದರಾಮಯ್ಯ ಹೊಗಳಿದ್ರು ಆದ್ರೆ ಮಂತ್ರಿ ಸ್ಥಾನ ನೀಡಲಿಲ್ಲ : ಸಮಾಧಾನಗೊಳ್ಳುವ ಪ್ರಶ್ನೆಯೇ ಇಲ್ಲ ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕ ಎಂ ಕೃಷ್ಣಪ್ಪ ಬಿಗಿಪಟ್ಟು

ಸಿದ್ದರಾಮಯ್ಯ ಹೊಗಳಿದ್ರು ಆದ್ರೆ ಮಂತ್ರಿ ಸ್ಥಾನ ನೀಡಲಿಲ್ಲ : ಸಮಾಧಾನಗೊಳ್ಳುವ ಪ್ರಶ್ನೆಯೇ ಇಲ್ಲ ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕ ಎಂ ಕೃಷ್ಣಪ್ಪ ಬಿಗಿಪಟ್ಟು

by Shwetha
August 8, 2026
0

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಡಶಾಲೆಯಲ್ಲಿ ಬಂಡಾಯದ ಬೇಗುದಿ ಜೋರಾಗಿದೆ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೆಂಗಳೂರಿನ ಹಿರಿಯ ಶಾಸಕ...

ಉಳ್ಳವರು ಮೀಸಲಾತಿ ಬಿಟ್ಟುಕೊಡಲಿ ದುರ್ಬಲರಿಗೆ ನ್ಯಾಯ ಸಿಗಲಿ – ಮೀಸಲಾತಿ ಶಾಶ್ವತ ವ್ಯವಸ್ಥೆಯಲ್ಲ ಉಳ್ಳವರ ತ್ಯಾಗದಿಂದ ಮಾತ್ರ ದಲಿತ ಹಿಂದುಳಿದವರಿಗೆ ನ್ಯಾಯ ಸಾಧ್ಯ: ಮೋಹನ್ ಭಾಗವತ್

ಉಳ್ಳವರು ಮೀಸಲಾತಿ ಬಿಟ್ಟುಕೊಡಲಿ ದುರ್ಬಲರಿಗೆ ನ್ಯಾಯ ಸಿಗಲಿ – ಮೀಸಲಾತಿ ಶಾಶ್ವತ ವ್ಯವಸ್ಥೆಯಲ್ಲ ಉಳ್ಳವರ ತ್ಯಾಗದಿಂದ ಮಾತ್ರ ದಲಿತ ಹಿಂದುಳಿದವರಿಗೆ ನ್ಯಾಯ ಸಾಧ್ಯ: ಮೋಹನ್ ಭಾಗವತ್

by Shwetha
August 8, 2026
0

ಮುಂಬೈ: ಮೀಸಲಾತಿ ಎನ್ನುವುದು ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಇರುವ ವ್ಯವಸ್ಥೆಯೇ ಹೊರತು ಅದು ಶಾಶ್ವತವಲ್ಲ. ಈಗಾಗಲೇ ಮೀಸಲಾತಿ ಲಾಭ ಪಡೆದು ಸಮಾಜದಲ್ಲಿ ಸಬಲರಾಗಿರುವವರು ಸ್ವಯಂಪ್ರೇರಣೆಯಿಂದ ಮೀಸಲಾತಿ ಸೌಲಭ್ಯವನ್ನು...

ಬೆಂಗಳೂರಿನಲ್ಲಿ 48.90 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕೈಬಿಡುವ ಆತಂಕ

ಬೆಂಗಳೂರಿನಲ್ಲಿ 48.90 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕೈಬಿಡುವ ಆತಂಕ

by Shwetha
August 8, 2026
0

ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮರುಪರಿಶೀಲನೆ (SIR) ಪ್ರಕ್ರಿಯೆ ವೇಳೆ, ತಮ್ಮ ಮಾಹಿತಿ ಮತ್ತು ದಾಖಲೆಗಳನ್ನು ದೃಢೀಕರಿಸದ ಮತದಾರರ ಹೆಸರುಗಳು ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡುವ...

ಪರಿಷತ್ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ ಹೊರಟ್ಟಿ ರಾಜೀನಾಮೆ ಪಡೆದ ಸರ್ಕಾರದ ವಿರುದ್ಧ ಬೊಮ್ಮಾಯಿ ಕೆಂಡ

ಪರಿಷತ್ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ ಹೊರಟ್ಟಿ ರಾಜೀನಾಮೆ ಪಡೆದ ಸರ್ಕಾರದ ವಿರುದ್ಧ ಬೊಮ್ಮಾಯಿ ಕೆಂಡ

by Shwetha
August 8, 2026
0

ಬೆಂಗಳೂರು: ದೇಶದ ಅತ್ಯಂತ ಹಿರಿಯ ವಿಧಾನ ಪರಿಷತ್ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಸರ್ಕಾರ ಅನುಸರಿಸಿದ ಹಾದಿ...

ಭಾರತ ಹಿಂದೂ ರಾಷ್ಟ್ರವಾದರೆ ಶೋಷಿತರಿಗೆ ಅಪಾಯ ಎಂದ ಯತೀಂದ್ರ ಸಿದ್ದರಾಮಯ್ಯ: ಡೋಂಗಿ ಜಾತ್ಯಾತೀತರಿಂದ ನಮಗೆ ಪಾಠ ಬೇಡವೆಂದು ಗುಡುಗಿದ ಆರ್ ಅಶೋಕ್

ಭಾರತ ಹಿಂದೂ ರಾಷ್ಟ್ರವಾದರೆ ಶೋಷಿತರಿಗೆ ಅಪಾಯ ಎಂದ ಯತೀಂದ್ರ ಸಿದ್ದರಾಮಯ್ಯ: ಡೋಂಗಿ ಜಾತ್ಯಾತೀತರಿಂದ ನಮಗೆ ಪಾಠ ಬೇಡವೆಂದು ಗುಡುಗಿದ ಆರ್ ಅಶೋಕ್

by Shwetha
August 8, 2026
0

ಭಾರತವು ಹಿಂದೂ ರಾಷ್ಟ್ರವಾಗಬಾರದು ಎಂಬ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಇದೀಗ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಹಾಗೂ ತೀವ್ರ ವಾಕ್ಸಮರಕ್ಕೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram