ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ಆಗಿರುವುದು ಆಭರಣ ಪ್ರಿಯರಿಗೆ ಖುಷಿ ತಂದಿದೆ.ಮದುವೆ ಮಾಡುವವರಿಗೆ ಸ್ವಲ್ಪಮಟ್ಟಿನ ನಿರಾಳರಾಗಿಸಿದೆ. ಚಿನ್ನ ಕೊಳ್ಳುವವರು ಈಗ ಹೆಚ್ಚಿನ ಉಳಿತಾಯ ಮಾಡಬಹುದಾಗಿದೆ. ಕಳೆದ ವಾರದಲ್ಲಿ ಏರಿಕೆ ಆಗುತ್ತಿದ್ದ ಚಿನ್ನದ ಬೆಲೆ ಭಾನುವಾರದಿಂದ ಇಳಿಕೆಯಾಗುತ್ತ ಸಾಗಿದೆ.
22 ಕ್ಯಾರೆಟ್ ಚಿನ್ನದ ದರ ಗ್ರಾಂ ಗೆ 7,093
ರೂಪಾಯಿ
24 ಕ್ಯಾರೆಟ್ ಗ್ರಾಂ ಬೆಲೆ 7,735 ರೂಪಾಯಿ
10 ಗ್ರಾಂ ಚಿನ್ನದ ಬೆಲೆ 70,900 ರೂಪಾಯಿ
ಬೆಳ್ಳಿ ದರ ಗ್ರಾಂ ಗೆ 89.50 ರೂಪಾಯಿ ಇದ್ದು, ಕೆಜಿ ಬೆಲೆ 89,500 ರೂಪಾಯಿ ಇದೆ.
ಬೆಂಗಳೂರಿನಲ್ಲಿ ಕಳೆದ ಎರಡ್ಮೂರು ದಿನಗಳಿಂದ ಚಿನ್ನದ ದರದಲ್ಲಿ ಇಳಿಕೆ ಆಗುತ್ತಿದ್ದು, ಇಂದು ಕೂಡಾ 10 ಗ್ರಾಂ ನಲ್ಲಿ 120 ರೂಪಾಯಿ ಕಡಿಮೆ ಆಗಿದೆ. ನವೆಂಬರ್ ತಿಂಗಳಲ್ಲಿ ಭಾರೀ ಏರಿಕೆ ಕಂಡಿದ್ದ ಚಿನ್ನದ ದರ, ನವೆಂಬರ್ ಅಂತ್ಯದ ವೇಳೆಗೆ ಇಳಿಕೆಯ ಹಾದಿ ಹಿಡಿದಿದೆ.ಮಂದೇನು ಕಾದು ನೋಡೋಣ