ಹೊಸದಿಲ್ಲಿ, ಮೇ 23 : ಗೂಗಲ್ ತನ್ನ ಸರ್ಚ್ ಎಂಜಿನ್ ಪ್ಲಾಟ್ಫಾರ್ಮ್ ಕ್ರೋಮ್ ಗಾಗಿ ಅಪ್ಡೇಟ್ ಬಿಡುಗಡೆ ಮಾಡಿದ್ದು, ಬಳಕೆದಾರರು ಅದನ್ನು ಇನ್ನು ಸುಲಭವಾಗಿ ಬಳಸಬಹುದಾಗಿದೆ.
ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಕ್ರೋಮ್ ಬ್ರೌಸರ್ನಲ್ಲಿ ಹೊಸ ಸುರಕ್ಷಿತ ಬ್ರೌಸಿಂಗ್ ಮೋಡ್ ಆಯ್ಕೆಯನ್ನು ಸೇರಿಸಿದ್ದು, ಇದರಿಂದ ಫಿಶಿಂಗ್, ಮಾಲ್ವೇರ್ ಮತ್ತು ಇತರ ಸೈಬರ್ಗಳು ದಾಳಿಯನ್ನು ತಪ್ಪಿಸಲು ಸಾಧ್ಯವಾಗಲಿದೆ.
ಕಂಪನಿಯು ಡೆಸ್ಕ್ ಟಾಪ್ ಗಳಿಗಾಗಿ ಗೌಪ್ಯತೆ ಮತ್ತು ಸುರಕ್ಷತೆಯ ಹೊಸ ಅಪ್ಡೇಟ್ ಅನ್ನು ಬಿಡುಗಡೆ ಮಾಡಿದೆ. ಇದರಿಂದ ಬಳಕೆದಾರರು ಡೇಟಾದಲ್ಲಿ ಹಂಚಿಕೆಯನ್ನು ಸುರಕ್ಷಿತವಾಗಿರಿಸಲು ಸಾಧ್ಯವಾಗಲಿದೆ ಮತ್ತು ಇದು ಅಪಾಯಕಾರಿ ಅಪ್ಲಿಕೇಶನ್ ಡೌನ್ಲೋಡ್ ಆಗುವುದರಿಂದ ರಕ್ಷಣೆ ಮಾಡಲಿದೆ. ಹೆಚ್ಚಿನ ಗೌಪ್ಯತೆ ಕಾಪಾಡಲು ಅಜ್ಞಾತ ಮೋಡ್ ನಲ್ಲಿ ಹೆಚ್ಚಿನ ಖಾಸಗಿತನ ಸಿಗಲಿದ್ದು, ಕುಕೀಗಳನ್ನು ನಿರ್ಬಂಧಿಸುವ ಆಯ್ಕೆಯನ್ನು ಬಳಕೆದಾರರಿಗೆ ನೀಡಿದೆ.
ಇದರಿಂದಾಗಿ ಬಳಕೆದಾರರನ್ನು ಕುಕೀಗಳ ಮೂಲಕ ಟ್ರ್ಯಾಕ್ ಮಾಡುತ್ತಿದ್ದ ಆನ್ಲೈನ್ ಜಾಹೀರಾತುದಾರರಿಗೆ ಇನ್ನು ಮುಂದೆ ಅದು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ ತನ್ನ ಬಳಕೆದಾರರಿಗೆ ಅವರ ಪಾಸ್ ವರ್ಡ್ ಸೋರಿಕೆಯಾಗಿದೆಯೇ ಎಂಬ ಮಾಹಿತಿಯನ್ನು ಕೂಡ ಗೂಗಲ್ ಕ್ರೋಮ್ ತಿಳಿಸಲಿದೆ. ಬಾರ್ ಕೋಡ್ ಪತ್ತೆ ಹಚ್ಚುವಿಕೆಯನ್ನು ಸಹ ಬೆಂಬಲಿಸಲಿರುವ ಗೂಗಲ್ ಕ್ರೋಮ್ ಚಿತ್ರದಲ್ಲಿ ನೀಡಲಾಗಿರುವ ಬಾರ್ಕೋಡ್ ಅನ್ನು ಪತ್ತೆ ಹಚ್ಚಿ ಡಿಕೋಡ್ ಮಾಡಲಿದೆ. ಅಲ್ಲದೇ ಬಳಕೆದಾರರು ವೆಬ್ಸೈಟ್ಗಳಲ್ಲಿನ ಎಲ್ಲಾ ಕುಕೀಗಳನ್ನು ಸಹ ನಿರ್ಬಂಧಿಸಬಹುದಾಗಿದೆ.
ಬಳಕೆದಾರರು ಹೆಚ್ಚಾಗಿ ತಮ್ಮ ಬ್ರೌಸಿಂಗ್ ಹಿಸ್ಟರಿ ಅನ್ನು ಅಳಿಸುತ್ತಾರೆ. ಅದಕ್ಕಾಗಿ, ಗೌಪ್ಯತೆ ಮತ್ತು ಸುರಕ್ಷತೆಯ ಮೇಲ್ಭಾಗದಲ್ಲಿ ಕ್ಲಿಯರ್ ಬ್ರೌಸಿಂಗ್ ಡೇಟಾದ ಆಯ್ಕೆಯನ್ನು ಸಹ ಗೂಗಲ್ ನೀಡಿದೆ. ಗೂಗಲ್ ಕಂಪನಿಯ ಪ್ರಕಾರ, ಕ್ರೋಮ್ನ ಡೆಸ್ಕ್ ಟಾಪ್ ಪ್ಲಾಟ್ ಫಾರ್ಮ್ನಲ್ಲಿ ಕೂಡ ಹೊಸ ಅಪ್ಡೇಟ್ ಹಾಗೂ ವೈಶಿಷ್ಟ್ಯಗಳು ಶೀಘ್ರದಲ್ಲೇ ಬಿಡುಗಡೆ ಆಗಲಿದೆ.








