ಅಜ್ಜಿಯ ಪ್ರೇಮದ ವಿಡಿಯೋ ವೈರಲ್
ಅಜ್ಜಿಗೆ ವಾಕಿಂಗ್ ಸ್ಟಿಕ್ ನಿಂದ ತಿವಿದ ಅಜ್ಜ
ಕೆಲಸದೊಂದಿಗೆ ಅಜ್ಜನೊಂದಿಗೆ ಮಾತನಾಡುತ್ತಿರುವ ಅಜ್ಜಿ
ಅಜ್ಜನ ತಲೆಯನ್ನು ಪ್ರೀತಿಯಿಂದ ಬಾಚಿದ ಅಜ್ಜಿ
grandmas-love-video-goes-viral
ಅಜ್ಜ -ಅಜ್ಜಿಯ ಪ್ರೇಮದ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ಹಾರೈಸುತ್ತಿದ್ದಾರೆ. ಅಜ್ಜಿ ತನ್ನ ಪಾಡಿಗೆ ತಾನು ಸೊಪ್ಪು ಬಿಡಿಸುತ್ತಿರುತ್ತಾಳೆ. ಅಜ್ಜ ಆಕೆಯನ್ನು ವಾಕಿಂಗ್ ಸ್ಟಿಕ್ ನಿಂದ ತಿವಿದು ತನ್ನೆಡೆ ಗಮನ ಸೆಳೆಯುತ್ತಿದ್ದಾನೆ. ಕೆಲಸವನ್ನೂ ಮಾಡುತ್ತ ಅಜ್ಜನೊಂದಿಗೆ ಮಾತನಾಡುತ್ತಲೇ ಇದ್ದಾಳೆ. ಕೊನೆಗೆ ತಂಬಿಗೆಯಲ್ಲಿಯ ನೀರನ್ನು ತಲೆಗೆ ಸಿಂಪಡಿಸಿ ಉಜ್ಜಿಕೊಳ್ಳುತ್ತ ಮತ್ತೆ ಆಕೆಯನ್ನು ತನ್ನೆಡೆ ಸೆಳೆಯಲು ನೋಡುತ್ತಿದ್ದಾನೆ. ಹುಸಿಗದರಿನಿಂದಲೇ ತಂಬಿಕೆಯನ್ನು ಇಸಿದುಕೊಳ್ಳುತ್ತಾಳೆ. ಅತ್ತಿತ್ತ ಓಲಾಡುವ ಮಗುವಿನ ಗದ್ದ ಹಿಡಿದು ಬಾಚುವಂತೆ ಕೆದರಿಕೊಂಡ ಅಜ್ಜನ ತಲೆಯನ್ನು ಬಾಚುತ್ತಾಳೆ ಅಜ್ಜಿ.
ಈ ವಿಡಿಯೋ ನೆಟ್ಟಿಗರ ಮನಸೂರೆಗೊಂಡಿದೆ. ಈಗಿನ ಎಳೇಜೋಡಿಗಳು ಇಂಥ ವಿಡಿಯೋಗಳನ್ನು ನೋಡಬೇಕು. ಇದು ಶುದ್ಧಪ್ರೀತಿ ಎನ್ನುತ್ತಿದ್ದಾರೆ. ಸುಮಾರು 62,000 ಜನರು ಈ ವಿಡಿಯೋ ಇಷ್ಟಪಟ್ಟಿದ್ಧಾರೆ. ಇಂಥ ಪ್ರೀತಿ ಈಗಿನ ಪೀಳಿಗೆಯಲ್ಲಿ ಇದೆಯೇ? ಖಂಡಿತ ಇಲ್ಲ ಮರೆತುಬಿಡಿ ಎಂದಿದ್ದಾರೆ ಒಬ್ಬರು. ಕಳೆದ ತಿಂಗಳು ಕ್ಯಾನ್ಸರ್ನಿಂದ ನನ್ನ ಅಜ್ಜನನ್ನು ಕಳೆದುಕೊಂಡೆ. ಈ ದೃಶ್ಯ ಅವರನ್ನು ನೆನಪಿಸುತ್ತಿದೆ ಎಂದಿದ್ದಾರೆ ಇನ್ನೊಬ್ಬರು.








