Gujarat – ಕಲಬೆರಕೆ ಮದ್ಯ ಸೇವಿಸಿ 25 ಮಂದಿ ಮೃತ
ಕಲಬೆರಕೆ ಮದ್ಯ ಸೇವಿಸಿ 25 ಮಂದಿ ಪ್ರಾಣ ಕಳೆದುಕೊಂಡಿದ್ದು 40 ಮಂದಿ ಜೀವನ್ಮರಣ ಹೋರಾಡುತ್ತಿರುವ ಘಟನೆ ಗುಜರಾತ್ ರಾಜ್ಯದ ಬೋತದ್ ಜಿಲ್ಲೆಯಲ್ಲಿ ನಡೆದಿದೆ.
ಬೋತದ್ ಜಿಲ್ಲೆಯಲ್ಲಿ ಭಾನುವಾರ ಕಲಬೆರಕೆ ಮದ್ಯ ಸೇವನೆ ಮಾಡಿದ್ದ ಸ್ಥಳಿಯರಿಗೆ ಸೋಮವಾರ ಬೆಳಗಿನ ವೇಳೆಗೆ ಅರೋಗ್ಯ ಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ಕುಟುಂಬ ಸದಸ್ಯರು ಅವರನ್ನು ಹತ್ತಿರದ ಭಾವನಗರ, ಬೋತದ್ ಮತ್ತು ಬರ್ವಾಲಾ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಏಕಕಾಲಕ್ಕೆ ಅಪಾರ ಸಂಖ್ಯೆಯ ಜನ ಸ್ಥಳೀಯ ಆಸ್ಪತ್ರೆಗೆ ದಾಖಲಾದಾಗ ವಿಷಯ ಬೆಳಕಿಗೆ ಬಂದಿದೆ. ಎಲ್ಲರೂ ಒಂದೇ ರೀತಿಯ ಮದ್ಯ ಸೇವಿಸಿದ್ದರಿಂದ ಈ ಪರಿಸ್ಥಿತಿ ಉಂಟಾಗಿದೆ ಎಂಬುದನ್ನು ಅಧಿಕಾರಿಗಳು ತನಿಖೆಯ ವೇಳೆ ಕಂಡುಕೊಂಡಿದ್ದಾರೆ.
ಸ್ಥಳೀಯ ವ್ಯಾಪಾರಿಯೊಬ್ಬರು ಈ ಮದ್ಯವನ್ನು ಅಕ್ರಮವಾಗಿ ತಯಾರಿಸಿ ಮಾರಾಟ ಮಾಡುತ್ತಿರುವುದಾಗಿ ಪೊಲೀಸರು ಅಂದಾಜಿಸಿದ್ದಾತೆ. ಸಂತ್ರಸ್ತರು ಸೇವಿಸಿದ ಆಲ್ಕೋಹಾಲ್‌ನಲ್ಲಿ ಹೆಚ್ಚಿನ ಮೀಥೈಲ್ ಅಂಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಲಬೆರಕೆ ಮದ್ಯ ತಯಾರಿಸುತ್ತಿದ್ದ ಮೂವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಅಧಿಕಾರಿಗಳು ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದಾರೆ.








