ದುಡಿಯುವ ಕಾರ್ಯಕರ್ತರನ್ನು ಗುರುತಿಸೋದು ಜೆಡಿಎಸ್‍ನಲ್ಲಿ ಮಾತ್ರ : ಹೆಚ್ ಡಿಕೆ
ಕಲಬುರಗಿ : ದುಡಿಯುವ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಜೆಡಿಎಸ್‍ನಲ್ಲಿ ಮಾತ್ರವಿದೆ. ಕಾರ್ಯಕರ್ತರು ಸರಿಯಿಲ್ಲ ಎಂಬ ಮಾತನ್ನ ಮಾಧ್ಯಮಗಳು ತಿರುಚಿವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಎಂಬ ಕಾಂಗ್ರೆಸ್ ಆರೋಪಕ್ಕೆ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿದ ಹೆಚ್ ಡಿ ಕುಮಾರಸ್ವಾಮಿ, ಕೋವಿಡ್ ಸಂದರ್ಭದಲ್ಲಿ ನಾನು ಸರ್ಕಾರಕ್ಕೆ ಸಹಕಾರ ನೀಡಿದ್ದೇನೆ.
ಜನರು ಸಂಕಷ್ಟದಲ್ಲಿರೋ ಕಾರಣ ಆಡಳಿತ ಪಕ್ಷಕ್ಕೆ ಸಹಕಾರ ಕೊಡಲೇಬೇಕಿರುವುದು ನನ್ನ ಜವಾಬ್ದಾರಿಯಾಗಿತ್ತು. ಇದನ್ನ ಬಿಟ್ಟು ನಾನು ಬಿಜೆಪಿ ಬಗ್ಗೆ ಯಾವತ್ತು ಸಾಫ್ಟ್ ಕಾರ್ನರ್ ಆಗೋದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಇದೇ ವೇಳೆ ಜೆಡಿಎಸ್ ಕಾರ್ಯಕರ್ತರು ಸರಿಲ್ಲ ಎಂಬ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಹೆಚ್ ಡಿಕೆ, ಕಾರ್ಯಕರ್ತರು ಸರಿಯಿಲ್ಲ ಎಂಬ ಮಾತನ್ನ ಮಾಧ್ಯಮಗಳು ತಿರುಚಿವೆ. ಯಾವುದೋ ಸಂದರ್ಭಕ್ಕೆ ಅನುಗುಣವಾಗಿ ಹೇಳಿದ್ದೇನೆ ಎಂದರು.
ಅಲ್ಲದೆ ನಾನು ನಮ್ಮ ಕಾರ್ಯಕರ್ತರಿಗೆ ಅವಮಾನ ಮಾಡಿಲ್ಲ. ದುಡಿಯುವ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಜೆಡಿಎಸ್‍ನಲ್ಲಿ ಮಾತ್ರವಿದೆ ಎಂದು ತಿಳಿಸಿದರು.









