ನಾನೇಕೆ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗ್ಲಿ , ನನಗೆ ಮಾಡೋಕೆ ಸಿಕ್ಕಾಪಟ್ಟೆ ಕೆಲಸಗಳಿವೆ – ಹೆಚ್ ಡಿಕೆ
ನಾನು ಯಾರ ಬಳಿಯೂ ಜಗಳಕ್ಕೆ ಹೋಗಿಲ್ಲ. ಸಿದ್ದರಾಮಯ್ಯ ಅವರೇ ನನ್ನ ಬಳಿ ಜಗಳಕ್ಕೆ ಬರುತ್ತಾರೆ. ನನಗೆ ಮಾಡಲು ಸಿಕ್ಕಾಪಟ್ಟೆ ಕೆಲಸಗಳಿವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ. ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳಲು ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ನನಗೇನು ಮಾಡಲು ಬೇರೆ ಕೆಲಸ ಇಲ್ವಾ..? ನಾನೇಕೆ ಅವರ ಉಸಾಬರಿಗೆ ಹೋಗಲಿ..? ಅಂತಿಮವಾಗಿ ನಾನು ಜಗಳಕ್ಕೆ ಮಂಗಳಾರತಿ ಮಾಡುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದಿದ್ದಾರೆ.
ಮೋದಿ ಬಗ್ಗೆ ಮಾತನಾಡುವ ಯೋಗ್ಯತೆ ಕಾಂಗ್ರೆಸ್ ನವರಿಗೆ ಇಲ್ಲ – ಈಶ್ವರಪ್ಪ
ಇದೇ ವೇಳೆ ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ತಮ್ಮನ್ನು ಪದೇ ಪದೇ ಟೀಕಿಸುತ್ತಿರುವ ಬಗ್ಗೆ ಮಾತನಾಡಿದ ಅವರು ಜಮೀರ್ ಅಹ್ಮದ್ ಈಗ ನನ್ನ ಸ್ನೇಹಿತ ಅಲ್ಲ. ಹಳೆಯ ಸ್ನೇಹಿತ ಅವರ ಬಗ್ಗೆ ನಾನು ಮಾತಾಡುವುದಿಲ್ಲ. ಮೇಲೆ ದೇವರಿದ್ದಾನೆ. ಅವನೇ ನೋಡಿಕೊಳ್ಳುತ್ತಾನೆ ಎಂದಿದ್ದಾರೆ.