ಮೊದ್ಲು ಒಕ್ಕಲಿಗ ಪ್ರಾಧಿಕಾರ ಮಾಡಬೇಕಿತ್ತು : ಹೆಚ್ ಡಿಕೆ
ಬೆಂಗಳೂರು : ಅಭಿವೃದ್ಧಿಗೆ ಹಣ ಸಂಗ್ರಹ ಆಗ್ತಿರೋದು ಬೆಂಗಳೂರಿನ ಒಕ್ಕಲಿಗ ಸಮಾಜದಿಂದ.
ಹಾಗೆ ನೋಡಿದರೆ ಮೊದಲು ಒಕ್ಕಲಿಗ ಸಮುದಾಯಕ್ಕೆ ಪ್ರಾಧಿಕಾರ ಮಾಡಬೇಕಿತ್ತು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಮರಾಠ ಪ್ರಾಧಿಕಾರ ರಚನೆ ಬಗ್ಗೆ ಬೆಂಗಳೂರು ಹೊರವಲಯ ಬ್ಯಾಡರಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಪ್ರಾಧಿಕಾರ ರಚನೆಗಳನ್ನು ಮಾಡೋದು ತಾತ್ಕಾಲಿಕ ಅಷ್ಟೇ,
ಇದು ಸಣ್ಣ ಮಟ್ಟದ ರಾಜಕಾರಣ. ಹಾಗೆ ನೋಡಿದ್ರೆ ಮೊದ್ಲು ಒಕ್ಕಲಿಗ ಪ್ರಾಧಿಕಾರ ಮಾಡಬೇಕಿತ್ತು.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ರೈತ ಸಂಗಾತಿಗಳ ಕಷ್ಟ ಕಾರ್ಪಣ್ಯ ಆಲಿಸಲು ದಯವಿಟ್ಟು ಬನ್ನಿ
ಬೆಂಗಳೂರಿಗಾಗಿ ಒಕ್ಕಲಿಗ ಸಮುದಾಯದ ತ್ಯಾಗ ಸೇವೆ ದೊಡ್ಡದು. ಆದ್ರೆ, ಮತಕ್ಕೋಸ್ಕರ ಪ್ರಾಧಿಕಾರ ರಚನೆ ಸರಿಯಲ್ಲ.
ಮರಾಠ ನಿಗಮಕ್ಕೆ ನನ್ನ ವಿರೋಧ ಇಲ್ಲ. ನಿಗಮ ರಚನೆ ಬಗ್ಗೆ ಸರ್ಕಾರಸರಿಯಾದ ಮಾಹಿತಿ ಕೊಟ್ಟಿದ್ದಿದ್ರೆ ಗೊಂದಲ ಆಗ್ತಿರಲಿಲ್ಲ ಎಂದು ವಿವರಿಸಿದರು.
ಇನ್ನು ಒಕ್ಕಲಿಗ ಸಮಾಜದಿಂದ ಅಭಿವೃದ್ಧಿಗೆ ಹಣ ಸಂಗ್ರಹ ಆಗುತ್ತಿದೆ. ಒಕ್ಕಲಿಗ ಸಮುದಾಯ ತಮ್ಮ ಕೃಷಿ ಭೂಮಿ ಬಿಟ್ಟು ಕೊಟ್ಟು ಕಾರ್ಮಿಕರಾಗಿದ್ದಾರೆ.
ಬೆಂಗಳೂರು ನಗರಕ್ಕೆ ಒಕ್ಕಲಿಗ ಸಮುದಾಯದವರು ಭೂಮಿ ತ್ಯಾಗ ಮಾಡಿದ್ದಾರೆ. ಹಾಗಾಗಿ ಮೊದಲು ಒಕ್ಕಲಿಕ ಪ್ರಾಧಿಕಾರ ರಚನೆ ಆಗಬೇಕಿತ್ತು ಎಂದು ಅಭಿಪ್ರಾಯಪಟ್ಟ ಕುಮಾರಸ್ವಾಮಿ, ನಿಗಮ ಪ್ರಾಧಿಕಾರಗಳಿಂದ ಯಾವುದೇ ಪ್ರಯೋಜನ ಇಲ್ಲ ಎಂದು ತಿಳಿಸಿದರು.
ಮರಾಠರು ನಮ್ಮ ಅಣ್ಣ-ತಮ್ಮಂದಿರು : ಗೋವಿಂದ ಕಾರಜೋಳ
ನಿಗಮ, ಪ್ರಾಧಿಕಾರ ರಚನೆ ವಿಚಾರದಲ್ಲಿ ಸರ್ಕಾರದಿಂದ ಗೊಂದಲ ಸೃಷ್ಟಿಯಾಗಿದೆ.
ಭಾಷೆ ಭಾಷೆಗಳ ನಡುವೆ ಸಂಘರ್ಷ ಶುರುವಾಗಿದೆ. ಸರ್ಕಾರ ಕನ್ನಡಪರ ಸಂಘಟನೆಗಳನ್ನು ದಬ್ಬಾಳಿಕೆಯಿಂದ ಹದ್ದುಬಸ್ತಿನಲ್ಲಿ ತರಲು ಪ್ರಯತ್ನಿಸುತ್ತಿದೆ.
ಕನ್ನಡಪರ ಸಂಘಟನೆಗಳ ಜೊತೆ ಪ್ರಾಧಿಕಾರದ ರಚನೆಯ ಉದ್ದೇಶ ಮನವರಿಕೆ ಮಾಡಿಕೊಡಬೇಕಿತ್ತು ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಸಲಹೆ ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









