ಹೈಟಿಯ ನೂತನ ಪ್ರಧಾನಿಯಾಗಿ ಏರಿಯಲ್  ಹೆನ್ರಿ ಅಧಿಕಾರ ಸ್ವೀಕಾರ..!

1 min read

ಹೈಟಿಯ ನೂತನ ಪ್ರಧಾನಿಯಾಗಿ ಏರಿಯಲ್  ಹೆನ್ರಿ ಅಧಿಕಾರ ಸ್ವೀಕಾರ..!

ಹೈಟಿಯಲ್ಲಿ ಇತ್ತೀಚೆಗೆ ಅಧ್ಯಕ್ಷರ ಬರ್ಬರ ಕೊಲೆಯಾದ ನಂತರ ಇದೀಗ ನೂತನ ಪ್ರಧಾನಿಯಾಗಿ ಏರಿಯಲ್ ಹೆನ್ರಿ ಅಧಿಕಾರ ಸ್ವೀಕರಿಸಿದ್ಧಾರೆ. ವೃತ್ತಿಯಿಂದ ನರರೋಗ ಶಸ್ತ್ರಚಿಕಿತ್ಸಕರಾಗಿರುವ ಹೆನ್ರಿ, ಈ ಮೊದಲು ಸಂಪುಟ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿ ಅವರು, ನಾವು ಮಾಡಬೇಕಾದ ಕಾರ್ಯಗಳು ಬಹಳ ಕಠಿಣ ಹಾಗೂ ಸಂಕೀರ್ಣವಾದವುಗಳಾಗಿವೆ. ಎಲ್ಲರೂ ಒಗ್ಗಟ್ಟಿನಿಂದ ಈ ಸವಾಲುಗಳನ್ನು ಎದುರಿಸೋಣ ಎಂದಿದ್ದಾರೆ.

ಅಲ್ಲದೇ ಮಾತುಕತೆ, ಚರ್ಚೆಯಲ್ಲಿ ನನಗೆ ನಂಬಿಕೆ ಇದೆ. ಹೀಗಾಗಿ ಯಾವುದೇ ವಿಷಯ ಕುರಿತು ನಿರ್ಧಾರ ಕೈಗೊಳ್ಳುವ ಮೊದಲು ಒಮ್ಮತ ಮೂಡಿಸಿ, ಮುಂದುವರಿಯುವೆ’ ಎಂದೂ ಹೇಳಿದರು. ಇದೇ ವೇಳೆ ಜೊವೆನೆಲ್‌ ಮೊಯಿಸ್‌ ಅವರ ಹತ್ಯೆ ಕುರಿತು ನಡೆಯುತ್ತಿರುವ ತನಿಖೆಗೆ ಮಿತ್ರ ರಾಷ್ಟ್ರಗಳ ಸಹಕಾರ ಕೋರುವೆ. ಈ ದುಷ್ಕೃತ್ಯಕ್ಕೆ ಕಾರಣರಾದವರಿಗೆ ಶಿಕ್ಷಿಸದೇ ಬಿಡುವುದಿಲ್ಲ ಎಂದರು. ಅಧ್ಯಕ್ಷರಾಗಿದ್ದ ಜೊವೆನೆಲ್‌ ಮೊಯಿಸ್‌ ಅವರನ್ನು ಜುಲೈ 7ರಂದು ಮುಂಜಾನೆ ಅವರ ಮನೆಯಲ್ಲಿಯೇ ಸಶಸ್ತ್ರ ವ್ಯಕ್ತಿಗಳ ಗುಂಪು ಹತ್ಯೆ ಮಾಡಿತ್ತು. ನಂತರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ, ಕ್ಲಾಡ್‌ ಜೋಸೆಫ್ ಅವರು ಹಂಗಾಮಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಆಮ್ಲಜನಕದ ಕೊರತೆಯಿಂದಾಗಿ ಸಾವುಗಳು ಸಂಭವಿಸಿಲ್ಲ ಎಂದ ಕೇಂದ್ರದ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿ..!

ಭೂಮಿಯಲ್ಲೇ ಅತ್ಯಂತ ಅಪಾಯಕಾರಿ ಪ್ರಾಣಿ ಯಾವುದು ಗೊತ್ತಾ..? ಇವುಗಳಿಂದಲೇ ಪರಿಸರ ಮಾಲಿನ್ಯ ಹೆಚ್ಚು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd