HAL ನಲ್ಲಿದೆ ಅಪ್ರೆಂಟಿಸ್ ಹುದ್ದೆ
ಅಪ್ರೆಂಟಿಸ್ ಶಿಪ್ ಹುದ್ದೆಗಳಿ ಅರ್ಜಿ ಆಹ್ವಾನ
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಅವಕಾಶ
ಅರ್ಜಿ ಸಲ್ಲಿಕೆಗೆ ಕಡೆಯ ದಿ. ಸೆಪ್ಟೆಂಬರ್ 9
ಅರ್ಜಿ ಸಲ್ಲಿಸಲು ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ತಾಂತ್ರಿಕ ತರಭೇತಿ ಸಂಸ್ಥೆಯಲ್ಲಿ ವಿವಿಧ ಅಪ್ರೆಂಟಿಸ್ ಶಿಪ್ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ.
ಹೆಚ್ ಎ ಎಲ್ ನಲ್ಲಿ ಸಿಎನ್ ಸಿ ಪ್ರೋಗ್ರಾಮರ್, ಆಪರೇಟರ್, ಮೆಷಿನಿಸ್ಟ್, ಎಲೆಕ್ಟ್ರಿಷಿಯನ್ ಮತ್ತು ವೆಲ್ಡರ್ ಟ್ರೇಡ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್ 9.

ಈ ಅಪ್ರೆಂಟಿಸ್ ಶಿಪ್ ಅವಧಿ 15 ರಿಂದ 24 ತಿಂಗಳ ಕಾಲ ಪೂರ್ಣಾವಧಿ ಇರಲಿದ್ದು, ಹೆಚ್ ಎಎಲ್ ನ ಸಾಮಾಜಿಕ ಹೊಣೆಗಾರಿಕೆ ಕೌಶಲ್ಯಾಭಿವೃದ್ಧಿ ಚಾಲನೆ ಅನ್ವಯ ಹುದ್ದೆಗಳ ನೇಮಕಾತಿ ಜರುಗಲಿದೆ.
ಒಟ್ಟು 120 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಾರ್ಯ ನಿರ್ವಹಣೆಯ ಸ್ಥಳ ಬೆಂಗಳೂರು ಆಗಿದೆ.
ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಅಭ್ಯರ್ಥಿಗಳು ಕನಿಷ್ಟ 15 ರಿಂದ ಗರಿಷ್ಠ 18 ವರ್ಷದೊಳಗೆ ಇರಬೇಕು. ಟಿಕ್ನಿಕಲ್ ಟ್ರೈನಿಂಗ್ ಇನ್ಸಿಟ್ಯೂಷನ್, ಹಿಂದೂಸ್ತಾನ್ ಏರೋನಾಟಿಕ್ ಲಿಮಿಟೆಡ್ , ವಿಮಾನಪುರ ಅಂಜೆ, ಬೆಂಗಳೂರು 560017ಗೆ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕು.
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ ಸೆಪ್ಟೆಂಬರ್ 9.