ಟೆಲ್ ಅವಿವ್: ಹಮಾಸ್ ಉಗ್ರರು (Hamas Militants) 199 ಜನ ಇಸ್ರೇಲಿಯರನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ ಎಂದು ಇಸ್ರೇಲಿ (Israel) ಮಿಲಿಟರಿ ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು, 155 ಜನರನ್ನು ಹಮಾಸ್ ಒತ್ತೆಯಾಳಾಗಿ ಇಟ್ಟುಕೊಂಡಿದೆ ಎಂದು ಆರೋಪಿಸಿದ್ದರು. ಉಗ್ರರು ಇಸ್ರೇಲ್ ಗಡಿ ನುಸುಳಿ ಜನರ ಹತ್ಯೆ ಮಾಡುವುದಲ್ಲದೇ ಮಹಿಳೆಯರು ಮಕ್ಕಳು ಸೇರಿದಂತೆ ಇಸ್ರೇಲಿ ಪ್ರಜೆಗಳನ್ನು (Citizens) ಒತ್ತೆಯಾಳಾಗಿ ಇಟ್ಟುಕೊಂಡಿದೆ ಎಂದು ಆರೋಪಿಸಿದ್ದಾರೆ.
ಯುದ್ಧ ಆರಂಭವಾದ ನಂತರದಿಂದ ಗುಂಡು, ಇರಿದು ಮತ್ತು ಸುಟ್ಟು 1,400 ಕ್ಕೂ ಅಧಿಕ ಜನರನ್ನು ಹಮಾಸ್ ಹತ್ಯೆ ಎರಡೂ ಕಡೆಗಳಲ್ಲಿ ಒಟ್ಟು 3,000 ಜೀವ ಬಲಿಯಾಗಿವೆ. ಯುದ್ಧ ಉಲ್ಬಣಗೊಳ್ಳುತ್ತಿದ್ದಂತೆ ಇಸ್ರೇಲಿ ಸೈನ್ಯವು ಗಾಜಾ ಪಟ್ಟಿಯ (Gaza Stripe) ಉತ್ತರದಲ್ಲಿ 1.1 ಮಿಲಿಯನ್ ಪ್ಯಾಲೆಸ್ತೀನಿಯರಿಗೆ ಸ್ಥಳಾಂತರವಾಗುವಂತೆ ಆದೇಶ ನೀಡಿತ್ತು.